World Record: 216 ಗಂಟೆಗಳ ಭರತನಾಟ್ಯ ಪ್ರದರ್ಶನ: ವಿಶ್ವ ದಾಖಲೆ ಬರೆದ ಉಡುಪಿಯ ವಿದುಷಿ ದೀಕ್ಷಾ
ಉಡುಪಿಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ನಿರಂತರ 216 ಗಂಟೆಗಳ ಕಾಲ (9 ದಿನ) ಭರತನಾಟ್ಯವನ್ನು ಪ್ರದರ್ಶಿಸಿ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ. ಅವರಿಗೆ ಶನಿವಾರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಮನೀಶ್ ಜಪ್ಲೊಯ್ ವಿತರಿಸಿದರು.

-

ಉಡುಪಿ: ಇತ್ತೀಚೆಗಷ್ಟೇ ಮಂಗಳೂರಿನ ರೆಮೋನಾ ಇವೆಟ್ ಪಿರೇರಾ (Remona Yvette Pereira) ಎನ್ನುವ ವಿದ್ಯಾರ್ತಿನಿ 170 ಗಂಟೆಗಳ ಭರತನಾಟ್ಯ ಪ್ರದರ್ಶಿಸಿ (Bharatanatyam performance) ವಿಶ್ವ ದಾಖಲೆ ಬರೆದಿದ್ದರು. ಇದೀಗ ಉಡುಪಿಯ (Udupi) ವಿದುಷಿ ದೀಕ್ಷಾ ವಿ. (Vidushi Deeksha v.) ಈ ದಾಖಲೆಯನ್ನು ಮುರಿದಿದ್ದಾರೆ. ದೀಕ್ಷಾ ನಿರಂತರ 216 ಗಂಟೆಗಳ ಭರತನಾಟ್ಯವನ್ನು ಆಗಸ್ಟ್ 30ರ ಅಪರಾಹ್ನ 3.30ಕ್ಕೆ ಪೂರ್ಣಗೊಳಿಸಿದ್ದಾರೆ. ಇವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Golden Book of World Records) ಪ್ರಮಾಣ ಪತ್ರವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಏಷ್ಯಾ ಮುಖ್ಯಸ್ಥ ಮನೀಶ್ ಜಪ್ಲೊಯ್ ವಿತರಿಸಿದರು.
ಪ್ರದರ್ಶನದ ಬಳಿಕ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದುಷಿ ದೀಕ್ಷಾ ಅವರನ್ನು ಅಭಿನಂದಿಸಿದರು.
Golden Girl Vidushi #Deeksha ...#WorldRecord #goldenbook #udupi #bharathanatyam pic.twitter.com/EUfELtubTr
— Bhavanisutha (@laveenkotian) August 29, 2025

ಬ್ರಹ್ಮಾವರ ಆರೂರು ಗ್ರಾಮದ ದೀಕ್ಷಾ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಕಾಲೇಜಿನಲ್ಲಿ ಆಗಸ್ಟ್ 21ರಿಂದ ನಿರಂತರ ಭರತನಾಟ್ಯವನ್ನು ಪ್ರದರ್ಶಿಸಿದ್ದಾರೆ. 9 ದಿನಗಳಲ್ಲಿ ದೀಕ್ಷಾ ಭರತನಾಟ್ಯದ ಮೂಲಕ ನವರಸ ವೈಭವಂ ಅನ್ನು ಪ್ರದರ್ಶಿಸಿದರು.
SHE DID IT 🔥💪❤️
— Deekshith Udupi (@Dixithh_Poojary) August 30, 2025
Golden Book Of World Record In Bharatanatyam 👑
Vidhushi Deeksha from Udupi had previously broken Remona's 170hour record and now she set a new milestone by dancing for 216 hours, Making History 🔥 #Tulunad girls rocking 💪🔥❤️ pic.twitter.com/Lj0s46omUO

ಇದನ್ನೂ ಓದಿ: Assault: ನಾಯಿ ಕಾಣೆಯಾಗಿದ್ದಕ್ಕೆ ಕಾನ್‌ಸ್ಟೇಬಲ್ ಮೇಲೆ ಹಲ್ಲೆ
ನೂರಾರು ಮಂದಿ ಇವರ ಕಾರ್ಯಕ್ರಮವನ್ನು ವೀಕ್ಷಿಸಿದರು. ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು. ಅವರ ಈ ಅಪರೂಪದ ಸಾದನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಭಿನಂದನೆ ಪ್ರವಾಹವನ್ನೇ ಹರಿಸಿದ್ದಾರೆ.