ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Farah Khan: ಬಾಲಿವುಡ್‌ನ ಈ ನಿರ್ದೇಶಕಿಗೆ ಎರಡು ಬಾರಿ ಐವಿಎಫ್ ಗರ್ಭಧಾರಣೆ ವಿಫಲವಾಗಿತ್ತಂತೆ!

Farah Khan IVF: ಬಾಲಿವುಡ್ ನ ಖ್ಯಾತ ನಿರ್ದೇಶಕಿ, ಡ್ಯಾನ್ಸ್ ಕೊರಿಯೊಗ್ರಾಫರ್ ಫರಾಹ್ ಖಾನ್ ಅವರು ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿ ಇದ್ದಾರೆ. ಇತ್ತೀಚೆಗಷ್ಟೇ ತಮ್ಮದೆ ಯೂಟ್ಯೂಬ್ ಚಾನೆಲ್ ಒಂದನ್ನು ಅವರು ಆರಂಭ ಮಾಡಿದ್ದಾರೆ. ಅಂತೆಯೇ ಇವರು ಆಪ್ತ ಸ್ನೇಹಿತೆ, ಟೆನಿಸ್ ಐಕಾನ್ ಸಾನಿಯಾ ಮಿರ್ಜಾ ಅವರ 'ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ' ಪಾಡ್‌ ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾನು ಈ ಹಿಂದೆ ಐವಿಎಫ್‌ (IVF) ಮಾಡಿಸಿ ಕೊಳ್ಳಲು ಹೋದ ಅನೇಕ ವಿಚಾರ ಶೇರ್ ಮಾಡಿದ್ದಾರೆ. ತಮ್ಮ 'ಓಂ ಶಾಂತಿ ಓಂ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಎರಡು ಬಾರಿ ಐವಿಎಫ್ ಗರ್ಭದಾರಣೆ ಮಾಡಿಸಲು ಹೋಗಿ ವಿಫಲವಾಗಿದೆ ಎಂದು ಈ ಪಾಡ್ ಕಾಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

ಎರಡು ಬಾರಿ ಐವಿಎಫ್ ಗರ್ಭಧಾರಣೆ ವಿಫಲವಾಗಿತ್ತು ಎಂದ ಫರಾಹ್ ಖಾನ್!

-

Profile Pushpa Kumari Oct 30, 2025 12:40 PM

ನವದೆಹಲಿ: ಬಾಲಿವುಡ್ ​ನ ಖ್ಯಾತ ನಿರ್ದೇಶಕಿ, ಡ್ಯಾನ್ಸ್ ಕೊರಿಯೊಗ್ರಾಫರ್ ಫರಾಹ್ ಖಾನ್ (Farah Khan) ಅವರು ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿ ಇದ್ದಾರೆ. ಇತ್ತೀಚೆಗಷ್ಟೇ ತಮ್ಮದೆ ಯೂಟ್ಯೂಬ್ ಚಾನೆಲ್ ಒಂದನ್ನು ಅವರು ಆರಂಭ ಮಾಡಿದ್ದಾರೆ. ಸಿನಿಮಾ ಸೆಲೆಬ್ರಿಟಿ ಹಾಗೂ ವಿಶೇಷ ಅತಿಥಿಗಳನ್ನು ಕರೆಸಿಕೊಂಡು ಸಿನಿಮಾ ಜರ್ನಿ ಇತರ ವಿಚಾರದ ಬಗ್ಗೆ ಮಾತನಾಡುತ್ತಾರೆ. ಅಂತೆಯೇ ಇವರು ಆಪ್ತ ಸ್ನೇಹಿತೆ, ಟೆನಿಸ್ ಐಕಾನ್ ಸಾನಿಯಾ ಮಿರ್ಜಾ (Sania Mirza) ಅವರ 'ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ' (Serving It Up with Sania’ podcast) ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾನು ಈ ಹಿಂದೆ ಐವಿಎಫ್‌ (IVF) ಮಾಡಿಸಿಕೊಳ್ಳಲು ಹೋದ ಅನೇಕ ವಿಚಾರ ಶೇರ್ ಮಾಡಿದ್ದಾರೆ. ತಮ್ಮ 'ಓಂ ಶಾಂತಿ ಓಂ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಎರಡು ಬಾರಿ ಐವಿಎಫ್ ಗರ್ಭದಾರಣೆ ಮಾಡಿಸಲು ಹೋಗಿ ವಿಫಲವಾಗಿದೆ ಎಂದು ಈ ಪಾಡ್ ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ಅವರು, ಮದುವೆಯಾದ ನನಗೆ ಗರ್ಭದಾರಣೆಯಾಗುವ ವಯಸ್ಸು ದಾಟಿತ್ತು. ಹಾಗಿದ್ದರು ಒಂದು ಮಗುವಿನ ತಾಯಿಯಾಗುವ ಆಸೆ , ಕನಸು ನನಗೂ ಇತ್ತು. ಹೀಗಾಗಿ ನನ್ನ ಪತಿ ಜೊತೆ ಮಾತುಕತೆ ನಡೆಸಿ ಐವಿಎಫ್ ಮೂಲಕ ಮಗು ಪಡೆಯಲು ನಿರ್ಧಾರಕ್ಕೆ ಬಂದೆವು. ಆದರೆ ಐವಿಎಫ್ ನಲ್ಲಿ ಎರಡು ಬಾರಿ ಕೂಡ ನನಗೆ ರಿಸಲ್ಟ್ ಸಿಕ್ಕಿಲ್ಲ. ಆಗ ನಾನು ತುಂಬಾ ಅಳುತ್ತಿದ್ದೆ. ಇಷ್ಟೆಲ್ಲ ಒತ್ತಡ ಬೇಸರ,ನೋವು ಇದ್ದಿದ್ದರು ವೃತ್ತಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದೆ. ನಾನು ಅದೇ ಸಮಯದಲ್ಲಿ ಓಂ ಶಾಂತಿ ಓಂ ಚಿತ್ರೀಕರಣವನ್ನೂ ಮಾಡುತ್ತಿದ್ದೆ ಎಂದು ಅವರು ಹೇಳಿದರು.

