ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic Movie: 'ನೀವು ನೀವಾಗಿಯೇ ಇರಿ, ಏಕೆಂದರೆ..'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

ಯಶ್‌ ಅಭಿನಯದ ಬಹುನಿರೀಕ್ಷಿತ ʻಟಾಕ್ಸಿಕ್‌ʼ ಚಿತ್ರವು ಮಿಶ್ರ ಪ್ರತಿಕ್ರಿಯೆ ಮತ್ತು ಭಾರಿ ಚರ್ಚೆಗಳ ನಡುವೆಯೂ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 285 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ನಟ ಯಶ್, 'ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ' ಎಂದು ಪ್ರೊಫೈಲ್ ಬಯೋ ಬದಲಿಸಿ ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ.

'ನೀವು ನೀವಾಗಿಯೇ ಇರಿ'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

-

Avinash GR
Avinash GR Aug 31, 2026 5:43 PM

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಜಾಗತಿಕವಾಗಿ 300 ಕೋಟಿ ರೂ. ಗಡಿಯ ಸಮೀಪಕ್ಕೆ ತಲುಪುವ ಮೂಲಕ ಸಿನಿಮಾ ಹೊಸ ಮೈಲಿಗಲ್ಲು ನೆಟ್ಟಿದೆ.

ಇದೇ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ನೂತನ ಪ್ರೊಫೈಲ್ ಬಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ನಟ ಯಶ್, 'ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ' ಎಂದು ಸಾಲೊಂದನ್ನು ಅಪ್‌ಡೇಟ್ ಮಾಡಿದ್ದಾರೆ.

Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್

ಚಿತ್ರಕ್ಕೆ ಎದುರಾಗುತ್ತಿರುವ ನಕಾರಾತ್ಮಕ ಟ್ರೋಲ್‌ಗಳು ಮತ್ತು ವಿಮರ್ಶೆಗಳಿಗೆ ಪರೋಕ್ಷವಾಗಿ ನೀಡಿದ ಉತ್ತರವಿದು ಎಂದು ವ್ಯಾಖ್ಯಾನಿಸಲಾಗುತ್ತಿದ್ದು, ಅಭಿಮಾನಿಗಳು ಈ ಬಯೋದ ಸ್ಕ್ರೀನ್‌ಶಾಟ್‌ಗಳನ್ನು "ಒರಿಜಿನಲ್ ಪ್ರಯತ್ನಗಳಿಗೆ ಎಂದಿಗೂ ಸೋಲಿಲ್ಲ" ಎಂಬ ಕ್ಯಾಪ್ಷನ್‌ ಜೊತೆಗೆ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಐದು ದಿನಗಳಿಗೆ ಆದ ಗಳಿಕೆ ಎಷ್ಟು?

ಆಗಸ್ಟ್ 26ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರ, ಮೊದಲ ದಿನ 150‌ ಕೋಟಿ ರೂ.ಗಳಿಗೂ ಅಧಿಕೆ ಗಳಿಕೆ ಮಾಡುವ ಮೂಲಕ ಐತಿಹಾಸಿಕ ಆರಂಭ ಪಡೆದುಕೊಂಡಿತ್ತು. ಆದರೆ, ವಾರದ ದಿನಗಳಲ್ಲಿ ಗಳಿಕೆಯಲ್ಲಿ ತುಸು ಇಳಿಕೆ ಕಂಡುಬಂದಿದೆ. ಓಟ್ಟು 5 ದಿನಗಳಿಗೆ ಈ ಸಿನಿಮಾವ ವಿಶ್ವಾದ್ಯಂತ ಸುಮಾರು 285 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ 300 ಕೋಟಿ ರೂ. ಗಡಿ ದಾಟುವ ನಿರೀಕ್ಷೆ ಇದೆ.

ತೀವ್ರ ಹಿಂಸಾಚಾರ, ರೊಮ್ಯಾನ್ಸ್ ‌ದೃಶ್ಯಗಳಿಂದಾಗಿ ಯಾವುದೇ ಕಟ್ ಇಲ್ಲದೆ ಸೆನ್ಸಾರ್‌ ಮಂಡಳಿಯು 'ಎ' (A) ಪ್ರಮಾಣಪತ್ರವನ್ನು ಈ ಚಿತ್ರಕ್ಕೆ ನೀಡಿತ್ತು. ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.