ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Agnisakshi Serial: 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?

Agnisakshi Serial Kannada: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ . ಬರೋಬ್ಬರಿ ಏಳು ವರ್ಷಗಳ ಕಾಲ ತೆರೆ ಕಂಡ ಧಾರಾವಾಹಿ ಕನ್ನಡಿಗರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಸೀರಿಯಲ್ ನಟ-ನಟಿಯರು ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಡಿಂಪಲ್ ಕಪಲ್ ಗಳಾದ ಸಿಧ್ದಾರ್ಥ್ ಮತ್ತು ಸನ್ನಿಧಿ ವೀಕ್ಷಕರ ಮೋಸ್ಟ್ ಫೇವರಿಟ್ ಕಪಲ್ ಗಳಾಗಿದ್ದರು. ಇವತ್ತಿಗೂ ಕೂಡ ಈ ಜೋಡಿಯನ್ನು ಜನ ಇಷ್ಟಪಡುತ್ತಾರೆ. ಕಲರ್ಸ್ ಕನ್ನಡದಲ್ಲಿ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧವಾಗಿದೆ. ಚಾನೆಲ್ ಹಂಚಿಕೊಂಡಿರುವ ಪ್ರೋಮೋ ವೀಕ್ಷಕರ ಗಮನ ಸೆಳೆದಿದೆ, ಹಾಗಾದ್ರೆ ಈ ಸೀರಿಯಲ್‌ ನಾಯಕ ಯಾರು?

ಅಗ್ನಿಸಾಕ್ಷಿ ಧಾರಾವಾಹಿ

ಕನ್ನಡ ಕಿರುತೆರೆಯ (Kannada Serial) ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ (Agnisakshi). ಬರೋಬ್ಬರಿ ಏಳು ವರ್ಷಗಳ ಕಾಲ ತೆರೆ ಕಂಡ ಧಾರಾವಾಹಿ ಕನ್ನಡಿಗರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಸೀರಿಯಲ್ ನಟ-ನಟಿಯರು ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಡಿಂಪಲ್ ಕಪಲ್ ಗಳಾದ ಸಿಧ್ದಾರ್ಥ್ ಮತ್ತು ಸನ್ನಿಧಿ ವೀಕ್ಷಕರ ಮೋಸ್ಟ್ ಫೇವರಿಟ್ ಕಪಲ್ ಗಳಾಗಿದ್ದರು. ಇವತ್ತಿಗೂ ಕೂಡ ಈ ಜೋಡಿಯನ್ನು ಜನ ಇಷ್ಟಪಡುತ್ತಾರೆ. ಕಲರ್ಸ್ ಕನ್ನಡದಲ್ಲಿ (Colors Kannada) ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧವಾಗಿದೆ. ಚಾನೆಲ್ ಹಂಚಿಕೊಂಡಿರುವ ಪ್ರೋಮೋ ವೀಕ್ಷಕರ ಗಮನ ಸೆಳೆದಿದೆ, ಹಾಗಾದ್ರೆ ಈ ಸೀರಿಯಲ್‌ ನಾಯಕ ಯಾರು?

ಇದನ್ನೂ ಓದಿ: Mammootty: ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಶಮಂತ್ ಬ್ರೋ ಗೌಡ ನಾಯಕ

ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್​ಗೆ ಈಗ ಶಮಂತ್ ಬ್ರೋ ಗೌಡ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.

2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. . ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಈ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗ್ತಿದ್ದಾರೆ ಎನ್ನಲಾಗಿದೆ.



ಶಮಂತ್ ಅವರು ಈ ಮೊದಲು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಇನ್ನು ಹಳೆಯ ಸೀರಿಯಲ್‌ ನಲ್ಲಿ ಇದ್ದಾರೆ. ವೈಷ್ಣವಿ ಗೌಡ ಸೀತಾರಾಮ ಸೀರಿಯಲ್ ಬಳಿಕ ಮದುವೆಯಾಗಿದ್ದಾರೆ, ಅನುಷಾ ರಾವ್ ಕರಿಮಣಿ, ಸುಕೃತಾ ಭಾಗ್ಯಲಕ್ಷ್ಮಿ, ರಾಜೇಶ್ ಅವರು ಭಾಗ್ಯಲಕ್ಷ್ಮಿ ಮತ್ತು ಶಾರದೆ, ಶಶಾಂಕ್ ಅವರು ಲಕ್ಷ್ಮಿ ನಿವಾಸ, ಇಶಿತಾ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್‌; ಹೊಂಬಾಳೆಯದ್ದೇ ಪ್ಲ್ಯಾನ್

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ನಟಿಸಿರುವ ವೈಷ್ಣವಿ ಗೌಡ , ಮಾಯಾ ಪಾತ್ರಧಾರಿ ಇಶಿತಾ ವರ್ಷ, ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ, ಅಂಜಲಿ ಪಾತ್ರಧಾರಿ ಸುಕೃತಾ ನಾಗ್, ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ, ಗೌತಮ್ ಪಾತ್ರಧಾರಿ ಶಶಾಂಕ್, ರಾಧಿಕಾ ಪಾತ್ರಧಾರಿ ಅನುಷಾ ರಾವ್ ಎಲ್ಲರೂ ಆಗಾಗ ಒಟ್ಟಿಗೆ ಭೇಟಿ ಆಗಿ ಫೋಟೋಗಳನ್ನು ಶೇರ್‌ ಮಾಡ್ತಾ ಇರ್ತಾರೆ.

Yashaswi Devadiga

View all posts by this author