Anupama Gowda: ಅನುಶ್ರೀ ಮದುವೆ ಬೆನ್ನಲ್ಲೇ ಅನುಪಮಾ ಗೌಡ ಎಂಗೇಜ್! ವದಂತಿಗೆ ನಿರೂಪಕಿ ಸ್ಪಷ್ಟನೆ
Anupama Gowda: ʻಕಲರ್ಸ್ ಕನ್ನಡʼ ವಾಹಿನಿಯ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ನಿಶ್ಚಿತಾರ್ಥದ ಬಗ್ಗೆ ಹರಿದಾಡಿದ್ದ ವದಂತಿಗಳಿಗೆಸ್ಪಷ್ಟನೆ ನೀಡಿದ್ದಾರೆ. ಗೆಳೆಯ ರಾಘವ್ ಜೊತೆಗಿನ ಫೋಟೋ ನೋಡಿ ಎಂಗೇಜ್‌ಮೆಂಟ್ ಎಂದು ಸುದ್ದಿ ಹಬ್ಬಿಸಿದ್ದವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಹಲವರು ಈ ಫೋಟೋಗಳನ್ನ ನೋಡಿ ಇವರಿಬ್ಬರಿಗೂ ಎಂಗೇಜ್‌ಮೆಂಟ್ ಆಗಿದೆ. ಇನ್ನೇನು ಮದುವೆಯಾಗಲಿದ್ದಾರೆ ಅಂತೆಲ್ಲಾ ಪೋಸ್ಟ್ ಮಾಡುತ್ತಿದ್ದರು. ಈ ಬಗ್ಗೆ ಅನುಪಮಾ ಗೌಡ ಇದೀಗ ರಿಪ್ಲೈ ನೀಡಿದ್ದಾರೆ.
ಅನುಪಮಾ ಗೌಡ -
ʻಕಲರ್ಸ್ ಕನ್ನಡʼ (Colors Kannada) ವಾಹಿನಿಯ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ (Anupama Gowda) ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ನಿಶ್ಚಿತಾರ್ಥದ ಬಗ್ಗೆ ಹರಿದಾಡಿದ್ದ ವದಂತಿಗಳಿಗೆಸ್ಪಷ್ಟನೆ ನೀಡಿದ್ದಾರೆ. ಗೆಳೆಯ ರಾಘವ್ ಜೊತೆಗಿನ ಫೋಟೋ ನೋಡಿ ಎಂಗೇಜ್‌ಮೆಂಟ್ ಎಂದು ಸುದ್ದಿ ಹಬ್ಬಿಸಿದ್ದವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಹಲವರು ಈ ಫೋಟೋಗಳನ್ನ ನೋಡಿ ಇವರಿಬ್ಬರಿಗೂ ಎಂಗೇಜ್‌ಮೆಂಟ್ ಆಗಿದೆ. ಇನ್ನೇನು ಮದುವೆಯಾಗಲಿದ್ದಾರೆ (Marriage) ಅಂತೆಲ್ಲಾ ಪೋಸ್ಟ್ ಮಾಡುತ್ತಿದ್ದರು. ಈ ಬಗ್ಗೆ ಅನುಪಮಾ ಗೌಡ ಇದೀಗ ರಿಪ್ಲೈ (Reply) ನೀಡಿದ್ದಾರೆ.
ಇದನ್ನೂ ಓದಿ: Amruthadhaare Serial: ಬೆಂಕಿಯಾದ ಭೂಮಿ ಎದುರು ಸುಟ್ಟು ಬೂದಿಯಾಗ್ತಾನಾ ಜೇಡಿ? ರೋಚಕ ಸತ್ಯದ ಅನಾವರಣ!
