ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Malashree: ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ನೀಡಿದ ನಟಿ ಮಾಲಾಶ್ರೀ!

shirdi sai baba: ನಟಿ ಮಾಲಾಶ್ರೀ ಸಿನಿಮಾದಿಂದ ದೂರವಿದ್ದರೂ, ಹಲವು ರಿಯಾಲಿಟಿ ಶೋಗೆ ಅತಿಥಿಯಾಗಿ ಬರುತ್ತ ಇರ್ತಾರೆ. ಮಾಲಾಶ್ರೀ ಅವರು ತುಂಬಾ ವರ್ಷಗಳಿಂದಲೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಿರಂತರವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಪತಿ, ನಿರ್ಮಾಪಕ ರಾಮು ಅವರು ಕೂಡ ಸಾಯಿಬಾಬಾ ಭಕ್ತರಾಗಿದ್ದರು. ಇದೀಗ ಮಾಲಾಶ್ರೀ ಅವರು ದುಬಾರಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಶಿರಡಿ ಶ್ರೀಸಾಯಿಬಾಬಾಗೆ ಅರ್ಪಿಸಿದ್ದಾರೆ.

ನಟಿ ಮಾಲಾಶ್ರೀ

ಕನ್ನಡ ಚಿತ್ರರಂಗದ ʻಕನಸಿನ ರಾಣಿʼ ಖ್ಯಾತಿಯ ನಟಿ ಮಾಲಾಶ್ರೀ (Malashree) ಆಗಾಗ ಸುದ್ದಿಯಲ್ಲಿ ಇರ್ತಾರೆ. ಸಿನಿಮಾದಿಂದ ದೂರವಿದ್ದರೂ, ಹಲವು ರಿಯಾಲಿಟಿ ಶೋಗೆ ಅತಿಥಿಯಾಗಿ ಬರುತ್ತ ಇರ್ತಾರೆ. ಮಾಲಾಶ್ರೀ ಅವರು ತುಂಬಾ ವರ್ಷಗಳಿಂದಲೂ ಶಿರಡಿ ಸಾಯಿಬಾಬಾ (shirdi sai baba) ಮಂದಿರಕ್ಕೆ ನಿರಂತರವಾಗಿ ಭೇಟಿ ನೀಡುತ್ತಲೇ ಇದ್ದಾರೆ. ಪತಿ, ನಿರ್ಮಾಪಕ ರಾಮು ಅವರು ಕೂಡ ಸಾಯಿಬಾಬಾ ಭಕ್ತರಾಗಿದ್ದರು. ಇದೀಗ ಮಾಲಾಶ್ರೀ ಅವರು ದುಬಾರಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಶಿರಡಿ ಶ್ರೀಸಾಯಿಬಾಬಾಗೆ ಅರ್ಪಿಸಿದ್ದಾರೆ. ನಮ್ಮಿಂದ ಚಿಕ್ಕದೊಂದು ಉಡುಗೊರೆ ನೀಡಿದ್ದೇವೆ ಅಷ್ಟೇ ಎಂದು ನಟಿ ಮಾಲಾಶ್ರೀ ಅವರು ಚಿನ್ನದ ಕಿರೀಟ ನೀಡಿದ ನಂತರ ಹೇಳಿಕೆ ನೀಡಿದ್ದಾರೆ.

ಪುತ್ರಿ ಆರಾಧನಾ ಅವರೊಂದಿಗೆ ಶಿರಡಿಗೆ ತೆರಳಿ ಚಿನ್ನದ ಕಿರೀಟವನ್ನು ಹಸ್ತಾಂತರಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಾಬಾ ಆರ್ಶೀವಾದ!

ಪುತ್ರಿಯ ಮೊದಲ ಸಿನಿಮಾ ಶುರು ಮಾಡುವಾಗಲೂ ಬಾಬಾ ಆರ್ಶೀವಾದವನ್ನ ಪಡೆದಿದ್ದರು. ಮಗಳು ಆರಾಧನಾ ರಾಮ್ ಹಾಗೂ ಪುತ್ರ ಆರ್ಯನ್ ಜೊತೆ ಶಿರಡಿಗೆ ಭೇಟಿ ನೀಡಿ ಬಂಗಾರದ ಕಿರೀಟವನ್ನ ಬಾಬಾಗೆ ಅರ್ಪಿಸಿದ್ದಾರೆ. ಇನ್ನು ಇದೇ ವೇಳೆ ಸಾಯಿಬಾಬಾ ಮೇಲಿನ ಭಕ್ತಿಯನ್ನ ನಟಿ ಮಾಲಾಶ್ರೀ ವಿವರಿಸಿದ್ದಾರೆ.

ಬಾಬಾ ನಾನು ಕೇಳಿದ ಎಲ್ಲವನ್ನೂ ಕರುಣಿಸಿದ್ದಾರೆ. ಹೀಗಾಗಿ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆಯನ್ನು ಅವರಿಗೆ ನೀಡಲು ಬಯಸಿದ್ದೇನೆ. ಇದರಿಂದ ಬಾಬಾ ಕೂಡ ಖುಷಿಪಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಮಾಲಾಶ್ರೀ ಹೇಳಿದ್ದಾರೆ.

ವೈರಲ್‌ ವಿಡಿಯೋ



ಮಾಲಾಶ್ರೀ ಅವರ ಪುತ್ರಿ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ ನೆಕ್ಸ್ಟ್‌ ಲೆವೆಲ್ ಸಿನಿಮಾದಲ್ಲಿ ನಟಿಸಲಿದ್ದಾರೆ.ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಮೂಡಿ ಬರಲಿದೆ. ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಬಾಲನಟಿಯಾಗಿ ಸಿನಿ ಎಂಟ್ರಿ ಕೊಟ್ಟಿದ್ದ ಮಾಲಾಶ್ರೀ!

1989ರಲ್ಲಿ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದಕ್ಕಿಂತಲೂ ಮೊದಲು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ ಮಾಲಾಶ್ರೀ.

ಬಾಲನಟಿಯಾಗಿ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ.ಮೊದಲ ಕನ್ನಡ ಸಿನಿಮಾ ನಂಜುಂಡಿ ಕಲ್ಯಾಣ ಶುರು ಮಾಡುವ ಮುನ್ನ ಶಿರಡಿ ಸಾಯಿಬಾಬಾ ಆರ್ಶೀವಾದವನ್ನ ಪಡೆದು ಸಿನಿಮಾವನ್ನ ಆರಂಭಿಸಿದ್ದರಂತೆ.

ಇತ್ತೀಚೆಗೆ ಮಹಾನಟಿ ವೇದಿಕೆ ಮೇಲೆ ಇತ್ತೀಚೆಗೆ ಮಾಲಾಶ್ರೀ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ಮತ್ತು ಮಾಲಾಶ್ರೀ ರೊಮ್ಯಾಂಟಿಕ್ ಹಾಡಿಗೆ ನೃತ್ಯ ಕೂಡ ಮಾಡಿದ್ದರು. ಬೆಳ್ಳಿ ಮೋಡಗಳು ಚಿತ್ರದ ಹಾಡಿಗೇನೆ ಇಲ್ಲಿ ಡ್ಯಾನ್ಸ್ ಮಾಡಿದ್ದರು. ಹೃದಯವೇ ನಿನ್ನ ಹೆಸರಿಗೆ ಅನ್ನೋ ಗೀತೆಗೆ ಡ್ಯಾನ್ಸ್ ಮಾಡಿದ್ದರು.

Yashaswi Devadiga

View all posts by this author