ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಿಚ್ಚನ ಅಭಿಮಾನಿಗಳಿಗೆ ಗುಡ್‌ ನ್ಯೂಸ್;‌ ಒಮ್ಮೆಲೇ 5 ಸಿನಿಮಾಗಳ ಭರ್ಜರಿ ಲೈನ್‌ಅಪ್, ನಿರ್ದೇಶನಕ್ಕೆ ಮರಳಿದ ಸುದೀಪ್!

ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಒಂದು ಬಿಗ್‌ ಅಪ್ಡೇಟ್‌ ಸಿಕ್ಕಿದೆ. ಅವರೀಗ ಒಟ್ಟೊಟ್ಟಿಗೆ 5 ಸಿನಿಮಾಗಳ ಭರ್ಜರಿ ಲೈನ್‌ಅಪ್ ಸಿದ್ಧಪಡಿಸಿಕೊಂಡು, ಸಂಚಲನ ಮೂಡಿಸಿದ್ದಾರೆ. 'ಮಾರ್ಕ್' ಚಿತ್ರದ ಬಳಿಕ ಬ್ರೇಕ್‌ ತೆಗೆದುಕೊಂಡಿದ್ದ ಸುದೀಪ್‌, 'ಬಿಲ್ಲ ರಂಗ ಬಾಷಾ' ಚಿತ್ರದ ಶೂಟಿಂಗ್‌ ಜೊತೆಗೆ ಈ ವರ್ಷವೇ 4 ಹೊಸ ಚಿತ್ರಗಳನ್ನು ಘೋಷಿಸಲಿದ್ದಾರೆ.

'ಮಾರ್ಕ್' ಸಿನಿಮಾ ತೆರೆಕಂಡು ಆಗಲೇ 5 ತಿಂಗಳಾಗಿವೆ. ಅದರ ನಂತರ ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಹೆಜ್ಜೆಯ ಏನೊಂದು ಮಾಹಿತಿ ಬಿಟ್ಟುಕೊಟ್ಟಿಲ್ಲ. ಯಾವುದೇ ಹೊಸ ಸಿನಿಮಾಗಳ ಅಧಿಕೃತ ಪ್ರಕಟಣೆ ಇಲ್ಲದೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಆದರೆ, ಸುದೀಪ್ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಬಿಗ್ ಬಜೆಟ್ ಸಿನಿಮಾಗಳ ಲೈನ್‌ಅಪ್ ಒಂದನ್ನು ಸಿದ್ಧಪಡಿಸುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಕೊಟ್ಟ ಮಾತಿಗೆ ಬದ್ಧರಾದ ಕಿಚ್ಚ

ಈ ಹಿಂದೆ ತಮ್ಮ ವೃತ್ತಿಜೀವನದ ಕಾರ್ಯತಂತ್ರದ ಬದಲಾವಣೆಯ ಬಗ್ಗೆ ಮಾತನಾಡಿದ್ದ ಸುದೀಪ್, ಅಭಿಮಾನಿಗಳಿಗೆ ನಿರಂತರವಾಗಿ ಮನರಂಜನೆ ನೀಡಲು ಪ್ರತಿ 18 ತಿಂಗಳಿಗೊಮ್ಮೆ ಕನಿಷ್ಠ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ, ಸದ್ಯಕ್ಕೆ ಯಾವುದೇ ಅಧಿಕೃತ ಅಪ್‌ಡೇಟ್‌ಗಳು ಸಿಗದಿದ್ದರೂ, ಸುದೀಪ್ ಅವರ ಕೈಯಲ್ಲಿರುವ ಮುಂಬರುವ ಚಿತ್ರಗಳ ಲಿಸ್ಟ್‌ ಈಗ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್‌ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!

