ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajith Kumar: ಸ್ವಲ್ಪ ಶಾಂತವಾಗಿರಿ.... ಫ್ಯಾನ್ಸ್‌ಗೆ ನಟ ಅಜಿತ್‌ ಕುಮಾರ್‌ ರಿಕ್ವೆಸ್ಟ್‌!

Ajith Kumar Request Fans: ನಟ ಅಜಿತ್ ಕುಮಾರ್ ಸ್ಪೇನ್‌ ನಲ್ಲಿ ನಡೆದ ರೇಸಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ್ದು ಅವರನ್ನು ನೋಡಲು ಸೇರಿದ್ದ ಅಭಿಮಾನಿಗಳು ಜೋರಾಗಿ ಶಿಳ್ಳೆಹೊಡೆಯುವ ಮೂಲಕ ಹರ್ಷೋದ್ಗಾರ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಿದರು. ಆದರೆ, ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಅವರು ಸಂಯಮ ಮತ್ತು ಶಿಸ್ತು ಕಾಪಾಡುವಂತೆ ಅಭಿಮಾನಿಗಳಿಗೆ ಕೈ ಭಾಷೆಯಲ್ಲೆ ಮನವಿ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಬೆಂಗಳೂರು: ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ಸಿನಿಮಾ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಖ್ಯಾತಿ ಗಳಿಸಿದ್ದಾರೆ.‌ ಸಿನಿಮಾ ಶೂಟಿಂಗ್, ರೇಸಿಂಗ್ ಎಂದು ಹಲವು ರಂಗದಲ್ಲಿ ತೊಡಗಿ ಕೊಂಡಿರುವ ಅಜಿತ್ ಗೆ ಅಭಿಮಾನಿ ಬಳಗ ಕೂಡ ಹೆಚ್ಚಾಗಿಯೇ ಇದೆ. ನಟ ಅಜಿತ್ ಕುಮಾರ್ ಅವರಿಗೆ ರೇಸಿಂಗ್ ಮೇಲೆ ಇರುವ ಶಕ್ತಿ ಹೊಸದೇನಲ್ಲ. ಅವರು ಹಲವು ಸ್ಪರ್ಧೆಗಳಲ್ಲಿ ಭಾಗ ವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ, ಅವರು ಸ್ಪೇನ್‌ನಲ್ಲಿ ನಡೆದ ರೇಸಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಅವರನ್ನು ನೋಡಲು ಸೇರಿದ್ದ ಅಭಿಮಾನಿಗಳು ಜೋರಾಗಿ ಶಿಳ್ಳೆ ಹೊಡೆಯುವ ಮೂಲಕ ಹರ್ಷೋದ್ಗಾರ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಿದರು. ಆದರೆ, ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಅವರು ಸಂಯಮ ಮತ್ತು ಶಿಸ್ತು ಕಾಪಾಡುವಂತೆ ಅಭಿಮಾನಿಗಳಿಗೆ ಕೈ ಭಾಷೆಯಲ್ಲೆ ಮನವಿ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಸ್ಪೇನ್‌ನ ಸರ್ಕ್ಯೂಟ್ ಡಿ ಬಾರ್ಸಿಲೋನಾದಲ್ಲಿ ಇತ್ತೀಚಿಗೆ ರೇಸಿಂಗ್ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ನಟ ಅಜಿತ್ ಅವರು ಕೂಡ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಟನನ್ನು ನೋಡಿದ ಅಭಿಮಾನಿಗಳು ಶಿಳ್ಳೆ ಹೊಡೆಯಲು ಪ್ರಾರಂಭಿಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಅಜಿತ್ ಕುಮಾರ್, ಯಾರಿಗೂ ತೊಂದರೆ ಮಾಡದಂತೆ ಮತ್ತು ಶಿಳ್ಳೆ ಹೊಡೆಯದಂತೆ ಅಭಿಮಾನಿಗಳಿಗೆ ಕೈ ಸನ್ನೆ ಮೂಲಕ ಮನವಿ ಮಾಡಿದರು.

ವಿಡಿಯೋ ಇಲ್ಲಿದೆ



ಈ ವಿಡಿಯೋವನ್ನು ಅವರ ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಸದ್ಯ ಅಜಿತ್ ಅವರ ನಡತೆಯನ್ನು ಕಂಡು ಜನರು ಶ್ಲಾಘಿಸಿದ್ದಾರೆ.ಜುಲೈನಲ್ಲಿ, ಇಟಲಿಯ ಮಿಸಾನೊ ವರ್ಲ್ಡ್ ಸರ್ಕ್ಯೂಟ್‌ನಲ್ಲಿ ನಡೆದ ಜಿಟಿ 4 ಯುರೋಪಿಯನ್ ಸರಣಿಯ ವೇಳೆ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿತ್ತು.ಇದೀಗ ಅಜಿತ್ ಕುಮಾರ್ ಅವರು ರೇಸಿಂಗ್ ನ ಸುದೀರ್ಘ ವಿರಾಮದ ನಂತರ, ಅವರು ಇತ್ತೀಚೆಗೆ ಸ್ಪರ್ಧಾತ್ಮಕ ಮೋಟಾರ್‌ಸ್ಪೋರ್ಟ್ಸ್‌ಗೆ ಮರಳಿದ್ದಾರೆ.

ಇದನ್ನೂ ಓದಿ:Monk the Young Movie: ಇಂದಿನಿಂದ ಸಿನಿಮಾ ಬಜಾರ್‌ನಲ್ಲಿ ʼಮಾಂಕ್ ದಿ ಯಂಗ್ʼ; ಸ್ಕ್ಯಾನ್ ಮಾಡಿ ಚಿತ್ರ ನೋಡಿ

ಅಜಿತ್ ಅವರು ಕೊನೆಯದಾಗಿ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ನಟಿಸಿದ್ದು ಇದು 2025ರಲ್ಲಿ ಬಿಡುಗಡೆ ಯಾಗಿದೆ.. ಪ್ರಸ್ತುತ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಮುಂದಿನ ಚಿತ್ರವೂ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರೊಂದಿಗೆ ಇರಲಿದೆ. ಈ ನಡುವೆ ನಟ ಬೆಲ್ಜಿಯಂನ ಸ್ಪಾ-ಫ್ರಾಂಕೋರ್‌ ಚಾಂಪ್ಸ್‌ನಲ್ಲಿ ನಡೆಯಲಿರುವ ಜಿಟಿ4 ಸರಣಿಯ ಮೂರನೇ ಸುತ್ತಿಗೆ ಸಿದ್ಧತೆ ನಡೆ ಸುತ್ತಿದ್ದಾರೆ.