ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Yash: ಹೊಸಬರೇ ನಿರ್ಮಿಸಿದ ಕನ್ನಡದ ಈ ಚಿತ್ರಕ್ಕೆ ಶುಭ ಹಾರೈಸಿದ ಯಶ್‌!

Amruta Anjan: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಬೇರೆ ಬೇರೆ ವಿಚಾರಗಳಿಗೂ ಸುದ್ದಿಯಾಗುತ್ತಲೇ ಇರ್ತಾರೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡುತ್ತ ಬಂದಿದ್ದಾರೆ ಯಶ್‌. ಈಗ ಅವರು ಕನ್ನಡದ ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್‌ಸ್ಟೋರಿಯಲ್ಲಿ ಪೋಸ್ಟ್‌ ಮಾಡಿ ವಿಶ್‌ ಕೂಡ ತಿಳಿಸಿದ್ದಾರೆ. ಅದುವೇ ‘ಅಮೃತ ಅಂಜನ್‌ʼ ಸಿನಿಮಾ ತಂಡಕ್ಕೆ.

ನಟ ಯಶ್‌

ರಾಕಿಂಗ್ ಸ್ಟಾರ್ ಯಶ್ (Yash) ಸಿನಿಮಾ ಹೊರತಾಗಿ ಬೇರೆ ಬೇರೆ ವಿಚಾರಗಳಿಗೂ ಸುದ್ದಿಯಾಗುತ್ತಲೇ ಇರ್ತಾರೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡುತ್ತ ಬಂದಿದ್ದಾರೆ ಯಶ್‌. ಈಗ ಅವರು ಕನ್ನಡದ (Kannada Cinema Team) ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್‌ಸ್ಟೋರಿಯಲ್ಲಿ ಪೋಸ್ಟ್‌ ಮಾಡಿ ವಿಶ್‌ ಕೂಡ ತಿಳಿಸಿದ್ದಾರೆ. ಅದುವೇ ‘ಅಮೃತ ಅಂಜನ್‌ʼ ( Amruta Anjan ) ಸಿನಿಮಾ ತಂಡಕ್ಕೆ.

ಯಶ್ ಶುಭ ಹಾರೈಕೆ

ಮಿಲಿಯನ್ಸ್ ಗಟ್ಟಲೆ ವ್ಯೂಸ ಈಗಾಗಲೇ ಕಿರು ಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ "ಅಮೃತಾಂಜನ್" ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು "ಅಮೃತ ಅಂಜನ್" (Amruta Anjan) ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಇಂದು (ಜನವರಿ 30) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಯಶ್ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: OTT this weekend: ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸೌತ್‌ ಸಿನಿಮಾಗಳು! ನಿಮ್ಮ ಆಯ್ಕೆ ಯಾವುದು?

‘ಅಮೃತಾಂಜನ ತಂಡದ ಕೆಲಸವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನೀವು ದೊಡ್ಡ ಕನಸು ಕಂಡಿದ್ದೀರಾ. ಸಣ್ಣ ಕಂಟೆಂಟ್ ಮಾಡುವುದರಿಂದ ಆರಂಭಿಸಿ, ಈಗ ಸಿನಿಮಾ ಮಾಡಿದ್ದೀರಾ. ಇದು ಕಂಟೆಂಟ್ ಮಾಡುವ, ಕಥೆ ಹೇಳುವ ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಯಶ್ ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

yash

80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್

ಈ ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ ನಾನು ಈ ಚಿತ್ರವನ್ನು ಆರಂಭಿಸಲು ಮುಖ್ಯ ಕಾರಣವೇ ನನ್ನ ಅಮೃತಾಂಜನ್ ಕಿರುಚಿತ್ರ. ಈ ನಮ್ಮ ಅಮೃತ ಅಂಜನ್ ಚಿತ್ರ ಸಂಪೂರ್ಣ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು , 80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ. ಪ್ರೀತಿ, ಸ್ನೇಹ , ಸಂಬಂಧಗಳ ಜೊತೆಗೆ ಹಾಸ್ಯದ ಲೇಪನದೊಂದಿಗೆ ಎರಡು ಹಾಡು, ಫೈಟ್ ಗಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂತ ಅಂಶ ಒಳಗೊಂಡಿದೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಎಲ್ಲರೂ ಕೆಲಸ ಮಾಡಿದ್ದೇವೆ.

ವಿಶೇಷವಾಗಿ ನಮ್ಮ ಈ ಚಿತ್ರದ ಟ್ರೈಲರ್ ಬಿಡುಗಡೆಯನ್ನು ಜಯಮಾಲಾ ಮೇಡಂ ರವರು ಮಾಡಿದ್ದು ನಮಗೆ ಬಹಳಷ್ಟು ಬೆಂಬಲ ಸಿಕ್ಕಿದೆ. ನಮ್ಮ ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ರಿಲೀಸ್ ಮಾಡುತ್ತಿದ್ದೇವೆ , ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ಚಿತ್ರಕ್ಕೆ ಇರಲಿ ಎಂದು ಈ ಹಿಂದೆ ಟ್ರೈಲರ್‌ ರಿಲೀಸ್‌ ವೇಳೆ ಹೇಳಿಕೊಂಡಿದ್ದರು.

ಇದನ್ನೂ ಓದಿ: Amruthanjan Movie: ʻಅಮೃತ ಅಂಜನ್ʼ ಚಿತ್ರದ ಟ್ರೈಲರ್ ಬಿಡುಗಡೆ ; ಸಿನಿಮಾ ರಿಲೀಸ್‌ ಯಾವಾಗ?

ಹಿರಿಯ ನಟ ನವೀನ್. ಡಿ. ಪಡೀಲ್ , ಮಧುಮತಿ ಹಾಗೂ ಇನ್ನು ಮುಂತಾದವರು ಅಭಿನಯಿಸಿದ್ದು, ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ , ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ.

Yashaswi Devadiga

View all posts by this author