ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾಗದೇ ತಾಯಿ ಆಗ್ತಿದ್ದಾರಾ ನಟಿ ಪೂನಂ ಪಾಂಡೆ? ವೈರಲ್‌ ಫೋಟೋ ಬಗ್ಗೆ ಹುಟ್ಟಿಕೊಂಡಿವೆ ಹಲವು ಪ್ರಶ್ನೆ!

Poonam Pandey Pregnancy: ನಟಿ ಪೂನಂ ಪಾಂಡೆ ಅವರ ಪ್ರೆಗ್ನೆನ್ಸಿ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ದಿಢೀರ್‌ ಅಂತ ಪೂನಂ ಪಾಂಡೆ ತಮ್ಮ ಬೇಬಿ ಬಂಪ್ ಪ್ರದರ್ಶಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ. ಈ ಹಿಂದೆ ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟೀಕೆಗೆ ಗುರಿಯಾಗಿದ್ದ ನಟಿ, ಈಗ ಏಪ್ರಿಲ್ ಫೂಲ್ ಮಾಡಿದ್ರಾ?

ಬಾಲಿವುಡ್‌ನ ಮಾದಕ ನಟ ಪೂನಂ ಪಾಂಡೆ ಅವರು ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿಯಿಂದಲೇ ಫೇಮಸ್‌ ಆದವರು ಈ ನಟಿ. ಕೆಲ ಸಮಯದ ಹಿಂದಷ್ಟೇ ಸಾವಿನ ಸುದ್ದಿ ಹಂಚಿಕೊಂಡು ಶಾಕ್‌ ನೀಡಿದ್ದ ಪೂನಂ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ದಿಢೀರನೇ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಬೇಬಿ ಬಂಪ್‌ ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾರೆ.

ಮದುವೆಯಾಗದೇ ತಾಯಿ ಆಗ್ತಿದ್ದಾರಾ?

ಪೂನಂ ಪಾಂಡೆಗೆ ಇನ್ನೂ ಮದುವೆ ಆಗಿಲ್ಲ. ಇದೀಗ ಮದುವೆಗೂ ಮುನ್ನವೇ ಅವರು ತಾಯಿ ಆಗುವ ಪ್ರಯತ್ನದಲ್ಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈಗ ವೈರಲ್ ಆಗಿರುವ ಚಿತ್ರಗಳಲ್ಲಿ ಪೂನಂ ಕ್ಯಾಮೆರಾ ಕಡೆಗೆ ನೋಡಿ ನಗುತ್ತಾ ತಮ್ಮ ಬೇಬಿ ಬಂಪ್ ಅನ್ನು ಪ್ರದರ್ಶಿಸುತ್ತಿದ್ದಾರೆ. ಒಂದು ಫೋಟೋದಲ್ಲಿ ಅವರು ತಮ್ಮ ಟಿ-ಶರ್ಟ್‌ನಿಂದ ಹೊಟ್ಟೆಯ ಭಾಗವನ್ನು ಮುಚ್ಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಬೇಬಿ ಬಂಪ್‌ ಪ್ರದರ್ಶಿಸಿದ್ದಾರೆ. ಈ ಪೋಸ್ಟ್‌ಗೆ ಅವರು ಯಾವುದೇ ಕ್ಯಾಪ್ಷನ್‌ ನೀಡಿಲ್ಲ. ಬದಲಿಗೆ, ಕೇವಲ ಗರ್ಭಿಣಿ ಮಹಿಳೆ, ಮಗುವಿನ ಮುಖ ಮತ್ತು ಹಾಲಿನ ಬಾಟಲಿಯ ಎಮೋಜಿಗಳನ್ನು ಬಳಸಿದ್ದಾರೆ.

Poonam Pandey : ಸೆಲ್ಫಿ ಕೇಳೋ ನೆಪದಲ್ಲಿ ಪೂನಂ ಪಾಂಡೆಗೆ ಕಿಸ್‌ ಕೊಡೋಕೆ ಟ್ರೈ ಮಾಡಿದ ಅಭಿಮಾನಿ; ವಿಡಿಯೊ ಫುಲ್‌ ವೈರಲ್‌

ಇದು ಎಐ ಫೋಟೋ ಇರಬಹುದಾ?

