#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್‌ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!

Bigg Boss Kannada 11: ‘ಬಿಗ್ ಬಾಸ್’ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದಾರೆ. ಜನವರಿ 25 ಹಾಗೂ 26 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ‘ನಾನು ಹೋಸ್ಟ್ ಆಗಿ ನಡೆಸಿಕೊಡುವ ಕಡೆಯ ಫಿನಾಲೆ ಇದು’ ಎಂದು ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

11 ವರ್ಷ ಬಿಗ್​ಬಾಸ್ ಪಯಣ ಅದ್ಭುತ; ಕೊನೆಯ ನಿರೂಪಣೆ ಬಗ್ಗೆ ಕಿಚ್ಚ ಭಾವನಾತ್ಮಕ ಪೋಸ್ಟ್

ಕಿಚ್ಚ ಸುದೀಪ್

Profile Sushmitha Jain Jan 20, 2025 12:12 PM

ಬೆಂಗಳೂರು, ಜ.20: ಕಿಚ್ಚ ಸುದೀಪ್​ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿರೋದು ಗೊತ್ತೇ ಇದೆ. ಬಿಗ್‌ಬಾಸ್‌ 11 ನೇ ಸೀಸನ್‌ ನನ್ನ ಕೊನೆಯ ಬಿಬಿ ಶೋ ಎಂದಿರೋ ಸುದೀಪ್(Kiccha Sudeep), ಇದೀಗ ಮತ್ತೇ ಅದನ್ನು ಅಧಿಕೃತಗೊಳಿಸಿದ್ದು, ಕಲರ್ಸ್ ಕನ್ನಡಕ್ಕೆ ಧನ್ಯವಾದ ಹೇಳುವ ಮೂಲಕ 'ಬಿಗ್ ಬಾಸ್ ಕನ್ನಡ' ಶೋಗೆ ವಿದಾಯ ಹೇಳಿದ್ದಾರೆ.

ಹೌದು ಕನ್ನಡ ಕಿರುತೆರೆ ವೀಕ್ಷಕರಿಗೆ 'ಬಿಗ್ ಬಾಸ್‌' ರಿಯಾಲಿಟಿ ಪರಿಚಯವಾಗಿದ್ದೇ ಸುದೀಪ್ ಅವರ ನಿರೂಪಣೆಯಲ್ಲಿ. ಒಂದಲ್ಲಾ ಎರಡಲ್ಲಾ ಸತತ 11ನೇ ಸೀಸನ್ ಅನ್ನೂ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಇದೀಗ ಅವರು 'ಬಿಗ್ ಬಾಸ್'ನಿಂದ ದೂರ ಸರಿಯುವ ಸಮಯ ಬಂದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಪಟ್ಟುಕೊಂಡಿದ್ದಾರೆ. 'ನಿಮ್ಮನ್ನು ಹೊರತುಪಡಿಸಿ, ಬೇರೆ ಯಾರನ್ನೂ ಆ ಜಾಗದಲ್ಲಿ ನೋಡಲು ನಾವು ಬಯಸೋದಿಲ್ಲ' ಎಂದಿದ್ದಾರೆ.



ಟ್ವೀಟ್ ಮಾಡಿದ 'ಕಿಚ್ಚ' ಸುದೀಪ್

ಈ ಮಧ್ಯೆ ಮತ್ತೆ ಸುದೀಪ್ ತಾನು ಇನ್ನು ಮುಂದೆ ಈ ಶೋನ ಹೋಸ್ಟ್ ಆಗಿರುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ಇದೇ ನನ್ನ ಕೊನೆ ಬಿಗ್​ಬಾಸ್ ಶೋ ಎಂದು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಾರಂಭದಿಂದ ಇಲ್ಲಿಯವರೆಗೆ ಬಿಗ್​ಬಾಸ್ ಜರ್ನಿಯನ್ನು ಎಂಜಾಯ್ ಮಾಡಿದ್ದೇನೆ. ಶೋನಲ್ಲಿ ಪ್ರೀತಿ, ಅಭಿಮಾನ ತೋರಿಸಿದ್ದಕ್ಕೆ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ಶನಿವಾರ, ಭಾನುವಾರ ನಡೆಯುವ ಗ್ರ್ಯಾಂಡ್ ಫಿನಾಲೆ ನಾನು ನಡೆಸಿಕೊಡುವ ಕೊನೆಯ ಶೋ ಆಗಿರಲಿದೆ. ಎಲ್ಲರನ್ನು ಚೆನ್ನಾಗಿ ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಮರೆಯಲಾಗದ ಜರ್ನಿಯಾಗಿದೆ. ನನಗೆ ಸಾಧ್ಯವಾದಷ್ಟು ಎಲ್ಲವನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದೇನೆಂದು ತಿಳಿಯುತ್ತೇನೆ. ಇಂತಹ ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್​ ಕನ್ನಡದವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ, ಗೌರವವಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಅಭಿಮಾನಿಗಳಿಗೆ ತೀವ್ರ ಬೇಸರ

