ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?

Toxic Movie: ಇತ್ತೀಚೆಗೆ 'ತಬಾಹಿ'ಸಾಂಗ್‌ ರಿಲೀಸ್‌ ಆಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ. ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

ಟಾಕ್ಸಿಕ್‌ ಸಿನಿಮಾ

ಯಶ್ (Actor yash) ಮುಂಬರುವ ಗ್ಯಾಂಗ್‌ಸ್ಟಾರ್ ಆಕ್ಷನ್ ಡ್ರಾಮಾ 'ಟಾಕ್ಸಿಕ್' (Toxic Movie) ಚಿತ್ರವು ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇತ್ತೀಚೆಗೆ 'ತಬಾಹಿ'ಸಾಂಗ್‌ ರಿಲೀಸ್‌ ಆಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ (Vishal Mishra) ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ.

ಯಾವ ಸಾಂಗ್?

ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಒಂದು ಸಾಂಗ್ ಜೊತೆಗೆ ಹಿನ್ನೆಲೆ ಸಂಗೀತ ಜವಾಬ್ದಾರಿಯನ್ನು ರವಿ ಬಸ್ರೂರು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: Shruti Haasan: ಹೊಸ ಮನೆ ಗೃಹಪ್ರವೇಶ ಮಾಡಿದ ಶ್ರುತಿ ಹಾಸನ್! ಇಲ್ಲಿವೆ ಫೋಟೋಸ್‌

'ತಬಾಹಿ' ಸೇರಿ 4 ಹಾಡುಗಳನ್ನು ವಿಶಾಲ್ ಮಿಶ್ರಾ ಕಟ್ಟಿಕೊಡುತ್ತಿದ್ದಾರೆ. ಮತ್ತೊಂದು ಹಾಡಿಗೆ ಅವರೊಟ್ಟಿಗೆ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಕೈ ಜೋಡಿಸಿದ್ದಾರೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ.

ವಿಶಾಲ್ ಮಿಶ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಾಕ್ಸಿಕ್ ಚಿತ್ರದ ನಾಲ್ಕನೇ ಹಾಡಿನ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ವಿಶಾಲ್ ಮಿಶ್ರಾ ಪ್ರಸ್ತುತ ಸಂಗೀತ ಕಾರ್ಯಕ್ರಮಕ್ಕಾಗಿ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. "Toxic - PBS 4" ಎಂದು ಬರೆದುಕೊಂಡಿದ್ದಾರೆ. ಅಂದರೆ ಚಿತ್ರದ 4ನೇ ಹಾಡಿನ ಕೆಲಸ ನಡೆಯುತ್ತಿದೆ ಎಂದು ಸುಳಿವು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ವಿಶಾಲ್ ಮಿಶ್ರಾ ಜೊತೆಗೆ, ಚಿತ್ರವು ಪ್ರತಿಭಾನ್ವಿತ ತಂಡವನ್ನು ಹೊಂದಿದ್ದು, ರವಿ ಬಸ್ರೂರ್ , ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರು ಧ್ವನಿಪಥವನ್ನು ಸಂಯೋಜಿಸುತ್ತಿದ್ದಾರೆ . 'ಟಾಕ್ಸಿಕ್' 'ಲೇಡೀಸ್ & ಲೇಡೀಸ್' ಟೀಸರ್ ಹಾಡಿನ ಮೊದಲು, ತಯಾರಕರು 'ಲೇಡೀಸ್ & ಲೇಡೀಸ್' ಎಂಬ ಟೀಸರ್ ಅನ್ನು ಬಿಡುಗಡೆ ಮಾಡಿದರು.



'ತಬಾಹಿ' ಚಿತ್ರದ ವೀಡಿಯೋ ಸಾಂಗ್ ಬಿಡುಗಡೆ ಬೆನ್ನಲ್ಲೇ ಯಶ್ ಜೊತೆ ವಾಟ್ಸಪ್ ಕಾಲ್‌ನಲ್ಲಿ ಚರ್ಚೆ ನಡೆಸಿರುವ ಬಗ್ಗೆ ವಿಶಾಲ್ ಮಿಶ್ರಾ ಹಂಚಿಕೊಂಡಿದ್ದರು.ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಅಮಿತ್ ತಿವಾರಿ ಸೇರಿದಂತೆ ಹಲವು ವಿದೇಶಿ ನಟ, ನಟಿಯರು ಸಹ ನಟಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ

ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಚಿತ್ರೀಕರಿಸಲಾಗಿದ್ದು, ವಿವಿಧ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ.

Yashaswi Devadiga

View all posts by this author