ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಜೆಟ್‌ 300 ಕೋಟಿ, ಕಲೆಕ್ಷನ್‌ 3 ಸಾವಿರ ಕೋಟಿ! ʻಬಾಹುಬಲಿʼ, ʻಪುಷ್ಪʼ ದಾಖಲೆಗಳನ್ನು ಪುಡಿಗಟ್ಟಿದ ʻಧುರಂಧರ್‌ʼ

Dhurandhar Box Office Record: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸರಣಿಯು ಒಟ್ಟಾರೆಯಾಗಿ 3,019.35 ಕೋಟಿ ರೂಪಾಯಿ ಗಳಿಸುವ ಮೂಲಕ 'ಬಾಹುಬಲಿ' ಮತ್ತು 'ಪುಷ್ಪ' ಚಿತ್ರಗಳ ದಾಖಲೆಯನ್ನು ಪುಡಿಗಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 3 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

3000 ಕೋಟಿ ಕ್ಲಬ್‌ಗೆ ಧುರಂಧರ್ ಎಂಟ್ರಿ: ಬಾಹುಬಲಿ, ಪುಷ್ಪ ದಾಖಲೆಗಳು ಉಡೀಸ್

-

Avinash GR
Avinash GR Apr 14, 2026 7:40 PM

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ʻಧುರಂಧರ್‌ʼ ಸರಣಿಯ ಸಿನಿಮಾಗಳು ಹೊಸ ದಾಖಲೆಯನ್ನು ಬರೆದಿದೆ. ಬಿಡುಗಡೆಯಾದ ನಾಲ್ಕನೇ ವಾರದಲ್ಲೂ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಈ ಚಿತ್ರದ ಎರಡನೇ ಭಾಗವು ಇದೀಗ ಹೊಸ ಇತಿಹಾಸ ಸೃಷ್ಟಿಸಿದೆ. ಎರಡು ಪಾರ್ಟ್‌ಗಳಿಂದ ಈ ಸಿನಿಮಾದ ಒಟ್ಟಾರೆ ಗಳಿಕೆಯು 3 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ್ದು, ಆ ಮೂಲಕ ಬಾಹುಬಲಿ ಮತ್ತು ಪುಷ್ಪ ಸಿನಿಮಾಗಳ ಐತಿಹಾಸಿಕ ಬಾಕ್ಸ್‌ ಆಫೀಸ್‌ ಪುಡಿಯಾಗಿದೆ.

ಬಾಕ್ಸ್‌ ಆಫೀಸ್‌ ಅಂಕಿಅಂಶಗಳ ಪ್ರಕಾರ, ‘ಧುರಂಧರ್’ (2025) ಮತ್ತು ‘ಧುರಂಧರ್: ದಿ ರಿವೆಂಜ್’ (2026) ಚಿತ್ರಗಳು ಒಟ್ಟಾರೆಯಾಗಿ ಜಗತ್ತಿನಾದ್ಯಂತ 3,019.35 ಕೋಟಿ ರೂಪಾಯಿ ಗಳಿಸಿವೆ. ಇದು ʻಬಾಹುಬಲಿʼ ಮತ್ತು ʻಪುಷ್ಪʼ ಸರಣಿಗಳ ಒಟ್ಟು ಗಳಿಕೆಗಿಂತ ಅಧಿಕವಾಗಿದೆ.

