ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actor Darshan: ವಿವಾಹ ವಾರ್ಷಿಕೋತ್ಸವ; ವಿಜಯಲಕ್ಷ್ಮಿ ದರ್ಶನ್‌ ಭಾವುಕ!

Actor Darshan: ನಟ ದರ್ಶನ್​ ಇನ್ನೂ ಒಂದು ವರ್ಷದ ಕಾಲ ಜೈಲಿನಿಂದ ಹೊರಗೆ ಬರುವ ಸಾಧ್ಯತೆಯೇ ಇಲ್ಲ ಎನ್ನಲಾಗಿದ್ದು, 1 ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಜಯಲಕ್ಷ್ಮಿ ಅವರು ಕೂಡಾ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿ ಗೆ(Vijayalakshmi Darshan) ಇಂದು (ಮೇ 19) 23ನೇ ವಿವಾಹ ವಾರ್ಷಿಕೋತ್ಸವದ (Marriage) ಸಂಭ್ರಮ. ಹೀಗಿರುವಾಗ ಗಂಡನ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಟ ದರ್ಶನ್‌

ದರ್ಶನ್ ಜಾಮೀನು ಅರ್ಜಿ (Bail Plea) ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿದೆ. ಹೀಗಿರುವಾಗಲೇ ನಟ ದರ್ಶನ್​ ಇನ್ನೂ ಒಂದು ವರ್ಷದ ಕಾಲ ಜೈಲಿನಿಂದ ಹೊರಗೆ ಬರುವ ಸಾಧ್ಯತೆಯೇ ಇಲ್ಲ ಎನ್ನಲಾಗಿದ್ದು, 1 ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಜಯಲಕ್ಷ್ಮಿ ಅವರು ಕೂಡಾ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿ ಗೆ(Vijayalakshmi Darshan) ಇಂದು (ಮೇ 19) 23ನೇ ವಿವಾಹ ವಾರ್ಷಿಕೋತ್ಸವದ (Marriage) ಸಂಭ್ರಮ. ಹೀಗಿರುವಾಗ ಗಂಡನ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಪ್ರತಿಯೊಂದು ಬಿರುಗಾಳಿ ಮತ್ತು ಪ್ರತಿಯೊಂದು ಮೌನದ ಮೂಲಕ ನಾನು ನಿಮ್ಮ ಕೈ ಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಿದಾಗಲೂ, ನನ್ನ ಹೃದಯ ಯಾವಾಗಲೂ ನಿಮ್ಮನ್ನು ಆಯ್ಕೆ ಮಾಡುತ್ತದೆ...

ಮತ್ತು ಇಡೀ ಜಗತ್ತು ನಿಮ್ಮ ವಿರುದ್ಧ ನಿಂತರೂ ಸಹ ನಿಮ್ಮ ಜೊತೆ ನಿಲ್ಲುವೆ ಎಂದು ದರ್ಶನ್‌ ಅವರ ಕೈ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಇನ್ನೊಂದರಲ್ಲಿ ಇಬ್ಬರು ಸೆಲ್ಫಿ ಪೋಸ್‌ ನೀಡಿದ್ದಾರೆ.

ಇದನ್ನೂ ಓದಿ: Keerthy Suresh: ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಹಿನ್ನಡೆ ಹಾಗೂ ಪ್ರಸ್ತುತ ಪರಿಸ್ಥಿತಿಯಿಂದ ದರ್ಶನ್ ಅವರು ಮಾನಸಿಕವಾಗಿ ಕುಗ್ಗಿದ್ದಾರೆ, ಅವರಿಗೆ ಧೈರ್ಯ ತುಂಬುವ ಅಗತ್ಯವಿದೆ. ಜೈಲಿನ ನಿಯಮಾವಳಿಗಳ ಅನ್ವಯವೇ ಪತಿಯನ್ನು ಹತ್ತಿರದಿಂದ ಭೇಟಿ ಮಾಡಲು ಮತ್ತು ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ನಮಗೆ ಅವಕಾಶ ಮಾಡಿಕೊಡಿ" ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.

ದರ್ಶನ್ ದಂಪತಿಯ ಈ ಮನವಿಗೆ ಜೈಲು ಅಧಿಕಾರಿಗಳು ಸ್ಪಂದಿಸಿ, ಇಂದಿನ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಮುಖಾಮುಖಿ ಭೇಟಿಯ ವಿಶೇಷ ಅನುಮತಿ ನೀಡುತ್ತಾರಾ ಅನ್ನೋದು ಕುತೂಹಲ.

ನಟ ದರ್ಶನ್ ಅವರನ್ನು ಹೊರಗೆ ಕರೆತರಲು ಅವರ ಪತ್ನಿ ವಿಜಯಲಕ್ಷ್ಮಿ ಮಾಡಿದ ಪ್ರಯತ್ನಗಳು ಹಿನ್ನಡೆಯಾಗಿದೆ. ಇದಕ್ಕೂ ಮುಂಚೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ದರ್ಶನ್ ಫೋಟೋ ಹಾಕಿ, ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: Mahakali Movie: ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

ದರ್ಶನ್‌ ಅವರ ಅಭಿನಯದ ‘ಲಂಕೇಶ್ ಪತ್ರಿಕೆ’ ಸಿನಿಮಾದ ಆ ಮೋಡದಿಂದ.. ಹಾಡಿನ ಕೊನೆಯ ಸಾಲುಗಳನ್ನ ಫೋಟೋ ಜೊತೆಗೆ ಜೋಡಿಸಿದ್ದಾರೆ. ಇದು ಮರೆಯದ ಹಾಡು.. ಮೌನಗಳೇ ಸಾಕ್ಷಿಗಳು.. ಇದು ಮುಗಿಯದ ನೆನಪು..ವಿರಹಗಳೇ ಗುರುತುಗಳು..” ಎಂದು ವಿಜಯಲಕ್ಷ್ಮಿ ಪೋಸ್ಟ್‌ ಹಂಚಿಕೊಂಡಿದ್ದರು.

Yashaswi Devadiga

View all posts by this author