Peddi Movie: ಲಕ್ಷಾಂತರ ಜನರ ಎದುರು ದೊಡ್ಡ ಎಡವಟ್ಟು ಮಾಡಿದ ನಟ ರಾಮ್ ಚರಣ್! ಕೊನೆಗೆ ಜಸ್‌ಪ್ರೀತ್ ಬುಮ್ರಾ ಬಳಿ ಕ್ಷಮೆ ಕೇಳಿದ್ದೇಕೆ?
ನಟ ರಾಮ್ ಚರಣ್ ಭೋಪಾಲ್‌ನಲ್ಲಿ ನಡೆದ ತಮ್ಮ 'ಪೆದ್ದಿ' ಚಿತ್ರದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಜಸ್‌ಪ್ರೀತ್ ಬುಮ್ರಾ ಅವರನ್ನು ಹೊಗಳುವ ಭರದಲ್ಲಿ, ಅವರು ಅದ್ಭುತವಾಗಿ ಫುಟ್‌ಬಾಲ್ ಆಡುತ್ತಾರೆ ಎಂದು ಕ್ರೀಡೆಯನ್ನೇ ಅದಲುಬದಲು ಮಾಡಿ ಮಾತನಾಡಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.
-
ನಟ ರಾಮ್ ಚರಣ್ ಅವರು ತಮ್ಮ 'ಪೆದ್ದಿ' (Peddi) ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಭಾರತದ ಸ್ಟಾರ್ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಹೊಗಳುವ ಭರದಲ್ಲಿ, ಕ್ರಿಕೆಟ್ ಮತ್ತು ಫುಟ್‌ಬಾಲ್ ಆಟಗಳನ್ನು ಅದಲುಬದಲು ಮಾಡಿ ಮಾತನಾಡಿದ್ದಾರೆ. ಇದೀಗ ಆ ವಿಡಿಯೋ ಭಾರಿ ವೈರಲ್ ಆಗಿದೆ. ಭೋಪಾಲ್‌ನಲ್ಲಿ ನಡೆದ ಈ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿರುವ ನಟ ರಾಮ್ ಚರಣ್, "ಕಾರ್ಯಕ್ರಮದ ಉತ್ಸಾಹ ಮತ್ತು ಜನರ ಗದ್ದಲದ ನಡುವೆ ನಡೆದ ಮಾನವ ಸಹಜ ತಪ್ಪು ಇದಾಗಿದೆ" ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್
ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರೊಂದಿಗೆ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ನಟಿ ಜಾನ್ವಿ ಕಪೂರ್ ಮತ್ತು ದಿವ್ಯೇಂದು ಶರ್ಮಾ ಭಾಗವಹಿಸಿದ್ದರು. ವೇದಿಕೆಯ ಮೇಲಿನ ಸಂವಾದದ ವೇಳೆ, ರಾಮ್ ಚರಣ್ ಅವರಿಗೆ ಭಾರತೀಯ ಕ್ರಿಕೆಟಿಗರನ್ನು ಕೆಲವು ಪದಗಳಲ್ಲಿ ವರ್ಣಿಸಲು ಕೇಳಲಾಯಿತು. ಹಲವು ಆಟಗಾರರ ಬಗ್ಗೆ ಅವರು ಆಡಿದ ಮಾತುಗಳು ಗಮನ ಸೆಳೆದರೂ, ಬುಮ್ರಾ ಬಗ್ಗೆ ಹೇಳಿದ ಮಾತು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಅಷ್ಟಕ್ಕೂ ವೇದಿಕೆ ಮೇಲೆ ನಡೆದಿದ್ದೇನು?
ಕ್ರಿಕೆಟಿಗರ ಬಗ್ಗೆ ಮಾತನಾಡಿದ ರಾಮ್ ಚರಣ್, ಸಚಿನ್ ತೆಂಡೂಲ್ಕರ್ ಅವರ ಜರ್ನಿಯನ್ನು "ಸುದೀರ್ಘ ಮತ್ತು ಪೌರಾಣಿಕ" ಎಂದರು. ಎಂ.ಎಸ್. ಧೋನಿಯನ್ನು "ಶಾಂತ ಮತ್ತು ಕೂಲ್" ಎಂದು ಕರೆದರೆ, ರೋಹಿತ್ ಶರ್ಮಾ "ಎಲ್ಲರ ಪ್ರೀತಿಯ ಮನುಷ್ಯ" ಎಂದರು. ಇನ್ನು ವಿರಾಟ್ ಕೊಹ್ಲಿ ಬಗ್ಗೆ ಕೇವಲ ಒಂದೇ ಪದದಲ್ಲಿ "ಫೈರ್" (ಬೆಂಕಿ) ಎಂದು ಬಣ್ಣಿಸಿದರು.
