ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kareena Kapoor Attacked: ಸೈಫ್ ಬಳಿಕ ಕರೀನಾ ಮೇಲೂ ನಡೆದಿತ್ತಾ ಡೆಡ್ಲಿ ಅಟ್ಯಾಕ್‌?

ಸಂದರ್ಶನವೊಂದರಲ್ಲಿ ಮಾತನಾಡಿದ ನಟ ರೋನಿತ್ ರಾಯ್ (Actor Ronit Roy), ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಯಿಂದ ಮರಳಿ ಕರೆತರುವಾಗ ಕರೀನಾ ಕಪೂರ್ ಅವರ ಕಾರಿನ ಮೇಲೆ ಜನಸಮೂಹ ದಾಳಿ ನಡೆಸಿತ್ತು. ಇದರಿಂದ ಅವರು ತುಂಬಾ ಭಯಭೀತರಾಗಿದ್ದರು. ಈ ಘಟನೆಯ ಬಳಿಕ ಸೈಫ್ ಪರಿವಾರಕ್ಕೆ ಹೆಚ್ಚುವರಿ ಭದ್ರತೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸೈಫ್ ಬಳಿಕ ಕರೀನಾ ಮೇಲೂ ನಡೆದಿತ್ತಾ ಡೆಡ್ಲಿ ಅಟ್ಯಾಕ್‌?

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Bollywood actor Saif Ali Khan) ಅವರಿಗೆ ಚೂರಿಯಿಂದ ಇರಿತವಾದ ಬಳಿಕ ಅವರ ಪತ್ನಿ ನಟಿ ಕರೀನಾ ಕಪೂರ್ (Actress Kareena Kapoor) ಮೇಲೂ ದಾಳಿ ನಡೆಸಲಾಗಿದೆ ಎಂದು ನಟ ರೋನಿತ್ ರಾಯ್ (Actor Ronit Roy) ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಯಿಂದ ಮರಳಿ ಕರೆತರುವಾಗ ಕರೀನಾ ಕಪೂರ್ ಅವರ ಕಾರಿನ ಮೇಲೆ ಜನಸಮೂಹ ದಾಳಿ ನಡೆಸಿತು. ಇದರಿಂದ ಅವರು ತುಂಬಾ ಭಯಭೀತರಾಗಿದ್ದರು. ಈ ಘಟನೆಯ ಬಳಿಕ ಸೈಫ್ ಪರಿವಾರಕ್ಕೆ ಹೆಚ್ಚುವರಿ ಭದ್ರತೆಯನ್ನು ನೀಡಲಾಗಿದೆ ಎಂದು ಹೇಳಿದರು.

ನಟ ಸೈಫ್ ಅಲಿ ಖಾನ್ ಅವರ ಇರಿತದ ಘಟನೆ ಎಲ್ಲರನ್ನೂ ಆಘಾತಕ್ಕೀಡು ಮಾಡಿತು ಮತ್ತು ಅದರ ನಂತರ, ಎಲ್ಲವನ್ನೂ ನೋಡಿಕೊಳ್ಳಲು ರೋನಿತ್ ರಾಯ್ ಅವರ ಭದ್ರತಾ ಸಂಸ್ಥೆಯನ್ನು ನೇಮಿಸಲಾಯಿತು. ಇತ್ತೀಚಿನ ಸಂಭಾಷಣೆಯಲ್ಲಿ, ಸೈಫ್ ಅವರ ಇರಿತದ ಪ್ರಕರಣದ ನಂತರದ ಘಟನೆಗಳ ಬಗ್ಗೆ ರಾಯ್ ಆಘಾತಕಾರಿ ವಿವರವನ್ನು ಬಹಿರಂಗಪಡಿಸಿದ್ದಾರೆ. ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಕರೀನಾ ಅವರ ಮೇಲೂ ದಾಳಿ ನಡೆಸಲಾಗಿದೆ ಎಂದು ನಟ ಹಂಚಿಕೊಂಡಿದ್ದಾರೆ.

roni

ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾದ ಅನಂತರ ಅವರನ್ನು ಮನೆಗೆ ಕರೆದುಕೊಂಡು ಬರಲಾಗುತ್ತಿತ್ತು. ಈ ವೇಳೆ ಎಲ್ಲೆಡೆ ಭಾರಿ ಜನಸಂದಣಿ ಇತ್ತು. ಕರೀನಾ ಕೂಡ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದರು. ಆಗ ಅವರ ಕಾರಿನ ಮೇಲೆ ದಾಳಿ ನಡೆಸಲಾಯಿತು. ಇದರಿಂದ ಅವರು ಭಯಭೀತರಾದರು ಎಂದು ರೋನಿತ್ ತಿಳಿಸಿದ್ದಾರೆ.

