ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಇನ್ನಿಲ್ಲ
ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಇನ್ನಿಲ್ಲ
-
Vishwavani News
Apr 26, 2021 8:18 PM
ಬೆಂಗಳೂರು: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಖ್ಯಾತಿಯ, ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಪತಿ ರಾಮು(52) ಕರೋನಾ ವೈರಸ್ ಸೋಂಕು ತಗುಲಿ ನಿಧನರಾದರು.
ಒಂದು ವಾರದ ಹಿಂದೆ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಉಸಿರಾಟದ ಸಮಸ್ಯೆಗೂ ಒಳಗಾಗಿದ್ದರು. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಅಸುನೀಗಿದ್ದಾರೆ.
'ರಾಜಕೀಯ' ಸಿನಿಮಾ ಮೂಲಕ ನಿರ್ಮಾಪಕರಾದ ಅವರು ಗೋಲಿಬಾರ್, ಲಾಕಪ್ ಡೆತ್ ಚಿತ್ರಗಳ ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. ಕಲಾಸಿಪಾಳ್ಯ, ಸಿಬಿಐ ದುರ್ಗಾ, ಎಕೆ-47, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ್ ಗೌಡ' ಚಿತ್ರಕ್ಕೆ ಬಂಡವಾಳ ಹೂಡಿದ್ದರು ಎನ್ನಲಾಗಿದೆ.