ಜೂನ್‌ನಿಂದ ‘ಬಿಲ್ಲ ರಂಗ ಬಾಷಾ’ ಶೂಟಿಂಗ್

ಕಿಚ್ಚ ಸುದೀಪ್ ಅವರ ಮುಂದಿನ ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಎಂದರೆ, ಅದು ನಿರ್ದೇಶಕ ಅನೂಪ್ ಭಂಡಾರಿ ಜೊತೆಗಿನ 'ಬಿಲ್ಲ ರಂಗ ಬಾಷಾ' (BRB). ಕ್ರಿ.ಶ. 2209ರ ಭವಿಷ್ಯದ ಕಥಾಹಂದರ ಹೊಂದಿರುವ ಈ ಸೈನ್ಸ್‌ ಫಿಕ್ಷನ್-ಆಕ್ಷನ್ ಚಿತ್ರವನ್ನು ಬೃಹತ್ ಕ್ಯಾನ್ವಾಸ್‌ನಲ್ಲಿ ನಿರ್ಮಿಸಲಾಗುತ್ತಿದೆ. 'ಮಾರ್ಕ್' ಚಿತ್ರದ ಶೂಟಿಂಗ್‌ಗೆ ಹೋಗುವ ಮುನ್ನವೇ ಸುದೀಪ್ ಇದರ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದರು. ಈಗಾಗಲೇ ಬಿಡುಗಡೆಯಾಗಿರುವ ಇದರ ಟೀಸರ್ ಚಿತ್ರದ ಮೇಲಿನ ಹೈಪ್ ಅನ್ನು ಹೆಚ್ಚಿಸಿದೆ. ಸದ್ಯದ ಮಾಹಿತಿ ಪ್ರಕಾರ, ಸುದೀಪ್ ಜೂನ್ ತಿಂಗಳಿನಿಂದ 'ಬಿಲ್ಲ ರಂಗ ಬಾಷಾ' ಚಿತ್ರದ 2ನೇ ಹಂತದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರಂತೆ!

ಈ ವರ್ಷ 4 ಹೊಸ ಸಿನಿಮಾಗಳ ಘೋಷಣೆ

'ಬಿಲ್ಲ ರಂಗ ಬಾಷಾ' ಚಿತ್ರದ ಹೊರತಾಗಿ, ಈ ವರ್ಷ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಸಪ್ರೈಸ್ ಕಾದಿದೆ. ಹೌದು, ನಟ ಸುದೀಪ್ ಅವರು ಈ ವರ್ಷವೇ ಬ್ಯಾಕ್-ಟು-ಬ್ಯಾಕ್ 4 ಹೊಸ ಸಿನಿಮಾಗಳನ್ನು ಅನೌನ್ಸ್‌ ಮಾಡಲು ಸಜ್ಜಾಗಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಈ ನಾಲ್ಕೂ ಸಿನಿಮಾಗಳು ಪ್ರಸ್ತುತ ಸ್ಕ್ರಿಪ್ಟಿಂಗ್ ಮತ್ತು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಪ್ರತಿಯೊಂದು ಚಿತ್ರವೂ ಸಂಪೂರ್ಣವಾಗಿ ವಿಭಿನ್ನ ಶೈಲಿ ಹಾಗೂ ವಿಭಿನ್ನ ಕಥಾಹಂದರವನ್ನು ಹೊಂದಿರಲಿವೆಯಂತೆ.

Sanvi Sudeep: ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಮಗಳು ಸಾನ್ವಿ!

12 ವರ್ಷಗಳ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿರುವ ಕಿಚ್ಚ

ಈ ನಾಲ್ಕು ಮುಂಬರುವ ಚಿತ್ರಗಳ ಪೈಕಿ, ಒಂದನ್ನು ಸುದೀಪ್ ಅವರೇ ನಿರ್ದೇಶನ ಮಾಡಲಿರುವುದು ವಿಶೇಷ. ನಟನೆಯ ಜೊತೆಗೆ ನಿರ್ದೇಶಕರೂ ಆಗಿರುವ ಸುದೀಪ್, ಕೊನೆಯದಾಗಿ 2014 ರಲ್ಲಿ ತೆರೆಕಂಡ ಸೂಪರ್ ಹಿಟ್ 'ಮಾಣಿಕ್ಯ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅದಾದ ನಂತರ ಅವರು ಮತ್ತೆ ನಿರ್ದೇಶನದತ್ತ ಮುಖ ಮಾಡಿರಲಿಲ್ಲ. ಅವರ ನಿರ್ದೇಶನದ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದರು. ಆ ಸುದೀರ್ಘ ಕಾಯುವಿಕೆಗೆ ಕೊನೆಗೂ ಬ್ರೇಕ್‌ ಬೀಳುವ ಸಮಯ ಹತ್ತಿರ ಬಂದಿದೆ ಎಂಬುದು ಫ್ಯಾನ್ಸ್‌ ಖುಷಿಗೆ ಕಾರಣವಾಗಿದೆ.

ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಳು ಹಾಗೂ ಅವರ ಜೊತೆ ಕೈಜೋಡಿಸಲಿರುವ ಸ್ಟಾರ್ ತಂತ್ರಜ್ಞರ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಸುದೀಪ್ ಮತ್ತು ಅವರ ತಂಡದಿಂದ ಈ ಎಲ್ಲಾ 5 ಚಿತ್ರಗಳ ಕುರಿತ ಅಧಿಕೃತ ಪ್ರಕಟಣೆ ಹೊರಬೀಳಲಿದೆ.