ಈ ಹಿಂದೆ ಫರಾಹ್ ಖಾನ್ ಅವರು ನಟಿ ದೇಬಿನ್ನಾ ಬೊನ್ನರ್ಜಿ ಅವರೊಂದಿಗಿನ ಪಾಡ್‌ ಕ್ಯಾಸ್ಟ್‌ನಲ್ಲಿ ಬಂಜೆತನ ಮತ್ತು ಐವಿಎಫ್‌ ನೊಂದಿಗಿನ ಬಗ್ಗೆ ಮಾತನಾಡಿದ್ದರು. ನನ್ನ ಮದುವೆ ಅನೇಕ ಕಾರಣ ದಿಂದ ಬಹಳ ವಿಳಂಬವಾಯಿತು. ನಾನು ಮದುವೆಯಾದಾಗ ನನಗೆ 40 ವರ್ಷ ವಯಸ್ಸಾಗಿತ್ತು. ಆದ್ದರಿಂದ ಗರ್ಭಧಾರಣೆಯು ಕೂಡ ತಡವಾಯ್ತು.

ಇದನ್ನೂ ಓದಿ:Toxic Movie: ಯಶ್‌ ಕಾರಣಕ್ಕೆ ʼಟಾಕ್ಸಿಕ್‌ʼ ಚಿತ್ರ ಬಿಡುಗಡೆ ವಿಳಂಬ? ನಿರ್ದೇಶಕಿ ಜತೆ ರಾಕಿಂಗ್‌ ಸ್ಟಾರ್‌ ಮುನಿಸಿಕೊಂಡ್ರಾ?

ಮದುವೆಯಾಗಿ ಎರಡು ವರ್ಷದ ಬಳಿಕ ನಾವು ಸ್ತ್ರೀರೋಗ ತಜ್ಞರ ಬಳಿಗೆ ಹೋದೆವು. ಆಗ ಅವರು ನಿಮಗೆ ತುಂಬಾ ವಯಸ್ಸಾಗಿದ್ದೆ. 'ನೈಸರ್ಗಿಕವಾಗಿ ಪ್ರಯತ್ನಿಸಬೇಡಿ' ಎಂದು ಸಲಹೆ ನೀಡಿದರು. ಹೀಗಾಗಿ ನಾವು ಕೃತಕ ಗರ್ಭಧಾರಣೆಯ ಮೊರೆಹೋಗಲೇ ಬೇಕಾಯಿತು. ಆಗ ನಮಗೆ ದಂಪತಿಗಳ ಬದುಕಲ್ಲಿ ಮಗುವಿನ ಪ್ರಾಮುಖ್ಯತೆ ಏನೆಂದು ಅರಿವಾಯಿತು‌ ಎಂದು ಅವರು ಹೇಳಿದರು.

ಫರಾಹ್ ಖಾನ್ ಅವರು ಡಿಸೆಂಬರ್ 9, 2004 ರಂದು ಚಲನಚಿತ್ರ ನಿರ್ಮಾಪಕ ಶಿರೀಶ್ ಕುಂದರ್ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಮಗು ಜನಿಸದ ಕಾರಣ ಇನ್ ವಿಟ್ರೊ ಕಾರ್ಯ ವಿಧಾನ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ. ಅದ ರಂತೆ ಫೆಬ್ರವರಿ 11, 2008 ರಂದು ಮಗ ಝಾರ್ ಮತ್ತು ಹೆಣ್ಣುಮಕ್ಕಳಾದ ದಿವಾ ಮತ್ತು ಅನ್ಯಾ ಎಂಬ ತ್ರಿವಳಿ ಮಕ್ಕಳನ್ನು ಪಡೆದರು. ಸದ್ಯ ಫರಾಹ್ ಖಾನ್ ಅವರು ಅಡುಗೆ ಆಧಾರಿತ ರಿಯಾಲಿಟಿ ಶೋ, ಸೆಲೆಬ್ರಿಟಿ ಮಾಸ್ಟರ್‌ಚೆಫ್‌ನ ನಿರೂಪಕಿಯಾಗಿ ಪ್ರಸಿದ್ಧರಾಗಿದ್ದಾರೆ. ಅದರ ಜೊತೆಗೆ ಯೂಟ್ಯೂಬ್ ಕುಕ್ಕಿಂಗ್ ಶೋ ಮೂಲಕವು ಬಹಳಷ್ಟು ಖ್ಯಾತಿ ಪಡೆಯುತ್ತಿದ್ದಾರೆ..