ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: ʻದಯವಿಟ್ಟು ನನ್ನ ಆ ಬೋಲ್ಡ್ ಸೀನ್‌ಗಳಿಗೆ ಕತ್ತರಿ ಹಾಕಿ...ʼ; 'ಟಾಕ್ಸಿಕ್' ತಂಡಕ್ಕೆ ಮನವಿ ಮಾಡಿಕೊಂಡ್ರಾ ನಟಿ ಕಿಯಾರಾ ಅಡ್ವಾಣಿ?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿನ ಕೆಲವು ಬೋಲ್ಡ್ ಮತ್ತು ಇಂಟಿಮೇಟ್ ದೃಶ್ಯಗಳನ್ನು ತೆಗೆದುಹಾಕುವಂತೆ ನಟಿ ಕಿಯಾರಾ ಅಡ್ವಾಣಿ ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಮನವಿ ಮಾಡಿದ್ದಾರಂತೆ. ಇದು ತಮ್ಮ ಇಮೇಜ್‌ಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಅವರು ಈ ರೀತಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ʻಟಾಕ್ಸಿಕ್ʼ ಬೋಲ್ಡ್ ಸೀನ್‌ಗಳಿಗೆ ಕತ್ತರಿ? ಕಿಯಾರಾ ಅಡ್ವಾಣಿ ಮನವಿ ಏನು?

-

Avinash GR
Avinash GR May 3, 2026 1:51 PM

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ ಮೇಲೆ ಭಾರಿ ಕುತೂಹಲವಿದೆ. 'ಕೆಜಿಎಫ್' ಸರಣಿಯ ನಂತರ ಯಶ್ ನಟಿಸುತ್ತಿರುವ ಸಿನಿಮಾ ಇದಾದ್ದರಿಂದ, ಈ ಚಿತ್ರದ ಮೇಲೆ ಜಾಗತಿಕ ಮಟ್ಟದಲ್ಲಿ ನಿರೀಕ್ಷೆಗಳು ಗಗನಕ್ಕೇರಿವೆ. ಆದರೆ, ಈ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದು ಶಾಕಿಂಗ್ ಅಪ್‌ಡೇಟ್ ಇಲ್ಲಿದೆ. ಅದು ಚಿತ್ರದ ನಾಯಕಿ ಕಿಯಾರ ಅಡ್ವಾಣಿ ಕಡೆಯಿಂದ ಎಂಬುದು ಅಚ್ಚರಿ!

ಸೀನ್‌ ಎಡಿಟ್‌ ಮಾಡಿ ಎಂದ್ರಾ ಕಿಯಾರಾ?

ಸದ್ಯ ಕಿಯಾರಾ ಅಡ್ವಾಣಿಗೆ ಸಂಬಂಧಿಸಿದಂತೆ ಟಾಕ್ಸಿಕ್‌ ಸಿನಿಮಾ ಸುದ್ದಿಯಲ್ಲಿದೆ. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಕಥೆಯ ಅಗತ್ಯಕ್ಕೆ ತಕ್ಕಂತೆ ಯಶ್ ಮತ್ತು ಕಿಯಾರಾ ನಡುವೆ ಕೆಲವು ಬೋಲ್ಡ್ ಮತ್ತು ಇಂಟಿಮೇಟ್ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಆಗ ಕಿಯಾರಾ ಗ್ರೀನ್ ಸಿಗ್ನಲ್ ನೀಡಿದ್ದರೂ, ಈಗ ಫೈನಲ್ ಎಡಿಟ್ ನೋಡಿದ ನಂತರ ಅವರು ಮುಜುಗರಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ತುಂಬಾ ಬೋಲ್ಡ್‌ ಆಗಿರುವ ಆ ರೊಮ್ಯಾಂಟಿಕ್‌ ಸೀನ್‌ಗಳಿಂದ ತಮ್ಮ ಇಮೇಜ್‌ಗೆ ಎಲ್ಲಿ ಧಕ್ಕೆ ಉಂಟು ಮಾಡುತ್ತವೋ ಎಂಬ ಭಯ ಕಿಯಾರಾಗೆ ‌ಕಾಡುತ್ತಿದೆಯಂತೆ.

Toxic postponed: 'ಟಾಕ್ಸಿಕ್' ಮತ್ತೆ ಮುಂದೂಡಿಕೆ; ಯಶ್‌ ಕೊಟ್ಟೇ ಬಿಟ್ರು ಅಧಿಕೃತ ಮಾಹಿತಿ

ಆ ಸೀನ್‌ಗಳು ಬಹಳ ಇಂಪಾರ್ಟೆಂಟ್

ಮದುವೆಯ ನಂತರ ಫ್ಯಾಮಿಲಿ ಪ್ರೇಕ್ಷಕರು ತನ್ನನ್ನು ಸ್ವೀಕರಿಸುವ ರೀತಿ ಬದಲಾಗಬಹುದು ಎಂದು ಭಾವಿಸಿ, ಆ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಅಥವಾ ಕನಿಷ್ಠ ಅವುಗಳನ್ನು ಟ್ರಿಮ್‌ ಆದರೂ ಮಾಡಿ ಎಂದು ನಿರ್ದೇಶಕಿ ಗೀತು ಬಳಿ ಕಿಯಾರಾ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿರ್ದೇಶಕರು ಮಾತ್ರ, ಆ ದೃಶ್ಯಗಳು ಕಥೆಗೆ ಬಹಳ ಇಂಪಾರ್ಟೆಂಟ್‌ ಆಗಿದ್ದು, ಆ ಸೀನ್‌ಗಳನ್ನು ತೆಗೆದರೆ ಸಿನಿಮಾಗೆ ಮೈನಸ್‌ ಅಗಲಿದೆ ಎಂದು ಹೇಳಿದ್ದಾರಂತೆ. ಹಾಗಾದರೆ, ಅಂತಿಮವಾಗಿ ಈ ಬಗ್ಗೆ 'ಟಾಕ್ಸಿಕ್' ತಂಡದ ನಿರ್ಧಾರ ಏನು ಎಂಬುದು ಸಿನಿಮಾ ರಿಲೀಸ್‌ ಆದಮೇಲೆ ಗೊತ್ತಾಗಲಿದೆ.

ಪೋಸ್ಟ್‌ಪೋನ್‌ ಆಗಿರುವ ಟಾಕ್ಸಿಕ್‌

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜೂನ್ 4 ರಂದು ಟಾಕ್ಸಿಕ್‌ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಈ ಬಿಡುಗಡೆಯನ್ನು ನಿರ್ಮಾಪಕರು ಮತ್ತೊಮ್ಮೆ ಮುಂದೂಡಿದ್ದಾರೆ. ಇತ್ತೀಚೆಗೆ ನಡೆದ 'ಸಿನಿಮಾಕಾನ್'ನಲ್ಲಿ ಈ ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ಸಿನಿಮಾವನ್ನು ಕೇವಲ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

Toxic Movie: `ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

ಜಾಗತಿಕ ವಿತರಣೆ ಕುರಿತ ಮಾತುಕತೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪ್ರಚಾರ ಕಾರ್ಯಗಳನ್ನು ಯೋಜಿಸುವುದಕ್ಕಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು" ಎಂದು ಯಶ್ ಅಧಿಕೃತವಾಗಿ ಹೇಳಿದ್ದರು.