Poonam Pandey : ಸೆಲ್ಫಿ ಕೇಳೋ ನೆಪದಲ್ಲಿ ಪೂನಂ ಪಾಂಡೆಗೆ ಕಿಸ್ ಕೊಡೋಕೆ ಟ್ರೈ ಮಾಡಿದ ಅಭಿಮಾನಿ; ವಿಡಿಯೊ ಫುಲ್ ವೈರಲ್
ಸೆಲ್ಫಿ ಕೇಳುವ ನೆಪದಲ್ಲಿ ಬಂದ ಅಭಿಮಾನಿಯೋರ್ವ ಪೂನಂ ಪಾಂಡೆಗೆ ಬಲವಂತದಿಂದ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಪ್ರಚಾರದ ಗಿಮಿಕ್ ಎಂದು ಹೇಳಿದ್ದಾರೆ.

ಪೂನಂ ಪಾಂಡೆ

ಮುಂಬೈ: ಬಾಲಿವುಡ್ ಕಾಂಟ್ರವರ್ಸಿ ತಾರೆ ಪೂನಂ ಪಾಂಡೆ ( Poonam Pandey) ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಸದ್ಯ ಪೂನಂ ಪಾಂಡೆಯವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಅಭಿಮಾನಿಯೊಬ್ಬರು ಪೂನಂ ಪಾಂಡೆಗೆ ಮುತ್ತಿಡಲು ಪ್ರಯತ್ನಿಸಿದ್ದಾರೆ. ಆತ ಸೆಲ್ಫಿ ತೆಗೆದುಕೊಳ್ಳಲು ಬಂದು ಪೂನಂಗೆ ಬಲವಂತಾಗಿ ಚುಂಬಿಸಲು ಯತ್ನಿಸಿದ್ದಾನೆ. ತಕ್ಷಣ ಪೂನಂ ಪಾಂಡೆ ವ್ಯಕ್ತಿಯನ್ನು ತಳ್ಳಿದ್ದಾರೆ. ಅಲ್ಲಿದ್ದ ಪಾಪರಾಜಿಗಳು ಆತನಿಗೆ ವಾರ್ನ್ ಮಾಡಿದ್ದಾರೆ. ಸದ್ಯ ವೈರಲ್ ಆದ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಮುಂಬೈನ ಬೀದಿಯಲ್ಲಿ ಪೂನಂ ಪಾಂಡೆ ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಪಾಪರಾಜಿಗಳು ಅವರ ಫೋಟೋಗೋಸ್ಕರ ಮುಗಿ ಬೀಳುತ್ತಾರೆ. ಕೆಂಪು ಬಣ್ಣದ ಗೌನ್ ಹಾಗೂ ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕೆ ವ್ಯಕ್ತಿಯೊಬ್ಬ ಹಿಂದಿನಿಂದ ಸೈಲೆಂಟ್ ಆಗಿ ಬಂದು ಪಕ್ಕದಲ್ಲಿ ನಿಂತುಕೊಂಡಾಗ ನಟಿ ಭಯಗೊಂಡರು. ತಕ್ಷಣ ಸೆಲ್ಫಿಗಾಗಿ ಮನವಿ ಮಾಡಿದ್ದಾನೆ. ಇದಕ್ಕೆ ಸಮ್ಮಿತಿಸಿ ನಟಿ ಸೆಲ್ಫಿಗೆ ಕೊಡಲು ನಿಂತಾಗ, ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪೂನಂ ಪಾಂಡೆಗೆ ಕಿಸ್ ಮಾಡಲು ಯತ್ನಿಸಿದ್ದಾನೆ. ಅವರು ಆತನನ್ನು ತಳ್ಳಿದ್ದಾರೆ. ಆಗ ಅಲ್ಲಿರುವ ಪಾಪರಾಜಿಗಳು ಆತನನ್ನು ತಡೆದು ವಾರ್ನ್ ಮಾಡಿ ಕಳುಹಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದೆಲ್ಲಾ ಪೂನಂ ಪಾಂಡೆಯ ಪ್ರಚಾರದ ಗಿಮಿಕ್ ಎಂದು ಹೇಳಿದ್ದಾರೆ. ಕೆಲ ಬಳಕೆದಾರರು ಕಮೆಂಟ್ ಮಾಡಿ ಅತಿಯಾಗಿ ನಟಿಸಿದ್ದಕ್ಕಾಗಿ 50 ರೂಪಾಯಿ ಕಮ್ಮಿ ಕೊಡಿ ಎಂದರೆ ಮೂರನೆಯ ವ್ಯಕ್ತಿ ಮೊದಲು ಕ್ಯಾನ್ಸರ್ ಬಗ್ಗೆ ಸುಳ್ಳು ಆಯ್ತು, ಇದು ಮಿತಿ ಮೀರಿದೆ ಎಂದು ಬರೆದಿದ್ದಾರೆ. ಕಳೆದ ವರ್ಷ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಾನು ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಸತ್ತು ಹೋಗಿರುವುದಾಗಿ ಸುದ್ದಿ ಮಾಡಿದ್ದರು. ನಂತರ ದಿಢೀರನೇ ಪ್ರತ್ಯಕ್ಷವಾಗಿ ತಾನು ಬದುಕಿದ್ದೇನೆ ಇದು ಜಾಗೃತಿ ಮೂಡಿಸಲು ನಡೆಸಿದ ನಾಟಕವಾಗಿತ್ತು ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Poonam Pandey: ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ ಪಾಂಡೆ
ಪೂನಂ ಪಾಂಡೆ 2013 ರಲ್ಲಿ ನಶಾ ಎನ್ನುವ ಮೂವಿಯಿಂದ ಚಿತ್ರರಂಗಕ್ಕೆ ಆಗಮಿಸಿದರು. ಇವರು ಸಿನಿಮಾ ಕಡೆ ಗಮನಕ್ಕಿಂತ ಪಬ್ಲಿಸಿಟಿಗಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಕೂಡ ಹಲವಾರು ವಿಷಯಗಳ ಮೂಲಕ ಪಾಂಡೆ ಸುದ್ದಿಯಲ್ಲಿದ್ದರು.
ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ್ದ ಪೂನಂ
ಇತ್ತೀಚೆಗಷ್ಟೇ ಪೂನಂ ಪಾಂಡೆ (Poonam Pandey) ಮಹಾ ಕುಂಭಮೇಳ( Maha Kumbh Mela) ದಲ್ಲಿ ಭಾಗವಹಿಸಿದ್ದು, ಪುಣ್ಯ ಸ್ನಾನ ( amrit snaan) ಮಾಡಿದ್ದರು. ಗಂಗಾಸ್ನಾನ ತುಂಗಾಪಾನ ಎಂಬ ಮಾತಿನಂತೆ ಭಾರತೀಯರಲ್ಲಿ ಗಂಗೆಯ ಬಗ್ಗೆ ಭಾರೀ ಪವಿತ್ರ ಭಾವನೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾಯಾತ್ರೆ ಮಾಡಿ ಗಂಗೆಯಲ್ಲಿ ಸ್ನಾನ ಮಾಡಿ ಮಾಡಿದ ಪಾಪಗಳನ್ನೆಲ್ಲಾ ಪರಿಹಾರ ಮಾಡಬೇಕು ಎಂಬುದು ಬಹುತೇಕ ಹಿಂದೂ ಸನಾತನ ಧರ್ಮದ ಜನರ ನಂಬಿಕೆ. ಹೀಗಾಗಿ ಬಹುತೇಕರು ಸಾಯುವ ಮೊದಲೊಮ್ಮೆ ಗಂಗೆಗೆ ಭೇಟಿ ನೀಡಲು ಬಯಸುತ್ತಾರೆ. ಗಂಗೆ ಸತ್ತವರಿಗೆ ಮುಕ್ತಿ ನೀಡುತ್ತಾಳೆ. ಬದುಕಿದವರಿಗೆ ಪಾಪ ವಿಮೋಚನೆ ಮಾಡುತ್ತಾಳೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಅದೇ ರೀತಿ ಮಾಜಿ ಪೋರ್ನ್ ಸ್ಟಾರ್ ಬಾಲಿವುಡ್ ನಟಿ ಪೂನಂ ಪಾಂಡೆ ಗಂಗೆಗೆ ಭೇಟಿ ನೀಡಿದ್ದು, ಅಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.