ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್ ಪೋಸ್ಟ್ ವೈರಲ್: ಧ್ರುವ್ ವಿಕ್ರಮ್‌ ಜೊತೆಗಿನ ಸಂಬಂಧಕ್ಕೆ ಬಿತ್ತಾ ಫುಲ್‌ಸ್ಟಾಪ್?

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ಮುಂದೆ ತಮ್ಮ ಜೀವನದ ನಿರ್ಧಾರಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಬರೆದುಕೊಂಡಿರುವ ನಟಿ, ನಟ ಧ್ರುವ್ ವಿಕ್ರಮ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಪ್ರಸ್ತುತ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೀಗ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಸುಮಾರು ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ನಟಿ, ದಿಢೀರನೆ ಸಕ್ರಿಯರಾಗಿ 'ನನ್ನ ಜೀವನ ನನ್ನಿಷ್ಟ' ಎಂಬಂತಹ ಸಾಲುಗಳನ್ನು ಬರೆದುಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಬ್ರೇಕಪ್ ಅನುಮಾನ ಮೂಡಿಸಿದೆ.

'ಯಾರ ಅನುಮತಿಯೂ ಇನ್ಮುಂದೆ ಬೇಕಿಲ್ಲ'

ಸಮುದ್ರ ತೀರದಲ್ಲಿ ಪ್ರಕೃತಿಯನ್ನು ಆಸ್ವಾದಿಸುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅನುಪಮಾ, ತಮ್ಮ ಮನಸ್ಸಿನ ಮಾತನ್ನು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. "ಕೆಲವೊಮ್ಮೆ ಮನಃಶಾಂತಿಗಾಗಿ ಕೆಲವು ಡೆಡ್ ಎಂಡ್‌ಗಳನ್ನು ಬಿಟ್ಟುಬರಬೇಕಾಗುತ್ತದೆ. ಇಂದಿನಿಂದ ನನ್ನ ಧ್ವನಿಯನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ, ನನ್ನ ಜೀವನವನ್ನು ನಾನೇ ನಿರ್ಧರಿಸುತ್ತೇನೆ. ಇನ್ಮುಂದೆ ನನಗೆ ಯಾರ ಅನುಮತಿಯೂ ಅಗತ್ಯವಿಲ್ಲ, ಯಾವುದೇ ಭಯವೂ ಇಲ್ಲ. ನನ್ನನ್ನು ನಾನು ಮತ್ತೆ ಕಂಡುಕೊಳ್ಳುತ್ತಾ, ನನ್ನದೇ ಆದ ಜೀವನದೊಂದಿಗೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಿದ್ದೇನೆ" ಎಂದು ಅನುಪಮಾ ಪೋಸ್ಟ್ ಮಾಡಿದ್ದಾರೆ.

Anupama Gowda: ಅನುಶ್ರೀ ಮದುವೆ ಬೆನ್ನಲ್ಲೇ ಅನುಪಮಾ ಗೌಡ ಎಂಗೇಜ್‌! ವದಂತಿಗೆ ನಿರೂಪಕಿ ಸ್ಪಷ್ಟನೆ

ಮತ್ತೊಂದು ಪೋಸ್ಟ್‌ನಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಳ್ಳುತ್ತಾ, "ನಾವು ಯಾರ ಒಪ್ಪಿಗೆಗಾಗಿಯೋ, ಹಾಡಿನ ಆಯ್ಕೆಗಾಗಿಯೋ ಅಥವಾ ಕ್ಯಾಪ್ಷನ್‌ಗಾಗಿಯೋ ಬೇರೊಬ್ಬರ ಮೇಲೆ ಅವಲಂಬಿತರಾಗದಿದ್ದಾಗ ಸೋಶಿಯಲ್ ಮೀಡಿಯಾ ಬಳಸುವುದು ತುಂಬಾ ಮಜವಾಗಿರುತ್ತದೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ 'ಬ್ಯಾಕ್ ಟು ಲೈಫ್' ಎಂದು ಇನ್‌ಸ್ಟಾ ಸ್ಟೋರಿಯನ್ನೂ ಹಂಚಿಕೊಂಡಿದ್ದಾರೆ.

Anupama Parameswaran: 20 ವರ್ಷದ ಯುವತಿ ವಿರುದ್ಧ ದೂರು ದಾಖಲಿಸಿದ ನಟಿ ಅನುಪಮಾ ಪರಮೇಶ್ವರನ್: ಕಾರಣವೇನು?

ಧ್ರುವ್ ವಿಕ್ರಮ್ ಜೊತೆ ಬ್ರೇಕಪ್?

ಕಳೆದ ಕೆಲವು ಸಮಯದಿಂದ ತಮಿಳಿನ ಸ್ಟಾರ್ ನಟ ವಿಕ್ರಮ್‌ ಅವರ ಪುತ್ರ, ನಟ ಧ್ರುವ್‌ ವಿಕ್ರಮ್ ಹಾಗೂ ಅನುಪಮಾ ಪರಮೇಶ್ವರನ್ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಇಬ್ಬರೂ ಈ ವಿಷಯವನ್ನು ಅಧಿಕೃತವಾಗಿ ಎಲ್ಲೂ ಒಪ್ಪಿಕೊಂಡಿರಲಿಲ್ಲ.

ಇದೀಗ ಅನುಪಮಾ ಅವರ ಪೋಸ್ಟ್ ಬೆನ್ನಲ್ಲೇ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ್ ವಿಕ್ರಮ್ ಅವರನ್ನು ಅನ್‌ಫಾಲೋ ಮಾಡಿರುವುದು ಕಂಡುಬಂದಿದೆ. ಅತ್ತ ಧ್ರುವ್ ಕೂಡ ತಮ್ಮ ತಂದೆಯನ್ನು ಹೊರತುಪಡಿಸಿ ಬೇರಾರನ್ನೂ ಫಾಲೋ ಮಾಡುತ್ತಿಲ್ಲ. ಈ ಬೆಳವಣಿಗೆಗಳನ್ನು ಗಮನಿಸಿದ ನೆಟ್ಟಿಗರು ಹಾಗೂ ಅಭಿಮಾನಿಗಳು, ಇಬ್ಬರ ನಡುವೆ ಬ್ರೇಕಪ್ ಆಗಿರುವುದು ಖಚಿತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಹಲವು ಸೆಲೆಬ್ರಿಟಿಗಳು ಅನುಪಮಾ ಅವರ ಪೋಸ್ಟ್‌ಗೆ ಸ್ಪಂದಿಸಿ 'ನಿನಗೆ ಇನ್ನಷ್ಟು ಶಕ್ತಿ ಸಿಗಲಿ' ಎಂದು ಬೆಂಬಲ ಸೂಚಿಸುತ್ತಿದ್ದಾರೆ.