ನಾನು ರಿಯಾಕ್ಟ್ ಮಾಡಲ್ಲ
ಅನುಪಮಾ ಮಾತನಾಡಿ, ನಾನು ಒಂದು ಸೀಕ್ರೆಟ್‌ನ ಶೇರ್ ಮಾಡಬೇಕಿತ್ತು. ಅದಕ್ಕಾಗಿ ಈ ವಿಡಿಯೋ. ಸಾಮಾನ್ಯವಾಗಿ ನಾನು ರಿಯಾಕ್ಟ್ ಮಾಡಲ್ಲ. ಬೆಳಗ್ಗೆಯಿಂದಲೂ ಶೂಟಿಂಗ್ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ನ್ನೋಸ್ ಅಂತ ಅಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್ ಹೇಳ್ತಾ ಇದ್ದಾರೆ. ಏನು ಅಂತಂದರೆ, ಎರಡು ದಿನದ ಹಿಂದೆ ನನ್ನ ಎಂಗೇಜ್‌ಮೆಂಟ್ ಆಯ್ತು. ನನ್ನ ಬೆಸ್ಟ್‌ಫ್ರೆಂಡ್ ರಾಘವ್ ಅವರ ಜೊತೆಗೆ. ಅನ್‌ಫಾರ್ಚುನೇಟ್ಲಿ ನಮ್ಮ ಎಂಗೇಜ್‌ಮೆಂಟ್‌ಗೆ ನಾವು ಅಟೆಂಡ್ ಮಾಡೋಕಾಗಲಿಲ್ಲ. ಯಾಕೆಂದರೆ, ನಮಗೆ ಯಾರೂ ಕೂಡ ಇನ್ಪಾರ್ಮ್ ಮಾಡಲಿಲ್ಲ ನಮ್ಮ ಎಂಗೇಜ್‌ಮೆಂಟ್ ಅಂತ.
ವಿಷಸ್ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು
ಒಂದಷ್ಟು ಪೇಜ್‌ಗಳಲ್ಲಿ ನನ್ನ ಬರ್ತ್‌ಡೇಗೆ ಅಂತ ಪೋಸ್ಟ್ ಮಾಡಿದ್ದ ಫೋಟೋಗಳನ್ನ ತಗೊಂಡು ಇವರಿಬ್ಬರದ್ದು ಎಂಗೇಜ್‌ಮೆಂಟ್ ಆಯ್ತು. ಅನುಪಮಾ ಬಾಯ್‌ಫ್ರೆಂಡ್ ಹಾ ಇವರು? ಅನುಶ್ರೀ ಅವರ ಮದುವೆಯಾಯ್ತು, ಈಗ ಅನುಪಮಾ ಎಂಗೇಜ್‌ಮೆಂಟ್ ಆಗಿದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ. ಎಐ ಎಲ್ಲಾ ಇರ್ಬೇಕಾದರೆ, ನಾವು ಇಷ್ಟೆಲ್ಲಾ ಮುಂದುವರೆದಿರಬೇಕಾದರೆ, ಅಟ್‌ಲೀಸ್ಟ್ ಒಂದೊಳ್ಳೆ ಫೋಟೋವನ್ನ ಕ್ರಿಯೇಟ್ ಮಾಡಿ, ರಿಂಗ್ ಹಾಕೋ ತರಹ ಫೋಟೋವನ್ನ ಎಡಿಟ್ ಮಾಡಿ, ನಮಗೆ ಕಂಗ್ರ್ಯಾಜುಲೇಷನ್ಸ್ ಅಂತ ವಿಷಸ್ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು.
ವೈರಲ್ ವಿಡಿಯೋ
ಇಮಿಡಿಯೇಟ್ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಮದುವೆ ಇನ್ನೆರಡು ತಿಂಗಳು ಬಿಟ್ಟು ಮಾಡಿ. ನಮಗೆ ಟ್ರೆಡಿಷನಲ್ ಔಟ್‌ಫಿಟ್ ಎಲ್ಲಾ ಹಾಕಿ, ಮದುವೆ ಪೋಸ್ಟ್‌ನ ಕ್ರಿಯೇಟ್ ಮಾಡಿ, ಆಮೇಲೆ ನೀವು ಎರಡು ತಿಂಗಳಾದ್ಮೇಲೆ ಎಲ್ಲಾ ಕಡೆ ಪೋಸ್ಟ್ ಮಾಡಬಹುದು.
ಇದನ್ನೂ ಓದಿ: Mrunal Thakur: ಐಟಂ ಸಾಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ಮೃಣಾಲ್ ಠಾಕೂರ್? ಯಾವ ಸಿನಿಮಾ ಅದು?
ಸಾಧ್ಯವಾದರೆ, ನನ್ನ ಮತ್ತು ರಾಘವ್‌ನ ಮದುವೆಗೆ ಕರೀರಿ. ಖಂಡಿತವಾಗಿಯೂ ಬಂದು ನಾವು ಬರ್ತೀವಿ. ನನ್ನ ಮದುವೆಯಲ್ಲಿ ಎಷ್ಟು ಇಂಟ್ರೆಸ್ಟ್ ತೋರಿಸ್ತೀರ ಅಂತ ನೋಡೋದಕ್ಕೆ ಆಸೆ. ದಯಮಾಡಿ ನಮ್ಮನ್ನ ಇನ್ವೈಟ್ ಮಾಡಿ” ಎಂದಿದ್ದಾರೆ ಅನುಪಮಾ ಗೌಡ.