ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗೋನ್-ಅಪ್' ಪ್ಯಾನ್ ಇಂಡಿಯಾದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಕಿಯಾರಾ ಅಡ್ವಾಣಿ (Kiara Advani) ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿನ ಕೆಲ ಇಂಟಿಮೆಂಟ್ ದೃಶ್ಯಗಳನ್ನು ಕತ್ತರಿ ಹಾಕಬೇಕೆಂದು ನಟಿ ಕಿಯಾರಾ ಮನವಿ ಮಾಡಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ನಟಿ ಈ ಊಹಾಪೋಹಗಳಿಗೆ ಫುಲ್‌ಸ್ಟಾಪ್ (Full stop) ಇಟ್ಟಿದ್ದಾರೆ.
'ಟಾಕ್ಸಿಕ್, ಮಲ್ಟಿಸ್ಟಾರ್ಸ್ ಒಳಗೊಂಡಿರುವ ಸಿನಿಮಾ. ತಮ್ಮ ಮುಂಬರುವ ಚಿತ್ರ ಟಾಕ್ಸಿಕ್‌ನ ಸಹನಟ ಯಶ್ ಜೊತೆಗಿನ ಆತ್ಮೀಯ ದೃಶ್ಯಗಳನ್ನು ಕಡಿಮೆ ಮಾಡುವಂತೆ ನಿರ್ಮಾಪಕರನ್ನು ಕೇಳಿಕೊಂಡಿದ್ದಾರೆ ಎಂಬ ವರದಿಗಳ ವಿರುದ್ಧ ನಟಿ ಕಿಯಾರಾ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Katrina Kaif: ತಾಯಿಯಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕತ್ರಿನಾ!
ಕಿಯಾರಾ ಪೋಸ್ಟ್ ಏನು?
ಕಿಯಾರಾ ಸಾಮಾಜಿಕ ಮಾಧ್ಯಮದ ಮೂಲಕ ಆ ಹೇಳಿಕೆಗಳನ್ನು ನೇರವಾಗಿ ತಿರಸ್ಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸುದ್ದಿ ವರದಿಯನ್ನು ಹಂಚಿಕೊಂಡ ಅವರು, "ಸಂಪೂರ್ಣ ಅಸಂಬದ್ಧ" ಎಂದು ಬರೆದಿದ್ದಾರೆ.
ತಮ್ಮ ಪುತ್ರಿ ಸರಾಯಾ ಮಲ್ಲೋತ್ರಾ ಅವರ ಜನನದ ನಂತರ ಕಿಯಾರಾ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಚಿತ್ರದ ಕೆಲವು 'ಅಶ್ಲೀಲ ದೃಶ್ಯಗಳ' ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ವರದಿಯಾಗಿತ್ತು.
ಆದರೆ ಈ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಇದೀಗ, ನಟಿ ಕಿಯಾರಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಈ ಹೇಳಿಕೆ ಕಾಣಿಸಿಕೊಂಡಿದ್ದು , ಕಿಯಾರಾ ಯಶ್ ಮತ್ತು ಮೋಹನ್ ದಾಸ್ ಅವರನ್ನು ಸಂಪರ್ಕಿಸಿ ಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಹಾಕುವಂತೆ ವಿನಂತಿಸಿದ್ದಾರೆ ಎಂದು ಹೇಳಿದ್ದರು ಎಂದು ವರದಿ ಮಾಡಿತ್ತು.

ಕಿಯಾರಾ ಅಡ್ವಾಣಿ ಅವರು ಈಗಾಗಲೇ ಯಶ್ ಜೊತೆಗಿನ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣಕ್ಕೂ ಮೊದಲು ನಿರ್ದೇಶಕರು ಈ ದೃಶ್ಯಗಳು ನಟಿಯ ಕಂಫರ್ಟ್ ಜೋನ್ ಒಳಗೇ ಇರುತ್ತವೆ ಎಂದು ಭರವಸೆ ನೀಡಿದ್ದರು. ಆದರೆ, ಚಿತ್ರೀಕರಣ ಮುಗಿದ ನಂತರ ಔಟ್‌ಪುಟ್ ನೋಡಿದ ಕಿಯಾರಾ ಅವರಿಗೆ ಆ ದೃಶ್ಯಗಳು ತೆರೆಯ ಮೇಲೆ ಅತಿ ಎನಿಸಿದೆಯಂತೆ. ಈ ಕಾರಣದಿಂದ ಅವರು ದೃಶ್ಯಗಳನ್ನು ಎಡಿಟ್ ಮಾಡಲು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವನ್ನು ಆರಂಭದಲ್ಲಿ ಜೂನ್ 4, 2026 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಈಗ ಅದನ್ನು ಮುಂದೂಡಲಾಗಿದೆ . ಹೊಸ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: Naagin 7: ಇದೊಂದು ಕಾರಣಕ್ಕೆ ಸಖತ್ ಟ್ರೋಲ್ ಆಯ್ತು ನಾಗಿನ್ ಸೀರಿಯಲ್!
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಕೂಡ ನಟಿಸಿದ್ದಾರೆ.