Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ
Amruthadhaare Serial: ಸದ್ಯ ಭೂಮಿ ಮೇಲೆ ಧಾರಾವಾಹಿ ಕಥೆ ಸಾಗುತ್ತಿದೆ. ಅತ್ಯಂತ ಬೆಸರದಲ್ಲಿ ಇದ್ದ ಭೂಮಿ ಈಗ ಸ್ವಲ್ಪ ಖುಷಿ ಆಗಿದ್ದಾಳೆ. ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare Serial) ಭೂಮಿ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ರೆಸ್ಟ್ ಕ್ಯಾನ್ಸರ್ (Breast Cancer) ಇರೋ ವಿಚಾರ ಭೂಮಿಗೆ ಗೊತ್ತಾದ ದಿನದಿಂದ ಅತ್ಯಂತ ಭಾವುಕಳಾಗಿರುತ್ತಾಳೆ. ಇದೀಗ ಮಲ್ಲಿಯ ಸರ್‌ಪ್ರೈಸ್ (Surprise) ಎಂಟ್ರಿ ಕೂಡ ಆಗಿದೆ. ಮುಂದೇನು?
ಅತ್ಯಂತ ಬೆಸರದಲ್ಲಿ ಇದ್ದ ಭೂಮಿ
ಸದ್ಯ ಭೂಮಿ ಮೇಲೆ ಧಾರಾವಾಹಿ ಕಥೆ ಸಾಗುತ್ತಿದೆ. ಅತ್ಯಂತ ಬೆಸರದಲ್ಲಿ ಇದ್ದ ಭೂಮಿ ಈಗ ಸ್ವಲ್ಪ ಖುಷಿ ಆಗಿದ್ದಾಳೆ. ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ.
ಯಾವಾಗ ಭೂಮಿಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಯ್ತೋ ಅಲ್ಲಿಂದ ಭೂಮಿ ಸೋತು ಹೋಗಿದ್ದಾಳೆ. ಮಗಳಿಗೂ ತಮ್ಮನನ್ನು ನೋಡಿಕೊಳ್ಳಬೇಕು ಅಂತ ವಾರ್ನ್ ಕೂಡ ಮಾಡಿದ್ದಾಳೆ.
ಇದರ ಜೊತೆಗೆ ವೀಕ್ಷಕರು ಕೂಡ ಭೂಮಿ ನಟನೆಗೆ ಫಿದಾ ಆಗಿದ್ದಾರೆ. ಮೊದಲಿಗೆ ಈ ವಿಚಾರ ಭೂಮಿಗೆ ಗೊತ್ತಾಗಿದ್ದೇ ತಡ, ಗೌತಮ್‌ನಿಂದ ಕ್ರಮೇಣ ದೂರ ಉಳಿಯಲು ಶುರು ಮಾಡಿದ್ದಳು. ಅಷ್ಟೇ ಅಲ್ಲ ಗೌತಮ್‌ಗೆ ಈ ವಿಚಾರ ಗೊತ್ತಾಗದಂತೆ ನಿಭಾಯಿಸಿದ್ದಳು.
ಇದನ್ನೂ ಓದಿ: Pawan Kalyan: ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ; ಪತ್ನಿ ಭಾವುಕ
ಆದರೆ ರಾತ್ರಿ ತನ್ನ ಡೈರಿಯಲ್ಲಿ ತನಗಾದ ನೋವನ್ನು ಬರೆದಿದ್ದಾಳೆ ಭೂಮಿ. ಅಷ್ಟೇ ಅಲ್ಲ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ.
ಅಮೃತಧಾರೆಯಲ್ಲಿ ಭೂಮಿಕಾಗೆ ಅವಳ ನೆಚ್ಚಿನ ಪತಿ ಗೌತಮ್ ಒಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಭೂಮಿ ಬರೆದ ಡೈರಿಯಲ್ಲಿರುವ ಭಾವುಕ ಬರಹ, ಕವನಗಳನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಆದರೆ ಇದರಲ್ಲಿ ಜೈದೇವ್ ಹಾಗೂ ಶಕುಂತಲಾ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ.
ಈ ಪುಸ್ತಕವನ್ನು ಓದಿದ ಶಕುಂತಲಾ, ಶಕುನಿ ಮಾಮನ ಮುಂದೆ ಕೋಪ ವ್ಯಕ್ತಪಡಿಸಿದ್ದಾಳೆ. ನನ್ನ ಜೈದೇವ್ ಬಗ್ಗೆ ಇಷ್ಟು ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ. ಅವಳಿಗೆ ಧೈರ್ಯ ಎಷ್ಟಿರಬೇಡ? ಎಂದಿದ್ದಾಳೆ. ಶಕುಂತಲಾ ಪುಸ್ತಕವನ್ನು ಬಿಸಾಕಿರೋದನ್ನ ಗಮನಿಸಿದ ಲಕ್ಷ್ಮೀಕಾಂತ್, ನಿಜವಾಗಲೂ ನೀನು ಬದಲಾಗಿದ್ದೀಯಾ ಎಂದು ಪ್ರಶ್ನೆ ಇಟ್ಟಿದ್ದಾನೆ. ಶಕುಂತಲಾ ಕೂಡ ಜೈದೇವ್ ಮುಂದೆ ಈ ಬಗ್ಗೆ ಪ್ರಸ್ತಾಪ ಇಟ್ಟಿದ್ದಾಳೆ. ಜೈದೇವ್ ಹಾಗೂ ಶಕುಂತಲಾ ಸೇರಿ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