ಆದರೆ, ಜಸ್‌ಪ್ರೀತ್ ಬುಮ್ರಾ ಅವರ ಬಗ್ಗೆ ಮಾತನಾಡುವಾಗ ಕ್ರೀಡೆಗಳ ಹೆಸರನ್ನೇ ಅದಲುಬದಲು ಮಾಡಿಕೊಂಡರು. ಬುಮ್ರಾ ಅವರು ಅದ್ಭುತವಾಗಿ ಫುಟ್‌ಬಾಲ್ ಆಡುತ್ತಾರೆ ವೇದಿಕೆ ಮೇಲೆ ಮಾತನಾಡಿದರು. "ಜಸ್‌ಪ್ರೀತ್ ಬುಮ್ರಾ ಜೀ, ನಾನು ನಿಮ್ಮ ಅತಿ ದೊಡ್ಡ ಅಭಿಮಾನಿ. ನನಗೆ ಫುಟ್‌ಬಾಲ್ ಎಂದರೆ ತುಂಬಾ ಇಷ್ಟ ಮತ್ತು ನೀವು ಫುಟ್‌ಬಾಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೀರಿ. ಲವ್ ಯೂ ಸರ್.." ಎಂದು ರಾಮ್ ಚರಣ್ ವೇದಿಕೆ ಮೇಲೆ ಹೇಳಿದರು.
Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್ ಫಿದಾ!
ತಮ್ಮ ಈ ಎಡವಟ್ಟಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ರಾಮ್ ಚರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಕಾರ್ಯಕ್ರಮದ ಗಡಿಬಿಡಿಯಲ್ಲಿ ಈ ತಪ್ಪು ನಡೆದಿದೆ ಎಂದು ಹೇಳಿರುವ ಅವರು, ಜಸ್‌ಪ್ರಿತ್ ಬುಮ್ರಾ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಮತ್ತು ಅವರು ಭಾರತ ಹೆಮ್ಮೆ ಪಡುವಂತೆ ಆಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ರಾಮ್ ಚರಣ್ ಟ್ವೀಟ್‌ನಲ್ಲಿ ಏನಿದೆ?
"ಉಫ್.. ನನಗೆ ಕೆಲವೊಮ್ಮೆ ಹೆಸರುಗಳು ಮತ್ತು ವಿಷಯಗಳು ಮರೆತುಹೋಗುತ್ತವೆ. ನನ್ನ ಈ ಎಡವಟ್ಟಿಗೆ ಜಸ್‌ಪ್ರೀತ್ ಬುಮ್ರಾ ಜೀ ಅವರಲ್ಲಿ ಕ್ಷಮೆ ಕೇಳುತ್ತೇನೆ. ಅಷ್ಟೊಂದು ಜನಸ್ತೋಮ ಮತ್ತು ಉತ್ಸಾಹದ ನಡುವೆ ನಡೆದ ಸಣ್ಣ ಮನುಷ್ಯ ಸಹಜ ತಪ್ಪಿದು. ನಾನು ನಿಮ್ಮ ಆಟದ ದೊಡ್ಡ ಫ್ಯಾನ್ ಮತ್ತು ನಿಮ್ಮನ್ನು ಗೌರವಿಸುತ್ತೇನೆ. ನೀವು ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಬೆದರಿಸುವಾಗ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ" ಎಂದು ರಾಮ್ ಚರಣ್ ಹೇಳಿದ್ದಾರೆ. ಈ ಹಿಂದೆಯೇ ಒಮ್ಮೆ ನಿರ್ದೇಶಕ ರಾಜಮೌಳಿ ಅವರು, "ಚರಣ್‌ಗೆ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಅವರಿಗೆ ಮರೆಗುಳಿತನ ಜಾಸ್ತಿ" ಎಂದು ಕಾಲೆಳೆದಿದ್ದರು.
ಪೆದ್ದಿ ಇವೆಂಟ್‌ನಲ್ಲಿ ರಾಮ್ ಚರಣ್ ಎಡವಟ್ಟು!
#RamCharan Gets Confused Between Sunil Chhetri and Jasprit Bumrah 😄#JaspritBumrah - I am your biggest fan. I love football, and you've taken it to greater heights. Love you, sir. ❤️#PEDDI pic.twitter.com/8EU3TRn7Z7
— Movies4u Official (@Movies4u_Officl) May 23, 2026
ಅದೇ ಇವೆಂಟ್‌ನಲ್ಲಿ ಮತ್ತೊಂದು ಮಿಸ್ಟೇಕ್?
ಬರೀ ಜಸ್‌ಪ್ರೀತ್ ಬುಮ್ರಾ ಬಗ್ಗೆ ಮಾತ್ರವಲ್ಲ, ಅದೇ ಕಾರ್ಯಕ್ರಮದಲ್ಲಿ ರಾಮ್ ಚರಣ್ ಮತ್ತೊಂದು ಮಿಸ್ಟೇಕ್ ಮಾಡಿದರು. ಭೋಪಾಲ್ ಜನರನ್ನುದ್ದೇಶಿಸಿ ಮಾತನಾಡುವಾಗ, "ಬಿಹಾರದ ಜನರೇ.." ಎಂದು ಸಂಬೋಧಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ನಿರೂಪಕರು, ಸರ್ ಅದು 'ಭೋಪಾಲ್' ಎಂದು ತಿದ್ದಿದರು.