ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai Bachchan: ಐಶ್ವರ್ಯಾ ರೈ ಕಾರಿಗೆ ಬಸ್‌ ಡಿಕ್ಕಿ; ಅಭಿಮಾನಿಗಳಿಗೆ ಆತಂಕ

ಮುಂಬೈಯಲ್ಲಿ ಬುಧವಾರ (ಮಾ. 26) ಸಂಜೆ ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಅವರ ಕಾರಿಗೆ ಹಿಂದಿನಿಂದ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ವೇಳೆ ಕಾರಿನಲ್ಲಿ ಐಶ್ವರ್ಯಾ ರೈ ಇರಲಿಲ್ಲ ಎನ್ನಲಾಗಿದೆ. ಕಾರಿಗೆ ಬಸ್‌ ಡಿಕ್ಕಿ ಹೊಡೆಯುವ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಐಶ್ವರ್ಯಾ ರೈ ಕಾರಿಗೆ ಬಸ್‌ ಡಿಕ್ಕಿ; ಅಭಿಮಾನಿಗಳಿಗೆ ಆತಂಕ

Profile Ramesh B Mar 26, 2025 9:20 PM

ಮುಂಬೈ: ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ (Aishwarya Rai Bachchan)ಅವರ ಕಾರಿಗೆ ಹಿಂದಿನಿಂದ ಬಸ್‌ ಡಿಕ್ಕಿ ಹೊಡೆದ ಘಟನೆ ಮುಂಬೈಯಲ್ಲಿ ಬುಧವಾರ (ಮಾ. 26) ಸಂಜೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ವೇಳೆ ಕಾರಿನಲ್ಲಿ ಐಶ್ವರ್ಯಾ ರೈ ಇರಲಿಲ್ಲ ಎನ್ನಲಾಗಿದೆ. ಕಾರಿಗೆ ಬಸ್‌ ಡಿಕ್ಕಿ ಹೊಡೆಯುವ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಘಟನೆ ವೇಳೆ ಐಶ್ವರ್ಯಾ ರೈ ಅವರ ಭದ್ರತಾ ಸಿಬ್ಬಂದಿ ಮಾತ್ರ ಕಾರಿನಲ್ಲಿದ್ದರು ಎಂದು ವರದಿಯೊಂದು ತಿಳಿಸಿದೆ. ಮುಂಬೈಯ ಜುಹುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಐಶ್ವರ್ಯಾ ಅವರಿಗೆ ಸೇರಿದ 1.3 ಕೋಟಿ ರೂ. ಬೆಲೆಬಾಳುವ ಟೊಯೊಟಾ ವೆಲ್‌ಫೈರ್‌ (Toyota Vellfire) ಕಾರು ಇದಾಗಿದ್ದು, ಹಿಂದಿನಿಂದ ಬಂದ ಬೆಸ್ಟ್‌ ಬಸ್‌ (BEST Bus) ಡಿಕ್ಕಿ ಹೊಡೆದಿದೆ. ಕೂಡಲೇ ನಟಿಯ ಭದ್ರತಾ ಸಿಬ್ಬಂದಿ ಕಾರಿನಿಂದ ಇಳಿದು ಪರೀಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆದಿದೆ. ಅದಾಗ್ಯೂ ಕಾರಿಗೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಕೆಲ ಹೊತ್ತಿನಲ್ಲಿ ಚಾಲಕ ಕಾರನ್ನು ಸ್ಥಳದಿಂದ ತೆಗೆದುಕೊಂಡು ಹೋಗಿದ್ದಾನೆ.

ಐಶ್ವರ್ಯಾ ರೈ ಅವರ ಕಾರಿಗೆ ಬಸ್‌ ಡಿಕ್ಕಿ ಹೊಡೆದ ವಿಡಿಯೊ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Aaradhya Bachchan: ಕೋರ್ಟ್‌ ಮೆಟ್ಟಿಲೇರಿದ ಆರಾಧ್ಯ ಬಚ್ಚನ್;‌ ಐಶ್ವರ್ಯಾ-ಅಭಿಷೇಕ್‌ ಪುತ್ರಿ ಕೋರ್ಟ್‌ಗೆ ಮಾಡಿರುವ ಮನವಿಯೇನು?

