ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (86) ಅವರು ಈಚೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಧರ್ಮದ ಪ್ರಕಾರ ಬೆಂಗಳೂರಿನಲ್ಲಿಯೇ ನೆರವೇರಿಸಲಾಯಿತು. ಅದಕ್ಕೂ ಮುನ್ನ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಲಾಯಿತು, ಅಂತಿಮಕ್ರಿಯೆಯಲ್ಲಿ ಕ್ರಿಶ್ಚಿಯನ್ ಸಂಪ್ರಾದಾಯವನ್ನೇ ಪಾಲಿಸಲಾಯಿತು. ಆದರೆ ಇದೀಗ ಈ ಬಗ್ಗೆ ಪ್ರಕಾಶ್ ರಾಜ್‌ಗೆ ಒಂದು ಪ್ರಶ್ನೆ ಎದುರಾಗಿದೆ. ನಾಸ್ತಿಕ ಎಂದು ಹೇಳಿಕೊಳ್ಳುವ ತಾವು, ತಾಯಿ ಅಂತ್ಯಕ್ರಿಯೆಯಲ್ಲಿ ಕ್ರಿಶ್ಚಿಯನ್ ಸಂಪ್ರಾದಾಯ ಪಾಲಿಸಿದ್ದೇಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಮಾಡಲಾಗುತ್ತಿದೆ.
ನಾಸ್ತಿಕ ಎಂದು ಹೇಳಿಕೊಂಡಿರುವ ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ ಅವರು ಹಲವು ಬಾರಿ ತಾವು ನಾಸ್ತಿಕ, ದೇವರನ್ನು ನಂಬುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಂದರ್ಶನಗಳಲ್ಲೂ ಆ ಬಗ್ಗೆ ಮಾತನಾಡಿದ್ದಾರೆ. "ನನಗೆ ದೇವರಲ್ಲಿ ನಂಬಿಕೆ ಇಲ್ಲ, ಅದಕ್ಕೆಲ್ಲಾ ನನ್ನ ಬಳಿ ಸಮಯ ಕೂಡ ಇಲ್ಲ" ಎಂದಿದ್ದ ಪ್ರಕಾಶ್ ರಾಜ್, ಈಗ ತಮ್ಮ ತಾಯಿ ಅಂತ್ಯಕ್ರಿಯೆಗಾಗಿ ಚರ್ಚ್ ಹೋಗಿದ್ದು, ಪ್ರಾರ್ಥನೆ ಮಾಡಿದ್ದು ಸರಿಯೇ? ದೇವರ ಇರುವಿಕೆಯನ್ನು ಪ್ರಶ್ನೆ ಮಾಡುವ ಪ್ರಕಾಶ್ ರಾಜ್, ಹೀಗ್ಯಾಕೆ ಮಾಡಿದರು ಎಂದು ಪ್ರಶ್ನಿಸಿಲಾಗಿತ್ತು. ಅದಕ್ಕೆ ಸೋಶಿಯಲ್ ಮೀಡಿಯಾ ಮೂಲಕವೇ ಪ್ರಕಾಶ್ ರಾಜ್ ಉತ್ತರ ನೀಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ; ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಪ್ರಕಾಶ್ ರಾಜ್ ಪ್ರತಿಕ್ರಿಯೆ ಏನು?
"ಹೌದು, ನಾನು ದೇವರನ್ನು ನಂಬುವುದಿಲ್ಲ.. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬುತ್ತಿದ್ದರು. ಅವರ ನಂಬಿಕೆಯ ಪ್ರಕಾರವೇ ಅವರ ಅಂತ್ಯಕ್ರಿಯೆ ನಡೆಯುವ ಹಕ್ಕನ್ನು ನಿರಾಕರಿಸಲು ನಾನ್ಯಾರು? ನಾವು ಒಬ್ಬರಿಗೊಬ್ಬರು ನೀಡುವ ಕನಿಷ್ಠ ಗೌರವ ಇದಾಗಿದೆ. ದ್ವೇಷವನ್ನು ಹರಡುವ ರಾಕ್ಷಸ ಗುಣದವರಿಗೆ ಇದು ಅರ್ಥವಾಗುತ್ತದೆಯೇ" ಎಂದು ಪ್ರಶ್ನೆ ಮಾಡಿದ್ದಾರೆ ಪ್ರಕಾಶ್ ರಾಜ್.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ ನಟ ಪ್ರಕಾಶ್ ರಾಜ್
ಮಾರ್ಚ್ 30ರಂದು ಸಾವನ್ನಪ್ಪಿದ್ದ ಪ್ರಕಾಶ್ ರಾಜ್ ತಾಯಿ
ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ನರ್ಸ್ ಆಗಿ ಸೇವೆ ಸಲ್ಲಿಸಿದವರು. ಹಾವೇರಿ ಮೂಲದ ಅವರು ಮಾ.30ರಂದು ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. 85 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ಪ್ರಕಾಶ್ ರಾಜ್ ಕುಟುಂಬ, ಬೆಂಗಳೂರಿನಲ್ಲಿ ತಾಯಿ ಸ್ವರ್ಣಲತಾ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿತ್ತು.