20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ʼಪಿಯಾʼ ಸಾಂಗ್‌

ಭಾರತೀಯ ಚಿತ್ರರಂಗದ ಪ್ರಮುಖ ಫ್ರಾಂಚೈಸಿಗಳ ಗಳಿಕೆ ವಿವರ

  1. ಧುರಂಧರ್ ಫ್ರಾಂಚೈಸಿ

ಪಾರ್ಟ್‌ 1 - 1,307.35 ಕೋಟಿ ರೂಪಾಯಿ

ಪಾರ್ಟ್‌ 2 - 1,712 ಕೋಟಿ ರೂಪಾಯಿ

ಒಟ್ಟು ಗಳಿಕೆ - 3,019.35 ಕೋಟಿ ರೂಪಾಯಿ

  1. ಬಾಹುಬಲಿ ಫ್ರಾಂಚೈಸಿ

ಪಾರ್ಟ್‌ 1 - 650 ಕೋಟಿ ರೂಪಾಯಿ

ಪಾರ್ಟ್‌ 2 - 1,788 ಕೋಟಿ ರೂಪಾಯಿ

ಒಟ್ಟು ಗಳಿಕೆ - 2,438 ಕೋಟಿ ರೂಪಾಯಿ

  1. ಪುಷ್ಪ ಫ್ರಾಂಚೈಸಿ

ಪಾರ್ಟ್‌ 1 - 350.10 ಕೋಟಿ ರೂಪಾಯಿ

ಪಾರ್ಟ್‌ 2 - 1,742.10 ಕೋಟಿ ರೂಪಾಯಿ

ಒಟ್ಟು ಗಳಿಕೆ - 2,092.20 ಕೋಟಿ ರೂಪಾಯಿ

- ಈ ಸಾಧನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ಈವರೆಗೆ ಭಾರತದ ಯಾವುದೇ ಫ್ರಾಂಚೈಸಿ ಜಾಗತಿಕವಾಗಿ 3,000 ಕೋಟಿ ರೂಪಾಯಿಗಳ ಗಡಿ ದಾಟಿರಲಿಲ್ಲ. ಆದರೆ ಆ ಸಾಧನೆಯನ್ನು ʻಧುರಂಧರ್ʼ ಮಾಡಿದೆ. ಅಲ್ಲದೆ, ಸರಣಿಯ ಎರಡೂ ಸಿನಿಮಾಗಳು ತಲಾ 1,000 ಕೋಟಿ ರೂಪಾಯಿಗಳ ಕ್ಲಬ್ ಸೇರಿದ ಮೊದಲ ಭಾರತೀಯ ಸಿನಿಮಾ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೂ ʻಧುರಂಧರ್ʼ ಪಾತ್ರವಾಗಿದೆ. ಅಂದಹಾಗೆ, ಧುರಂಧರ್‌ನ ಎರಡೂ ಪಾರ್ಟ್‌ಗಳಿಗೆ ತಗುಲಿರುವ ನಿರ್ಮಾಣ ವೆಚ್ಚ 250-300 ಕೋಟಿ ರೂ. ಎನ್ನಲಾಗಿದೆ. ಆದರೆ ಇದರ ಒಟ್ಟಾರೆ ಕಲೆಕ್ಷನ್‌ 3000 ಕೋಟಿ ರೂ. ದಾಟಿರುವುದು ದಾಖಲೆ ಆಗಿದೆ.

‘ಧುರಂಧರ್: ದಿ ರಿವೆಂಜ್’ ಹೊಸ ದಾಖಲೆ

ಮಾರ್ಚ್‌ 19ರಂದು ತೆರಕಂಡ ‘ಧುರಂಧರ್: ದಿ ರಿವೆಂಜ್’ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಸದ್ದು ಮಾಡಿದೆ. 26 ದಿನಗಳಲ್ಲಿ ವಿದೇಶಿ ಮಾರುಕಟ್ಟೆಯಿಂದ 414.50 ಕೋಟಿ ಹಾಗೂ ಭಾರತದಲ್ಲಿ 1,297.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚೀನಾ ಮತ್ತು ಗಲ್ಫ್ ರಾಷ್ಟ್ರಗಳಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗದಿದ್ದರೂ ಈ ಮಟ್ಟದ ಗಳಿಕೆ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ.

Dhurandhar 2: 1,200 ಕೋಟಿ ರೂ.ಗಳನ್ನು ದಾಟಿದ ಧುರಂಧರ್‌ 2 ಕಲೆಕ್ಷನ್‌!

ಈ ಸಿನಿಮಾದಿಂದಾಗಿ ರಣವೀರ್‌ ಸಿಂಗ್, ನಿರ್ದೇಶಕ ಆದಿತ್ಯ ಧರ್‌, ನಟಿ ಸಾರಾ ಅರ್ಜುನ್‌ ಮುಂತಾದವರಿಗೆ ವೃತ್ತಿ ಬದುಕಿನಲ್ಲಿ ದಾಖಲೆಯ ಗೆಲುವು ಸಿಕ್ಕಂತಾಗಿದೆ.