ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pawan Kalyan: 'ಓಜಿʼ ಯಶಸ್ಸಿನ ಬೆನ್ನಲ್ಲೇ ನಟ ಪವನ್ ಕಲ್ಯಾಣ್ ಹೊಸ ಸಿನಿಮಾ ಘೋಷಣೆ

ಟಾಲಿವುಡ್‌ ನಟ, ರಾಜಕಾರಣಿ ಪವನ್ ಕಲ್ಯಾಣ್ ಸದ್ಯ ʼಓಜಿʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಸೆಪ್ಟೆಂಬರ್ 25ರಂದು ತೆರೆಗೆ ಬಂದಿದ್ದ ಈ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಚಿತ್ರ ಘೋಷಿಸಿದ್ದಾರೆ.

ಪವನ್ ಕಲ್ಯಾಣ್

ಹೈದರಾಬಾದ್‌: ತೆಲುಗು ನಟ ಪವನ್ ಕಲ್ಯಾಣ್ (Pawan Kalyan) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿರುವ ಅವರು ರಾಜಕೀಯಕ್ಕೆ ಧುಮುಕಿದ್ದಾರೆ. ಸದ್ಯ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ಇನ್ನು ಮುಂದೆ ನಟನೆಗೆ ವಿದಾಯ ಹೇಳ್ತಾರೆ, ಒಪ್ಪಿಕೊಂಡ ಚಿತ್ರವನ್ನಷ್ಟೇ ಪೂರ್ಣಗೊಳಿಸುತ್ತಾರೆ ಎನ್ನುವ ವದಂತಿ ಹಬ್ಬಿತ್ತು. ಇದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಇದೀಗ ಅವರು ಹೊಸ ಸಿನಿಮಾ ಒಪ್ಪಿ ಕೊಂಡಿದ್ದು ಶೀಘ್ರವೇ ಚಿತ್ರೀಕರಣ ಕೂಡ ಮುಕ್ತಾಯವಾಗಲಿದೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ʼಉಸ್ತಾದ್ ಭಗತ್ ಸಿಂಗ್' (Ustaad Bhagat Singh) ಎಂಬ ಟೈಟಲ್‌ ಇಡಲಾಗಿದೆ.

ಇತ್ತೀಚೆಗೆ ತೆರೆಕಂಡ ಪವನ್ ಕಲ್ಯಾಣ್ ನಟನೆಯ ʼಓಜಿʼ (OG) ಸಿನಿಮಾ ಸೂಪರ್‌ ಹಿಟ್‌ ಎನಿಸಿಕೊಂಡಿದೆ. ಸೆಪ್ಟೆಂಬರ್ 25ರಂದು ತೆರೆಗೆ ಬಂದ ಈ ಚಿತ್ರ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದಾದ ಬಳಿಕ ಅವರು ಇನ್ನು ಮುಂದೆ ಯಾವ ಸಿನಿಮಾದಲ್ಲೂ ನಟಿಸಲ್ಲ ಎಂಬ ವದಂತಿಗೆ ಇದೀಗ ತೆರೆ ಬಿದ್ದಿದೆ. 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಶೂಟಿಂಗ್‌ ಅನ್ನು ಈಗಾಗಲೇ ಅರ್ಧ ಭಾಗದಷ್ಟು ಪೂರ್ಣಗೊಳಿಸಿದ್ದಾರೆ. ಮುಂದಿನ ವರ್ಷ ತೆರೆಗೆ ಬರಲಿದೆ.

ʼಉಸ್ತಾದ್ ಭಗತ್ ಸಿಂಗ್ʼ ಸಿನಿಮಾಕ್ಕೆ ನಿರ್ಮಾಪಕ ದಿಲ್‌ ರಾಜು (Dil Raju) ಬಂಡವಾಳ ಹೂಡಿದ್ದಾರೆ. ಪವನ್ ಕಲ್ಯಾಣ್ ಈ ಹಿಂದೆ ನಿರ್ಮಾಪಕ ದಿಲ್‌ ರಾಜು ಜತೆ 'ವಕೀಲ್ ಸಾಬ್' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಆ ಚಿತ್ರವೂ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಇವರ ಕಾಂಬಿನೇಷನ್‌ನಲ್ಲಿ ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಅರ್ಧ ಭಾಗದಷ್ಟು ಶೂಟಿಂಗ್ ಪೂರ್ಣಗೊಂಡಿದೆ.

ಇದನ್ನು ಓದಿ:Green Movie: ʼಗ್ರೀನ್ʼ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್

ದಿಲ್ ರಾಜು ಮತ್ತು ರಾಮ್‌ಚರಣ್ ಕಾಂಬಿನೇಷನ್‌ನ 'ಗೇಮ್‌ ಚೇಂಜರ್' ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಬಳಿಕ ತೆರೆಕಂಡ ದಿಲ್ ರಾಜು ನಿರ್ಮಾಣದ 'ಸಂಕ್ರಾಂತಿಕಿ ವಸ್ತುನ್ನಾಂ' ರಿಲೀಸ್ ಆಗಿ ಹೊಸ ದಾಖಲೆ ಬರೆದಿತ್ತು.ಇದೀಗ ಪವನ್ ಕಲ್ಯಾಣ್ ಜತೆಗೆ ಕೈ ಜೋಡಿಸಿದ್ದು, ಯಶಸ್ಸಿನ ಓಟ ಮುಂದುವರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ʼಉಸ್ತಾದ್ ಭಗತ್ ಸಿಂಗ್ʼ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಮಾಡಲು ಯೋಜನೆ ರೂಪಿಸಲಾಗಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಪವನ್‌ ಕಲ್ಯಾಣ್‌ ನಟನೆಯ 'ಹರಿಹರ ವೀರಮಲ್ಲು' ಹೀನಾಯವಾಗಿ ಸೋತ ಕಾರಣ ʼಉಸ್ತಾದ್ ಭಗತ್ ಸಿಂಗ್ʼ ಮೇಲೆ ನಿರೀಕ್ಷೆ ಮೂಡಿದೆ.