ಇಂಥದ್ದೊಂದು ಅನುಮಾನ ನೆಟ್ಟಿಗರಲ್ಲಿ ಹುಟ್ಟಿಕೊಳ್ಳಲು ಕಾರಣವೂ ಇದೆ. ಏಕೆಂದರೆ, ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ನಾರ್ಮಲ್‌ ಆಗಿರುವಂತಹ ಫೋಟೋಗಳನ್ನೇ ಹಂಚಿಕೊಂಡಿದ್ದಾರೆ. ಆದರೆ ಈಗ ದಿಢೀರ್‌ ಅಂತ ಬೇಬಿ ಬಂಪ್‌ ಬರುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಬಹುಶಃ ಇದು ಎಐ ಫೋಟೋ ಇರಬೇಕು ಎಂದು ಕಾಮೆಂಟ್‌ ಮಾಡಲಾಗುತ್ತಿದೆ. "ಅದ್ಭುತವಾದ ಪ್ರಾಸ್ಥೆಟಿಕ್ (ಕೃತಕ ಹೊಟ್ಟೆ)! ಏಪ್ರಿಲ್ 1ಕ್ಕೆ ಒಂದು ದಿನ ಮುಂಚಿತವಾಗಿ ಬಂದಿದ್ದೀರಾ?" ಅಂತಲೂ ಕೆಲವರು ಕಾಮೆಂಟ್‌ ಮೂಲಕ ಕಾಲೆಳೆಯುತ್ತಿದ್ದಾರೆ.

ಪೂನಂ ಪಾಂಡೆ ಇನ್‌ಸ್ಟಾಗ್ರಾಮ್‌ ಪೋಸ್ಟ್



ಪೂನಂ ಪಾಂಡೆ ಯಾಮಾರಿಸಿದ್ದು ಇದೇ ಮೊದಲೇನಲ್ಲ?

ಹೌದು, ಪೂನಂ ಪಾಂಡೆ ಅವರು ಈ ರೀತಿ ಯಾಮಾರಿಸಿರುವುದು ಇದೇ ಮೊದಲೇನಲ್ಲ. 2024ರಲ್ಲಿ ತಾವು 'ಗರ್ಭಕಂಠದ ಕ್ಯಾನ್ಸರ್'ನಿಂದ ಸಾವನ್ನಪ್ಪಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದರು. "ಅಯ್ಯೋ, ಪೂನಂ ಪಾಂಡೆ ಹೋಗ್ಬಿಟ್ರಲ್ಲಪ್ಪ" ಎಂದು ಅವರ ಫ್ಯಾನ್ಸ್‌ ಒಂದೇ ಕಣ್ಣಲ್ಲಿ ಕಣ್ಣೀರಿಡುವಾಗ, ದಿಢೀರನೇ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದ ಪೂನಂ, "ನಾನು ಜೀವಂತವಾಗಿದ್ದೇನೆ. ನಾನು ಸತ್ತಿಲ್ಲ" ಎಂದಿದ್ದರು.

Year-Ender 2024: ಅಲ್ಲು ಅರ್ಜುನ್ ಬಂಧನ, ಪೂನಂ ಪಾಂಡೆ ಫೇಕ್ ನಿಧನ- 2024ರ ಟಾಪ್ 10 ಸಿನಿಮೀಯ ಪ್ರಕರಣಗಳಿವು

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ಮಾಡಬೇಕಾಯಿತು ಅಂತ ಸಮಾಜಾಯಿಷಿಯನ್ನು ಕೂಡ ನೀಡದ್ದರು ಪೂನಂ. ಆದರೂ ಸಾವಿನಂತಹ ಗಂಭೀರ ವಿಷಯದ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಬಹುತೇಕರು ಅವರ ನಡೆಯನ್ನು ಟೀಕಿಸಿದ್ದರು.

ಇದೀಗ ಗರ್ಭಿಣಿ ಎಂದು ಹೊಸ ದಾಳವನ್ನು ಉರುಳಿಸಿದ್ದಾರೆ ಪೂನಂ ಪಾಂಡೆ. ಇದು ನಿಜವೋ, ಸುಳ್ಳೋ ಎಂಬುದನ್ನು ಅವರೇ ಹೇಳಬೇಕು. ಸದ್ಯಕ್ಕಂತೂ ಈ ಫೋಟೋಗಳು ಸಖತ್‌ ವೈರಲ್‌ ಅಂತೂ ಆಗುತ್ತಿವೆ.