Mammootty: ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
Mammootty: ಕಳೆದ ವಾರ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾದ ಮಾದರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಯನಾಡ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರನ್ನು ಅಗೌರವಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಮಮ್ಮುಟ್ಟಿ ಅವರ ಬಳಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ನಟ ಮಮ್ಮುಟ್ಟಿ -
ಕಳೆದ ವಾರ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾದ ಮಾದರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಯನಾಡ್ ಸಿಪಿಎಂ (disrespecting Wayanad CPM ) ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರನ್ನು ಅಗೌರವಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಮಮ್ಮುಟ್ಟಿ ಅವರ ಬಳಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Chief Minister Pinarayi Vijayan) ಸೋಮವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ತಿರುವನಂತಪುರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೆ ತಿಳಿಸದೆ ನಟ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ನಟ ಒಳ್ಳೆಯ ಉದ್ದೇಶದಿಂದ ಅಲ್ಲಿಗೆ ಹೋಗಿದ್ದರು ಮತ್ತು ಮನೆಗಳಿಗೆ ಭೇಟಿ ನೀಡುವಾಗ ರಫೀಕ್ ಅವರೊಂದಿಗೆ ಸೇರಿಕೊಂಡರು ಎಂದು ಹೇಳಿದರು.
ಇದನ್ನೂ ಓದಿ: Rani Serial: ರಾಣಿಗೆ ಅಪ್ಪ ಇಲ್ವಾ? ಈ ಪಾತ್ರಕ್ಕೆ ನಟ ಯಾರು?
ಮುಖ್ಯಮಂತ್ರಿ ಪಿಣರಾಯಿ ಅವರು, ‘ಮಮ್ಮುಟ್ಟಿ ಅವರ ಭೇಟಿ ವಯನಾಡಿನ ಒಳಿತಿಗಾಗಿ ಮಾತ್ರ. ಅವರು ಅನುಭವಿಸಿದ ನೋವಿಗೆ ನಾನು ವಿಷಾದಿಸುತ್ತೇನೆ. ಕೇರಳಕ್ಕೆ ಗೌರವ ತರುವ ಮಮ್ಮುಟ್ಟಿಯಂತಹ ನಟನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ದಾಳಿ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ. ಉದ್ದೇಶಪೂರ್ವಕವಾಗಿ ಅವರಿಗೆ ನೋವುಂಟು ಮಾಡಿದ್ದರೆ, ಮುಖ್ಯಮಂತ್ರಿಯಾಗಿ ನಾನು ಅದಕ್ಕಾಗಿ ಸಾರ್ವಜನಿಕವಾಗಿ ಮಮ್ಮುಟ್ಟಿ ಬಳಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
'ನಟನಿಗೆ ಈ ರೀತಿ ಅವಮಾನವಾಗಬಾರದಿತ್ತು'
"ಆ ನಟನನ್ನು ಈ ರೀತಿ ಅವಮಾನಿಸಬಾರದಿತ್ತು" ಎಂದು ಪಿಣರಾಯಿ ಹೇಳಿದರು. ಭೇಟಿಯ ಸಮಯದಲ್ಲಿ ಮಮ್ಮುಟ್ಟಿ ಅವರು ರಫೀಕ್ ಜೊತೆ ಖಾಸಗಿಯಾಗಿ ಮಾತನಾಡಿದರು. ‘ನೀವು ನನ್ನ ಪಕ್ಕದಲ್ಲಿದ್ದರೆ, ನಾನು ನಿಮಗಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದು ಜನರು ಭಾವಿಸುತ್ತಾರೆ. ದಯವಿಟ್ಟು ದೂರವಿರಿ’ ಎಂದು ಮಮ್ಮುಟ್ಟಿ ತುಂಬಾ ಮೃದುವಾಗಿ ಕೇಳಿದರು. ಇದನ್ನು ಕೆಲವರು ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Thiruvananthapuram: Kerala CM Pinarayi Vijayan says, "Some reports suggested that CPI(M) social media activists were attacking Mammootty. If any person associated with the party has hurt him in any way or caused him mental distress through such campaigns, I openly apologise at… pic.twitter.com/PnvwyrJlae
— ANI (@ANI) March 9, 2026
ಚೆನ್ನೈನಲ್ಲಿ ಶೂಟ್ ಮುಗಿಸಿದ ಮಮ್ಮುಟ್ಟಿ ವಯನಾಡಿನ ಪುನರ್ವಸತಿ ಭಾಗಕ್ಕೆ ಭೇಟಿ ಕೊಟ್ಟರು. ಅವರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಈ ಮೂಲಕ ಭೇಟಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮುಗಿಸಲು ಬಯಸಿದ್ದರು.
ಇದನ್ನೂ ಓದಿ: Amruthadhaare Serial: ಮಲ್ಲಿಗೆ ಜೈದೇವ್‌ಗೆ ಕಾಟ; ಗೌತಮ್‌ಗೋಸ್ಕರ್ ಆನಂದ್ ಮಹಾತ್ಯಾಗ!
ಮಾರ್ಚ್ 7 ರಂದು ರಫೀಕ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಮ್ಮುಟ್ಟಿ ಅವರು ತಮ್ಮೊಂದಿಗೆ ಬರದಂತೆ ಹೇಳಿದ್ದರು. ಮಮ್ಮುಟ್ಟಿ ಉದ್ದೇಶಪೂರ್ವಕವಾಗಿ ತಮ್ಮನ್ನು ಅವಮಾನಿಸಲು ಪ್ರಯತ್ನಿಸಲಿಲ್ಲ, ಆದರೆ ರಫೀಕ್ ಅವರ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯನ್ನು ರಾಜಕೀಯವಾಗಿ ಅರ್ಥೈಸಬಹುದೆಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ರಫೀಕ್ ಸ್ಪಷ್ಟಪಡಿಸಿದ್ದರು.