ʻಗ್ಲೋಬಲ್ ಸ್ಟಾರ್ʼ ರಾಮ್ ಚರಣ್ ಅಭಿನಯದ ʻಪೆದ್ದಿʼ ಸಿನಿಮಾದ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆಗಲೇ ಎಲ್ಲಾ ಕಡೆ ʻಪೆದ್ದಿʼ ಹವಾ ಜೋರಾಗಿದೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾವನ್ನು ನೋಡಲು ರಾಮ್ ಚರಣ್ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಜೊತೆಗೆ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದ ಭಾಗವಾಗಿರುವುದು ನಿರೀಕ್ಷೆಯನ್ನು ಡಬಲ್ ಮಾಡಿದೆ. ಇದೀಗ ಪೆದ್ದಿ ಚಿತ್ರಕ್ಕಾಗಿ ಕಲಾವಿದರು ಪಡೆದ ಸಂಭಾವನೆ ಎಷ್ಟು ಎಂಬ ಬಗ್ಗೆ ಚರ್ಚೆ ಆಗುತ್ತಿದೆ.
ರಾಮ್ ಚರಣ್‌ಗೆ ಸಿಕ್ಕಿದೆ ದುಬಾರಿ ಸಂಭಾವನೆ
ಮೂಲಗಳ ಪ್ರಕಾರ, ಪೆದ್ದಿ ಸಿನಿಮಾಕ್ಕಾಗಿ ನಟ ರಾಮ್ ಚರಣ್ ಅವರು ಬರೋಬ್ಬರಿ 100 ಕೋಟಿ ರೂಪಾಯಿಗಳಿಗೂ ಅಧಿಕ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ. ‘ಆರ್‌ಆರ್‌ಆರ್’ ಚಿತ್ರದ ನಂತರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಮ್ ಚರಣ್ ಅವರ ಮಾರುಕಟ್ಟೆ ಮೌಲ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಭಾರಿ ಮೊತ್ತವನ್ನು ನೀಡಲು ನಿರ್ಮಾಪಕರು ಮುಂದಾಗಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಹಾಗೆಯೇ, ಉಪ್ಪೆನಾ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸನಾ ಕೂಡ 30 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಎರಡನೇ ಸಿನಿಮಾಗೇ ಇಷ್ಟೊಂದು ಸಂಭಾವನೆಯನ್ನು ಬುಚ್ಚಿಬಾಬು ತೆಗೆದುಕೊಂಡಿರುವುದು ವಿಶೇಷವೇ ಸರಿ.
ಶಿವಣ್ಣನಿಗೆ ಸಿಕ್ಕಿದ್ದೆಷ್ಟು ಕೋಟಿ?
ಮೂಲಗಳ ಪ್ರಕಾರ, ಪೆದ್ದಿ ಚಿತ್ರದ ನಾಯಕಿ ಜಾನ್ವಿ ಕಪೂರ್‌ಗೆ 7 ರಿಂದ 8 ಕೋಟಿ ರೂಪಾಯಿ ಹಣವನ್ನು ಸಂಭಾವನೆಯಾಗಿ ನೀಡಿದ್ದರೆ, ಗೌರ್ನಾಯ್ಡು ಎಂಬ ಪಾತ್ರ ಮಾಡಿರುವ ಶಿವರಾಜ್‌ಕುಮಾರ್‌ಗೆ 4-5 ಕೋಟಿ ರೂ. ಹಣವನ್ನು ನೀಡಲಾಗಿದೆಯಂತೆ. ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು 12 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರೆ, ಜಗಪತಿ ಬಾಬುಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಿಲಾಗಿದೆಯಂತೆ. ದಿವ್ಯೆಂದು ಶರ್ಮಾಗೆ 4 ಕೋಟಿ ರೂ., ಬೊಮನ್ ಇರಾನಿಗೆ 1.50 ಕೋಟಿ ರೂ. ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.
ಇನ್ನುಳಿದ ಪೋಷಕ ನಟರು ಹಾಗೂ ತಾಂತ್ರಿಕ ವರ್ಗದ ಸಂಭಾವನೆಗಳನ್ನೆಲ್ಲಾ ಒಟ್ಟುಗೂಡಿಸಿದರೆ ಸುಮಾರು 35 ರಿಂದ 40 ಕೋಟಿ ರೂಪಾಯಿಗಳಷ್ಟು ಹಣ ಇದಕ್ಕೇ ಮೀಸಲಾಗಿದೆ ಎಂಬುದು ಮೂಲಗಳ ಮಾಹಿತಿ. ಅಲ್ಲಿಗೆ ಸಿನಿಮಾದ ಸಂಭಾವನೆ ವಿಚಾರವಾಗಿಯೇ ಸುಮಾರು 180-200 ಕೋಟಿ ರೂ. ಹಣ ಖರ್ಚಾಗಿರುವ ಮಾಹಿತಿ ಇದೆ.
ʻಪೆದ್ದಿʼ ಸಿನಿಮಾವು ಗ್ರಾಮೀಣ ಕ್ರೀಡೆಗಳು, ಕುಸ್ತಿ ಮತ್ತು ಕ್ರಿಕೆಟ್ ಅನ್ನು ಒಳಗೊಂಡಿರುವ ಭಾವುಕ ಕಥಾಹಂದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಟೀಸರ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿವೆ. ಮುಖ್ಯವಾಗಿ ರಾಮ್ ಚರಣ್ ಅವರ ರಗಡ್ ಮಾಸ್ ಲುಕ್ ಅಭಿಮಾನಿಗಳನ್ನು ಸಖತ್ ಆಕರ್ಷಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಪೆದ್ದಿ’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಹೊಸ ದಾಖಲೆಗಳನ್ನು ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಜೂನ್ 4 ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.