ಕಳೆದ 11 ಸೀಸನ್‌ಗಳು ಮತ್ತು ಒಂದು ಒಟಿಟಿ ಸೀಸನ್ ಅನ್ನು ಸುದೀಪ್ ಅವರು ನಿರೂಪಣೆ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳ ಬಿಗ್ ಬಾಸ್‌ನಲ್ಲಿ ನಿರೂಪಕರು ಬದಲಾಗಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಬದಲಾವಣೆ ಆಗಿರಲಿಲ್ಲ. ಕನ್ನಡದಲ್ಲಿ ಬಿಗ್ ಬಾಸ್‌ ಎಂದರೆ ಸುದೀಪ್, ಸುದೀಪ್ ಎಂದರೆ, ಬಿಗ್ ಬಾಸ್ ಎಂಬ ವಾತಾವರಣ ಇತ್ತು. ಆದರೆ ಇದೀಗ ಸುದೀಪ್ ಅವರು ದಿಢೀರ್ ಎಂದು ಘೋಷಣೆ ಮಾಡಿರುವ ಈ ನಿರ್ಧಾರ ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಅಭಿಮಾನಿಗಳು ತೀವ್ರವಾಗಿ ಬೇಸರಗೊಂಡಿದ್ದಾರೆ. "ನೀವು ನಡೆಸಿ ಕೊಡದೆ ಹೋದರೆ ಬಿಗ್ ಬಾಸ್ ರಾಜನಿಲ್ಲದ ರಾಜ್ಯ ಅಣ್ಣಾ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, "ಇದು ನಾವು ನೋಡುವ ಬಿಗ್ ಬಾಸ್‌ನ ಕೊನೆಯ ಸೀಸನ್" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: viral video: ಮಹಾ ಕುಂಭಮೇಳದಲ್ಲೂ ಆರ್‌ಸಿಬಿಯದ್ದೇ ಹವಾ; ಕಪ್‌ ಗೆಲ್ಲಲು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಭಿಮಾನಿ

ಅಲ್ಲದೇ ‘’ಕಿರುತೆರೆ ಕಂಡ ಬೆಸ್ಟ್ ಹೋಸ್ಟ್ ನೀವು’’, ‘’ನಿಮಗೆ ಸರಿಸಾಟಿ ಯಾರೂ ಇಲ್ಲ’’, ‘’ಬಿಗ್ ಬಾಸ್‌’ʼನ ನಾವು ನೋಡ್ತಾ ಇದ್ದಿದ್ದಕ್ಕೆ ಕಾರಣವೇ ನೀವು. ನೀವಿಲ್ಲದೆ ಬಿಗ್ ಬಾಸ್‌ನ ನಾವು ಕಲ್ಪನೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮಿಸ್ ಯೂ ಎ ಲಾಟ್ ಬಾಸ್’’, ‘’ನಿಮ್ಮ ತಾಯಿಯ ಅಚ್ಚುಮೆಚ್ಚಿನ ಶೋನ ನೀವು ಅಷ್ಟು ಸುಲಭವಾಗಿ ಬಿಡೋದಿಲ್ಲ ಅಂತ ನಮಗೂ ಗೊತ್ತು’’ ಅಂತ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

ಇನ್ನು ಈ ಹಿಂದೆ ಕೂಡ ಇದೇ ನನ್ನ ಕೊನೇ ಸೀಸನ್‌ ಎಂದು ತಮ್ಮ ಟಿಟ್ವರ್ ಖಾತೆಯಲ್ಲಿ ಹೇಳಿಕೊಂಡಿದ್ದ ಕಿಚ್ಚ, "10+1 ವರ್ಷಗಳ ಉತ್ತಮ ಪ್ರಯಾಣ ಇದಾಗಿದೆ ಮತ್ತು ನಾನು ಮುಂದೆ ಏನು ಮಾಡಬೇಕೆಂಬುದನ್ನು ಹೇಳಲು ಇದು ಸಮಯವಾಗಿದೆ. ಇದು 'ಬಿಗ್ ಬಾಸ್‌'ನ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಇದಾಗಿರುತ್ತದೆ. ನನ್ನ ಈ ನಿರ್ಧಾರವನ್ನು ನನ್ನ ಕಲರ್ಸ್ ಕನ್ನಡ ವಾಹಿನಿ ಮತ್ತು ಇಷ್ಟು ವರ್ಷಗಳಿಂದ ಬಿಗ್ ಬಾಸ್ ಅನ್ನು ಫಾಲೋ ಮಾಡುತ್ತಿರುವ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ" ಎಂದು ಸುದೀಪ್ ಹೇಳಿದ್ದಾರೆ. ಅಲ್ಲಿಗೆ ಬಿಗ್ ಬಾಸ್ ಕನ್ನಡ ಸೀಸನ್‌ 11ರ ನಂತರ ಸುದೀಪ್ ಈ ವೇದಿಕೆಯಲ್ಲಿ ನಿರೂಪಕರಾಗಿ ಇರುವುದಿಲ್ಲ ಅನ್ನೋದು ಖಚಿತವಾಗಿದೆ.