ಕರೀನಾ ಅವರ ಸುತ್ತಲೂ ಮಾಧ್ಯಮದವರೂ ಸೇರಿದ್ದರು. ಜನರು ಕೂಡ ಅವರಿಗೆ ತುಂಬಾ ಹತ್ತಿರ ಬಂದಿದ್ದರು. ಇದರಿಂದ ಅವರ ಕಾರು ಸ್ವಲ್ಪ ಅಲುಗಾಡಿತು. ಆಗ ಕರೀನಾ ಸೈಫ್‌ ಅವರನ್ನು ಮನೆಗೆ ಕರೆತರಲು ನನ್ನ ಬಳಿ ಕೇಳಿದರು. ಹಾಗಾಗಿ ನಾನು ಅವರನ್ನು ಕರೆದುಕೊಂಡು ಹೋಗಲು ಹೋದೆ. ಸೈಫ್ ಮನೆಗೆ ತಲುಪುವರೆಗೂ ನಮ್ಮ್ ಭದ್ರತೆ ಇತ್ತು. ಪೊಲೀಸ್ ಪಡೆಯಿಂದಲೂ ಬಲವಾದ ಬೆಂಬಲವಿತ್ತು ಎಂದು ಹೇಳಿದರು.

ಸೈಫ್ ಕಟ್ಟಡದಲ್ಲಿ ಸರಿಯಾದ ಭದ್ರತಾ ಕ್ರಮಗಳು ಜಾರಿಯಲ್ಲಿಲ್ಲ ಎಂದು ಅರಿತ ಪೊಲೀಸರು ಅವರಿಗೆ ಕೆಲವು ಸಲಹೆಗಳನ್ನು ನೀಡಿದರು. ಬಳಿಕ ಅವುಗಳನ್ನು ಜಾರಿಗೆ ತರಲಾಗಿದೆ ಎಂದು ರೋನಿತ್ ಹೇಳಿದ್ದಾರೆ.

ಇದನ್ನೂ ಓದಿ: ISL on hold: ಸುಪ್ರೀಂ ಕೋರ್ಟ್ ಆದೇಶ ನೀಡುವವರೆಗೆ ಐಎಸ್ಎಲ್ ಸ್ಥಗಿತ; ಫುಟ್ಬಾಲ್ ಫೆಡರೇಶನ್

ಬಾಂದ್ರಾದಲ್ಲಿರುವ ಸೈಫ್ ಮನೆಗೆ ಜನವರಿ 16ರಂದು ಮುಂಜಾನೆ ಸೈಫ್ ಅಲಿ ಖಾನ್ ಅವರ ಕಿರಿಯ ಮಗ ಜೆಹ್ ಅವರ ಕೋಣೆಯ ಮೂಲಕ ಒಳ ನುಗ್ಗಿದ ದುಷ್ಕರ್ಮಿಯೊಬ್ಬ ಸೈಫ್ ಮೇಲೆ ಹಲ್ಲೆ ನಡೆಸಿದ್ದನು. ಆರು ಬಾರಿ ಇರಿತಕ್ಕೆ ಒಳಗಾದ ಸೈಫ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅವರು ಚೇತರಿಸಿಕೊಂಡಿದ್ದಾರೆ.

ಸೈಫ್ ಕೊನೆಯ ಬಾರಿಗೆ ಜ್ಯುವೆಲ್ ಥೀಫ್‌ ಚಿತ್ರದಲ್ಲಿ ಕಾಣಿಸಿಕೊಂಡರು. ಇದಕ್ಕೂ ಮೊದಲು, ಅವರು ಜೂನಿಯರ್ ಎನ್ ಟಿಆರ್ ಅಭಿನಯದ 'ದೇವರ: ಭಾಗ 1' ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಪ್ರಿಯದರ್ಶನ್ ನಿರ್ದೇಶನದ ಥ್ರಿಲ್ಲರ್ ಚಿತ್ರವೊಂದರಲ್ಲಿ 17 ವರ್ಷಗಳ ಅನಂತರ ಅಕ್ಷಯ್ ಕುಮಾರ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಹೈವಾನ್ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