ಇನ್ನು ಪೊಲೀಸ್‌ ಅಧಿಕಾರಿಗಳು, ಯಾವುದೇ ಅಪಘಾತ ಸಂಭವಿಸಿಲ್ಲ ಎಂದಿದ್ದಾರೆ. ಬಸ್ ಚಾಲಕ ಹಾರ್ನ್ ಮಾಡಿದ್ದಾನೆ. ಹೀಗಾಗಿ ಕಾರು ಚಾಲಕ ವಾಹನದಿಂದ ಇಳಿದು ಹಾರ್ನ್ ಮಾಡುವ ಬಗ್ಗೆ ಪ್ರಶ್ನಿಸಿದ್ದಾನೆ. ಅದು ಬಿಟ್ಟು ಯಾವುದೇ ಅಪಘಾತ ನಡೆದಿಲ್ಲ ಎಂದಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ.

ಅಭಿಮಾನಿಗಳ ಪ್ರತಿಕ್ರಿಯೆ

ವಿಡಿಯೊ ವೈರಲ್‌ ಆಗುತ್ತಿದ್ದಂತೆ ಐಶ್ವರ್ಯಾ ರೈ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ʼʼಆಕೆಗೆ ಏನೂ ಸಂಭವಿಸದಿರಲಿʼʼ ಎಂದು ಒಬ್ಬರು ಹಾರೈಸಿದ್ದಾರೆ. ʼʼಐಶ್ವರ್ಯಾ ರೈ ಸುರಕ್ಷಿತವಾಗಿದ್ದಾರೆ ಎನ್ನುವ ನಂಬಿಕೆ ಇದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಕಾರಿಗೆ ಯಾವುದೇ ರೀತಿಯ ಡ್ಯಾಮೇಜ್‌ ಆಗಿಲ್ಲ. ಐಶ್ವರ್ಯಾ ಕೂಡ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಸಮಾಧಾನವಾಯ್ತುʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಅಪಘಾತದ ವೇಳೆ ಐಶ್ವರ್ಯಾ ಈ ಕಾರಿನಲ್ಲಿ ಇರಲಿಲ್ಲ ಎಂದು ತಿಳಿದು ಅಭಿಮಾನಿಗಳು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯದ ಪ್ರಾಜೆಕ್ಟ್‌

ಐಶ್ವರ್ಯಾ ರೈ ಕೊನೆಯದಾಗಿ ತಮಿಳಿನ ʼಪೊನ್ನಿಯಿನ್‌ ಸೆಲ್ವನ್‌ IIʼ ತಮಿಳು ಚಿತ್ರದಲ್ಲಿ ಕಾನಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ಈ ಔತಿಹಾಸಿಕ ಸಿನಿಮಾ 2023ರಲ್ಲಿ ತೆರೆಕಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದಲ್ಲದೆ ಐಶ್ಬರ್ಯಾ ಅವರ ಪಾತ್ರಕ್ಕೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳೂ ಅವರನ್ನು ಅರಸಿಕೊಂಡು ಬಂದಿವೆ. ಸದ್ಯ ಐಶ್ವರ್ಯಾ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹಲವು ನಿರ್ದೇಶಕರು ಅವರಿಗಾಗಿ ಕಥೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬೆಳ್ಳಿತೆರೆಗೆ ಕಂಬ್ಯಾಕ್‌ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳದ್ದು. ಅದಕ್ಕೆ ತಕ್ಕಂತೆ ಸದ್ಯದಲ್ಲೇ ಅವರ ಹೊಸ ಹಿಂದಿ ಚಿತ್ರ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.