ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮಗು ಪಡೆಯಲು ಮದುವೆಯೇ ಆಗಬೇಕಿಲ್ಲʼ; ಚರ್ಚೆ ಹುಟ್ಟುಹಾಕಿದ ನಟಿ ನಿತ್ಯಾ ಮೆನನ್‌ ಬೋಲ್ಡ್‌ ಹೇಳಿಕೆ

ಪ್ರತಿಭಾವಂತ ನಟಿ ನಿತ್ಯಾ ಮೆನನ್ ಅವರು ಮದುವೆ ಮತ್ತು ಮಾತೃತ್ವದ ಕುರಿತು ನೀಡಿರುವ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿವೆ. "ಮಕ್ಕಳನ್ನು ಪಡೆಯಲು ಮದುವೆ ಅನಿವಾರ್ಯವಲ್ಲ, ಅದು ಮಹಿಳೆಯ ವೈಯಕ್ತಿಕ ಹಕ್ಕು" ಎಂದು ಹೇಳುವ ಮೂಲಕ ಅವರು ಸಂಪ್ರದಾಯವಾದಿ ಆಲೋಚನೆಗಳಿಗೆ ಸವಾಲು ಹಾಕಿದ್ದಾರೆ.

ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿಯರಲ್ಲಿ ನಿತ್ಯಾ ಮೆನನ್‌ ಕೂಡ ಒಬ್ಬರು. ಅವರಿಗೀಗ 38 ವರ್ಷ ವಯಸ್ಸು. ಆದರೂ ಮದುವೆಯಾಗಿಲ್ಲ. ತಮಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅಂತಹ ಸಿನಿಮಾಗಳಲ್ಲಿ ನಟಿಸುತ್ತಾ, ಸಿಂಗಲ್‌ ಆಗಿ ಆರಾಮಾಗಿ ಬದುಕನ್ನು ಕಳೆಯುತ್ತಿದ್ದಾರೆ ನಿತ್ಯಾ. ಈಚೆಗೆ ಅವರು ಸಂದರ್ಶನವೊಂದರಲ್ಲಿ ಮದುವೆ ಮತ್ತು ಮಾತೃತ್ವದ ಕುರಿತು ಹಂಚಿಕೊಂಡಿರುವ ವಿಚಾರಗಳು ಸದ್ಯ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿವೆ. ಅಷ್ಟಕ್ಕೂ ಆಗಿದ್ದೇನು?

ಮದುವೆಗೂ ಮುನ್ನ ತಾಯಿ ಆಗೋದು ತಪ್ಪೇ?

ಈಚೆಗೆ ಸಂದರ್ಶನದಲ್ಲಿ "ಮದುವೆಗೆ ಮೊದಲು ಗರ್ಭಧರಿಸಬೇಕೆ ಅಥವಾ ನಂತರವೇ?" ಎಂಬ ಪ್ರಶ್ನೆ ನಿತ್ಯಾಗೆ ಎದುರಾದಾಗಿದೆ. ಅದಕ್ಕೆ ಒಂದು ಕ್ಷಣವೂ ಯೋಚಿಸದೇ, "ಮಕ್ಕಳನ್ನು ಹೊಂದಲು ಮದುವೆಯೇ ಬೇಕೆಂದಿಲ್ಲ. ಇನ್ನೊಂದು ಜೀವಕ್ಕೆ ಜನ್ಮ ನೀಡುವುದು ಮಹಿಳೆಯರಿಗೆ ದೇವರು ಕೊಟ್ಟಿರುವ ಹಕ್ಕು. ತಾಯಿಯಾಗಬೇಕೆಂಬ ಬಯಕೆಯನ್ನು ಸಾಮಾಜಿಕ ಗೌರವ ಅಥವಾ ಸ್ಥಾನಮಾನಕ್ಕೆ ತಳುಕು ಹಾಕುವ ಅಗತ್ಯವಿಲ್ಲ" ಎಂದು ನಿತ್ಯಾ ಮೆನನ್‌ ಹೇಳಿದ್ದಾರೆ.

