Mahakali Movie: ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್ ನಟ ಎಂಟ್ರಿ!
Mahakali Movie: ಮಹಾಕಾಳಿ ಚಿತ್ರವನ್ನ ಮಹಿಳಾ ಸೂಪರ್ ಹೀರೋ ಚಿತ್ರ ಅಂತಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಈ ಸಿನಿಮಾದ ಸ್ಟೋರಿಯನ್ನ ಪ್ರಶಾಂತ್ ವರ್ಮಾ ಬರೆದಿದ್ದಾರೆ. ಹನುಮಾನ್ ಚಿತ್ರದ ಮೂಲಕವೇ ಹೆಸರಾದ ಪ್ರಶಾಂತ್ ವರ್ಮಾ, ಈ ಒಂದು ಚಿತ್ರದ ಕಥೆ ಬರೆದು ಡೈರೆಕ್ಷನ್ ಹೊಣೆಯನ್ನ ಪೂಜಾ ಅಪರ್ಣಾ ಕೊಲ್ಲೂರು ಅವರಿಗೆ ಕೊಟ್ಟಿದ್ದಾರೆ.
ಮಹಾಕಾಳಿ ಸಿನಿಮಾ -
ಹನುಮಾನ್ ಚಿತ್ರ (Hanuman Movie) ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ವರ್ಮಾ (Prashanth Varma) ಬರೆದ ಮಹಾಕಾಳಿ ಸಿನಿಮಾಗೆ ಬಾಲಿವುಡ್ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಉತ್ತರ ಭಾರತದಲ್ಲಿ ರೋಹಿತ್ ಗೆ (Rohit) ತಮ್ಮದೇ ಆದ ಅಭಿಮಾನಿ ಬಳಗವಿದೆ. ಅದರಲ್ಲಿಯೂ ಯುವ ಸಮೂಹ ಅವರ ಅಭಿನಯವನ್ನು ಹೆಚ್ಚು ಇಷ್ಟಪಡುತ್ತಾರೆ.
ಹೀಗಾಗಿ ಮಹಾಕಾಳಿ ಸ್ಟ್ರೆಂಥ್ ಮತ್ತಷ್ಟು ಹೆಚ್ಚಾದಂತೆ ಆಗಿದೆ. ಈ ಚಿತ್ರದಲ್ಲಿ ಮಹಾಕಾಳಿ ಪಾತ್ರವನ್ನ ಭೂಮಿ ಶೆಟ್ಟಿ ಮಾಡುತ್ತಿದ್ದಾರೆ. ಅಕ್ಷಯ್ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಇವರಿಬ್ಬರ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಒಳ್ಳೆ ಮೆಚ್ಚುಗೆ ಸಿಕ್ಕಿದೆ. ʼ
ಇದನ್ನೂ ಓದಿ: Bhagyalakshmi Kannada Serial: ಅಂತ್ಯ ಹಾಡ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್? ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ?
ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾದ ಮಹಾಕಾಳಿ ಸಿನಿಮಾವನ್ನು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್‌ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಅವರು ಅದ್ಧೂರಿ ನಿರ್ಮಾಣ ಮಾಡುತ್ತಿದೆ.
ಡಿಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್ಡಿ ಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್ಪೂ ಜಾ ಅಪರ್ಣಾ ಕೊಲ್ಲೂರು ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!
ಮಹಾಕಾಳಿ ಚಿತ್ರದಲ್ಲಿ ಕಾಳಿ ಕಥೇನೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಹಾಕಾಳಿಯನ್ನ ತುಂಬಾನೆ ಆರಾಧಿಸುತ್ತಾರೆ. ಇಲ್ಲಿರೋ ಈ ಕಾಳಿಯ ಹಿನ್ನೆಲೆ ಮತ್ತು ನೆಲದ ಸಂಸ್ಕೃತಿಯನ್ನ ಸಿನಿಮಾ ಚೌಕಟ್ಟಿನಲ್ಲಿಯೇ ಇಲ್ಲಿ ಕಟ್ಟಿಕೊಡಲಾಗುತ್ತಿದೆ.