ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ವಯಸ್ಸಿನ ಅಂತರದ್ದೇ ಚರ್ಚೆ!

ಸೌತ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹಾಗೂ ಭಾರತೀಯ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮುಂಬೈನ ಕೆಫೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿ ವೈರಲ್ ಆಗಿದೆ. 33 ವರ್ಷದ ಮೃಣಾಲ್ ಹಾಗೂ 24 ವರ್ಷದ ಜೈಸ್ವಾಲ್ ನಡುವಿನ 9 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಮೃಣಾಲ್ ಠಾಕೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಟ ಧನುಷ್ ಜೊತೆ ಮೃಣಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ಮೃಣಾಲ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

9 ವರ್ಷಗಳ ವಯಸ್ಸಿನ ಅಂತರ!

ಇತ್ತೀಚೆಗೆ ಮುಂಬೈನ ಕೆಫೆಯೊಂದರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಮೃಣಾಲ್ ಠಾಕೂರ್ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಊಹಾಪೋಹಗಳು ನೆಟ್ಟಿಗರ ನಡುವೆ ಕಾಡ್ಗಿಚ್ಚಿನಂತೆ ಹರಡಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಬ್ಬರ ವಯಸ್ಸಿನ ಅಂತರದ ಬಗ್ಗೆಯೇ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಪ್ರಸ್ತುತ ಯಶಸ್ವಿ ಜೈಸ್ವಾಲ್‌ಗೆ 24 ವರ್ಷ ವಯಸ್ಸಾಗಿದ್ದರೆ, ಮೃಣಾಲ್ ಠಾಕೂರ್‌ಗೆ 33 ವರ್ಷ. ತಮಗಿಂತ 9 ವರ್ಷ ಚಿಕ್ಕವರಾಗಿರುವ ಕ್ರಿಕೆಟರ್ ಜೊತೆ ಮೃಣಾಲ್ ಪ್ರೀತಿಯಲ್ಲಿದ್ದಾರೆಯೇ, ಇವರಿಬ್ಬರ ಪರಿಚಯ ಎಲ್ಲಿ ಮತ್ತು ಹೇಗೆ ಆಯಿತು ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ.

Mrunal Thakur: ಅಲ್ಲು ಅರವಿಂದ್ ಇದೊಂದು ಮಾತಿಗೆ ನಾಚಿ ನೀರಾದ ಮೃಣಾಲ್ ಠಾಕೂರ್

ಅಭಿಮಾನಿಗಳ ಸಮರ್ಥನೆ

ಈ ಗಾಸಿಪ್‌ಗಳಿಗೆ ಮೃಣಾಲ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೇ ಜಾಗದಲ್ಲಿ ಕಾಣಿಸಿಕೊಂಡ ತಕ್ಷಣ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಭಾವಿಸುವುದು ತಪ್ಪು. ಯಾವುದಾದರೂ ಜಾಹೀರಾತು ಶೂಟಿಂಗ್ ಅಥವಾ ಕಾಕತಾಳೀಯವಾಗಿ ಭೇಟಿಯಾಗಿರಬಹುದು. ತಾರೆಯರ ವೈಯಕ್ತಿಕ ಜೀವನದ ಬಗ್ಗೆ ಅನಗತ್ಯ ಊಹಾಪೋಹಗಳನ್ನು ಹಬ್ಬಿಸುವುದು ಸರಿಯಲ್ಲ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ.

ಮೃಣಾಲ್‌ - ಜೈಸ್ವಾಲ್‌ ವೈರಲ್‌ ವಿಡಿಯೋ



ಇದು ಬರೀ ಊಹಾಪೋಹವಷ್ಟೇ?

ಈ ಹಿಂದೆ ನಟ ಧನುಷ್, ಅಕ್ಕಿನೇನಿ ಕುಟುಂಬದ ನಟ ಸುಮಂತ್ ಹಾಗೂ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಅವರೊಂದಿಗೂ ಮೃಣಾಲ್ ಹೆಸರು ಕೇಳಿಬಂದಿತ್ತು. ಆದರೆ ಅವೆಲ್ಲವೂ ವದಂತಿಗಳಾಗಿಯೇ ಉಳಿದಿದ್ದವು. ಈಗ ಹರಡುತ್ತಿರುವ ಹೊಸ ಡೇಟಿಂಗ್ ಸುದ್ದಿಯ ಕುರಿತು ಮೃಣಾಲ್ ಠಾಕೂರ್ ಆಗಲಿ ಅಥವಾ ಯಶಸ್ವಿ ಜೈಸ್ವಾಲ್ ಆಗಲಿ ಯಾವುದೇ ರೀತಿಯ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಹಾಗಾಗಿ, ಪ್ರಸ್ತುತ ಹರಿಹಾಡುತ್ತಿರುವ ಈ ಮಾಹಿತಿಯನ್ನು ಕೇವಲ ಆಧಾರರಹಿತ ವದಂತಿ ಎಂದೇ ಪರಿಗಣಿಸಬೇಕಾಗಿದೆ.