Farah Khan: ಬಾಲಿವುಡ್‌ನ ಈ ನಿರ್ದೇಶಕಿಗೆ ಎರಡು ಬಾರಿ ಐವಿಎಫ್ ಗರ್ಭಧಾರಣೆ ವಿಫಲವಾಗಿತ್ತಂತೆ!

ತಮ್ಮ ಉತ್ತರ ನೀಡುವುದರ ಜೊತೆಗೆ "ನೀವು ಮದುವೆಯಾಗಲಿ ಅಥವಾ ಬಿಡಲಿ, ಗರ್ಭ ಧರಿಸಿ ಮಗು ಪಡೆಯಬಹುದು, ಅದರಲ್ಲಿ ತಪ್ಪೇನಿದೆ?" ಎಂದು ನಿರೂಪಕರಿಗೆ ನಿತ್ಯಾ ಮರುಪ್ರಶ್ನೆ ಎಸೆದಿದ್ದಾರೆ. "ಮದುವೆ ಇಲ್ಲದೆಯೇ ಮಗು ಪಡೆಯುವುದರಲ್ಲಿ ತಪ್ಪೇನಿಲ್ಲ. ನಿಮಗೆ ಮಗು ಬೇಕು ಆದರೆ ವೈವಾಹಿಕ ಜೀವನ ಬೇಡ ಎಂದರೆ ಅದರಲ್ಲಿ ತಪ್ಪೇನಿದೆ? ಈಗಿನ ಕಾಲದಲ್ಲಿ ಅದಕ್ಕೆ ಸಾಕಷ್ಟು ತಾಂತ್ರಿಕ ಅವಕಾಶಗಳಿವೆ. ಅನೇಕರು ಅದನ್ನು ಅನುಸರಿಸುತ್ತಿದ್ದಾರೆ ಕೂಡ" ಎಂದು ಸಖತ್ ಬೋಲ್ಡ್ ಆಗಿ ಪ್ರತಿಕ್ರಿಯಿಸಿದ್ದಾರೆ ನಿತ್ಯಾ ಮೆನನ್.‌ ಸದ್ಯ ಅವರು ಮದುವೆ ಮತ್ತು ಮಾತೃತ್ವದ ಕುರಿತು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿವೆ.

ನನಗೆ ಮದುವೆ ಬಗ್ಗೆ ವಿರೋಧವಿಲ್ಲ

"ನಾನು ಮದುವೆಯ ವಿರೋಧಿಯಲ್ಲ. ಆದರೆ ಮದುವೆ ಇಲ್ಲದ ಜೀವನ ವ್ಯರ್ಥ ಎಂದು ಕೆಲವರು ಹೇಳುತ್ತಾರಲ್ಲ, ಅಂತಹ ಯೋಚನೆಗೆ ನನ್ನ ವಿರೋಧವಿದೆ. ಮಾತೃತ್ವ ಎಂಬುದು ವೈಯಕ್ತಿಕವೇ ಹೊರತು ಸಾಮಾಜಿಕವಲ್ಲ. ತಾಯಿಯಾಗುವುದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ. ಅದಕ್ಕೂ ಮದುವೆಗೂ ಸಂಬಂಧವಿಲ್ಲ" ಎಂದು ನಿತ್ಯಾ ಮೆನನ್‌ ತಿಳಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಇವರನ್ನು "ಧೈರ್ಯವಂತೆ ಮತ್ತು ಇಂದಿನ ಕಾಲಕ್ಕೆ ಅಗತ್ಯವಾದ ಧ್ವನಿ" ಎಂದು ಕರೆದರೆ, ಇನ್ನು ಕೆಲವರು ಈ ಬಗ್ಗೆ ಎಂದಿನಂತೆ ವಿರೋಧವನ್ನು ಮಾಡಿದ್ದಾರೆ.