ಸಾಮಾನ್ಯ ವ್ಯಕ್ತಿಯಿಂದ 'ಪ್ಯಾನ್ ವರ್ಲ್ಡ್ ಸ್ಟಾರ್' ವರೆಗಿನ ನಟ ರಾಕಿಂಗ್ ಸ್ಟಾರ್ ಯಶ್ ಸಾಧನೆಯ ಹಾದಿ ಹೇಗಿತ್ತು ಗೊತ್ತಾ?
Yash Birthday: ಭಾರತೀಯ ಸಿನಿಮಾ ರಂಗದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟನೆಂಬ ಖ್ಯಾತಿ ಪಡೆದಿದ್ದಾರೆ. ಒಂದು ಕಾಲದಲ್ಲಿ ಧಾರವಾಹಿ ಯೊಂದಕ್ಕೆ ಪೋಷಕ ನಟರಾಗಿದ್ದ ಇವರು ಈಗ ಭಾರತೀಯ ಸಿನಿಮಾ ರಂಗದಲ್ಲೇ ಬಹುಬೇಡಿಕೆಯ ನಟರಾಗಿದ್ದು ಇವರ ಬದುಕು ಅನೇಕರಿಗೆ ಸ್ಫೂರ್ತಿಯಾಗಿದೆ. ಇಂದು (ಜನವರಿ 8) ಅವರು ತಮ್ಮ 40ನೇ ಹುಟ್ಟುಹಬ್ಬವಿದ್ದು ಎಲ್ಲೆಡೆ ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ. ಇದೇ ದಿನದಂದು ಯಶ್ ಸಿನಿ ಜರ್ನಿ ಮತ್ತು ಟಾಕ್ಸಿಕ್ ಸಿನಿಮಾದ ಕೆಲವು ಇಂಟ್ರಸ್ಟಿಂಗ್ ಮಾಹಿತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ -
ಸ್ಯಾಂಡಲ್ ವುಡ್ ನಿಂದ ಆರಂಭವಾದ ಇವರ ಸಿನಿಮಾ ಜರ್ನಿ ಈಗ ಬಾಲಿವುಡ್ ವರೆಗೂ ವಿಸ್ತರಿ ಸಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನು ಇವರು ಹೊಂದಿದ್ದಾರೆ. ಇಂದು (ಜನವರಿ 8) ಅವರು ತಮ್ಮ 40ನೇ ಹುಟ್ಟುಹಬ್ಬವಿದ್ದು ಎಲ್ಲೆಡೆ ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ..
ನಟ ಯಶ್ ಅಭಿನಯದ ಕೆಜಿಎಫ್ ಎರಡು ಚಾಪ್ಟರ್ ಗಳು ರಿಲೀಸ್ ಆದ ಬಳಿಕ ಮತ್ಯಾವ ಸಿನಿಮಾ ಕೂಡ ತೆರೆ ಮೇಲೆ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಅವರ ಅಭಿನಯದ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬಹಳ ಕುತೂಹಲವಿದೆ. ಬಹುದೊಡ್ಡ ತಾರಾಗಣ ಹೊಂದಿದ್ದ ಈ ಸಿನಿಮಾ ಇದೇ ಮಾರ್ಚ್ 19ಕ್ಕೆ ರಿಲೀಸ್ ಆಗಲಿದ್ದು ಯಶ್ ಹುಟ್ಟುಹಬ್ಬವಿದ್ದ ಕಾರಣ ಜನವರಿ 8ರಂದೆ ಟಾಕ್ಸಿಕ್ ಸಿನಿಮಾದ ಟ್ರೇಲರ್ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅವರ ಸಿನಿಮಾ ಜರ್ನಿ , ಬದುಕಿನ ಪಯಣ ಸ್ಫೂರ್ತಿದಾಯಕವಾಗಿದೆ...
ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳ ಮಗನಾಗಿ ಯಶ್ ಅವರು ಹಾಸನದಲ್ಲಿ ಜನಿಸಿದ್ದು ಬಳಿಕ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ನಟ ಯಶ್ ಅವರ ಮೂಲ ಹೆಸರು ನವೀನ್ ಕುಮಾರ್ ಗೌಡ ಎಂದಾಗಿದ್ದು ಸಿನಿಮಾ ರಂಗದಲ್ಲಿ ಸಾಧನೆ ಯಶಸ್ಸಿಗಾಗಿ ಫ್ರೆಶ್ ನೇಮ್ ಇರಲಿ ಎಂಬ ಕಾರಣಕ್ಕೆ ಈ ಹೆಸರನ್ನು ಅವರು ಬದಲಿಸಿಕೊಂಡಿದ್ದಾರೆ. ನಂದಗೋಕುಲ ಧಾರವಾಹಿಯಲ್ಲಿ ಪೋಷಕ ನಟರಾಗಿ ನಟಿಸಿದ್ದರು. ಉತ್ತರಾಯಣ, ಮಳೆಬಿಲ್ಲು, ಪ್ರೀತಿ ಇಲ್ಲದ ಮೇಲೆ , ಸಿಲ್ಲಿ ಲಲ್ಲಿ ಧಾರವಾಹಿಯಲ್ಲಿ ಕೂಡ ಅವರು ಅಭಿನಯಿಸಿದ್ದು ಸಿನಿಮಾ ಅವಕಾಶಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಬಳಿಕ ಜಂಭದ ಹುಡುಗಿ ಸಿನಿಮಾದಲ್ಲಿ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ಮಹಿಳಾ ಪ್ರಧಾನ ಕಥೆಯಾದ ಕಾರಣ ಯಶ್ ಅವರ ಅಭಿನಯ ಅಷ್ಟಾಗಿ ಹೈಲೈಟ್ ಆಗಲಿಲ್ಲ. ಅದಾದ ಬಳಿಕ ರಾಕಿ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದರೂ ಈ ಸಿನಿಮಾ ಕೂಡ ಅಷ್ಟಾಗಿ ಯಶಸ್ಸು ಪಡೆದಿರಲಿಲ್ಲ. ಮೊಗ್ಗಿನ ಮನಸ್ಸು ಸಿನಿಮಾ ದಲ್ಲಿ ನಾಯಕನಟನಾಗಿ ಅಭಿನಯಿಸುವ ಮೂಲಕ ನಟ ಯಶ್ ಅವರು ಜನಪ್ರಿಯರಾದರು.
ಕಿರಾತಕ, ಗೂಗ್ಲಿ, ಗಜಕೇಸರಿ, ರಾಜಾಹುಲಿ, ಸಂತು ಸ್ಟ್ರೈಟ್ ಫಾರ್ವರ್ಡ್, ರಾಮಾಚಾರಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಾಯಕನಟನಾಗಿ ಇವರು ಮಿಂಚಿದ್ದಾರೆ. ಆದರೆ ಕೆಜಿಎಫ್ ಸಿನಿಮಾ ಮಾತ್ರ ಇವರ ಸಿನಿಮಾ ಜರ್ಮನಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಸಿನಿಮಾವಾಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ವಿ ನಟರಾಗಿ ಗುರುತಿಸುವಂತೆ ಮಾಡಿದೆ. ಸದ್ಯ ಅವರು ಟಾಕ್ಸಿಕ್ ಹಾಗೂ ರಾಮಾಯಣಂ ಸಿನಿಮಾದ ಶೂಟಿಂಗ್ ಕೆಲಸ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ.
ಇವರ ಅಭಿನಯದ ಮೊಗ್ಗಿನ ಮನಸ್ಸು ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಸೌತ್ ನಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಡ್ರಾಮಾ, ಗೂಗ್ಲಿ ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಸೌತ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಸಿಕ್ಕಿದೆ. ಕೆಜಿಎಫ್ ಸಿನಿಮಾಕ್ಕೆ ಫಿಲ್ಮ್ ಬೀಟ್ ಹಾಗೂ ಜೀ ಕನ್ನಡ ಹೆಮ್ಮೆಯ ಕನ್ನಡಿಗ ಅವಾರ್ಡ್ ಸಿಕ್ಕಿದೆ. ಯಶ್ ಅವರು ತಮ್ಮ ಗೆಳತಿ , ನಟಿ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ 2016 ರಲ್ಲಿ ವಿವಾಹವಾಗಿದ್ದು ಈ ದಂಪತಿಗಳಿಗೆ ಐರಾ ಮತ್ತು ಯರ್ಥವಾ ಎಂಬ ಹೆಸರಿನ ಮಕ್ಕಳಿದ್ದಾರೆ.
ಸದ್ಯ ಅವರ ಅಭಿನಯದ ಟಾಕ್ಸಿಕ್ ರಿಲೀಸ್ ಆಗಲಿದ್ದು ಈಗಾಗಲೇ ಪ್ರಚಾರ ಕಾರ್ಯ ಕೂಡ ಬರಿದಿಂದ ಸಾಗುತ್ತಿದೆ. ಸಿನಿಮಾದ ಪಾತ್ರ ವರ್ಗಗಳ ಬಗ್ಗೆ ಒಂದೊಂದೆ ಮಾಹಿತಿ ಹೊರ ಬೀಳುತ್ತಿದ್ದು ಯಶ್ ಪಾತ್ರದ ಸಣ್ಣ ಜಲಕ್ ಟ್ರೇಲರ್ ನಲ್ಲಿ ತಿಳಿದು ಬಂದಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ದೀಪಾವಳಿಯ ದಿನದಂದು ಇವರ ಅಭಿನಯದ ರಾಮಾಯಣ ಸಿನಿಮಾ ಕೂಡ ರಿಲೀಸ್ ಆಗಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ನಟ ಯಶ್ ಅವರು ರಾವಣನಾಗಿ ತೆರೆ ಮೇಲೆ ಮಿಂಚಲಿದ್ದು ಈ ಸಲ ಅವರ ಅಭಿಮಾನಿಗಳಿಗೆ ಈ ಎರಡು ಸಿನಿಮಾ ದೊಡ್ಡ ಮನೋರಂಜನೆಯನ್ನು ನೀಡಲಿದೆ.