ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನನ್ನ ಆಕ್ಟಿಂಗ್‌ ನೋಡಿ ನನಗೇ ಅಸಹ್ಯ ಎನಿಸಿತ್ತುʼ; ನಟ ಅಖಿಲ್‌ ಅಕ್ಕಿನೇನಿ ಪ್ರಾಮಾಣಿಕ ಮಾತುಗಳಿಗೆ ಬಹುಪರಾಕ್‌

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ತಮ್ಮ 'ಏಜೆಂಟ್' ಸಿನಿಮಾದ ಹೀನಾಯ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, "ಚಿತ್ರದಲ್ಲಿ ನನ್ನ ಓವರ್ ಆಕ್ಟಿಂಗ್ ನೋಡಿ ನನಗೇ ಅಸಹ್ಯ ಎನಿಸಿತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಸೋಲಿನ ನಂತರ ಎರಡು ವರ್ಷಗಳ ಕಾಲ ನಟನೆಯಿಂದ ವಿರಾಮ ಪಡೆದಿದ್ದ ಅವರು, ಇತ್ತೀಚೆಗೆ ಬಿಡುಗಡೆಯಾದ 'ಲೆನಿನ್' ಚಿತ್ರದ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್‌ ಅವರು ಕೊನೆಗೂ ‘ಲೆನಿನ್‌’ ಸಿನಿಮಾದ ಮೂಲಕ ದೊಡ್ಡ ಗೆಲುವು ಪಡೆದುಕೊಂಡಿದ್ದಾರೆ. ಅದಕ್ಕೂ ಮುನ್ನ, ಅಂದರೆ ಮೂರು ವರ್ಷಗಳ ಹಿಂದೆ, ಅವರ ಅಭಿನಯದ ‘ಏಜೆಂಟ್‌’ ಸಿನಿಮಾ ತೆರೆಕಂಡಿತ್ತು. ಇದು ಅಖಿಲ್‌ ಅವರ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಸೋಲಾಗಿತ್ತು. ಆ ಸಿನಿಮಾದಿಂದ ನಿರ್ಮಾಪಕರು ಭಾರಿ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದರು. ಇದೀಗ ಆ ಸಿನಿಮಾದ ಸೋಲಿನ ಬಗ್ಗೆ ಅಖಿಲ್‌ ಮನಬಿಚ್ಚಿ ಮಾತನಾಡಿದ್ದಾರೆ. "ಆ ಚಿತ್ರದಲ್ಲಿ ನನ್ನ ನಟನೆಯನ್ನು ನೋಡಿ ನನಗೇ ಅಸಹ್ಯ ಎನಿಸಿತ್ತು" ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ನನ್ನನ್ನು ತೀವ್ರ ಸಂಕಟಕ್ಕೀಡುಮಾಡಿತ್ತು

ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಭಾರಿ ನಿರೀಕ್ಷೆಯೊಂದಿಗೆ ಮೂಡಿಬಂದಿದ್ದ 'ಏಜೆಂಟ್‌' ಸಿನಿಮಾ, 2023ರ ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವು ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಈ ಸಿನಿಮಾದ ಫಲಿತಾಂಶದ ನಂತರ ಸುಮಾರು ಎರಡು ವರ್ಷಗಳ ಕಾಲ ಅಖಿಲ್ ಅಭಿನಯದಿಂದ ಬ್ರೇಕ್ ತೆಗೆದುಕೊಂಡಿದ್ದರು. "ಏಜೆಂಟ್ ಸಿನಿಮಾದ ಸೋಲು ನನ್ನನ್ನು ತೀವ್ರ ಸಂಕಟಕ್ಕೀಡುಮಾಡಿತ್ತು" ಎಂದು ಅಖಿಲ್ ಅಕ್ಕಿನೇನಿ ಒಪ್ಪಿಕೊಂಡಿದ್ದಾರೆ.

Akhil Akkineni: ‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌! ಹೊಸ ದಿನಾಂಕ ರಿವೀಲ್‌

ನಾನು ಓವರ್ ಆಕ್ಟಿಂಗ್ ಮಾಡಿದ್ದೆ

"ಏಜೆಂಟ್ ಸಿನಿಮಾವು ಹೀನಾಯವಾಗಿ ಸೋತ ನಂತರ, ನಾನು ಅದನ್ನು ಪುನಃ ನೋಡಿದೆ. ಪರದೆಯ ಮೇಲೆ ನನ್ನನ್ನು ನೋಡಿ ನನಗೇ ತುಂಬಾ ಅಸಹ್ಯವೆನಿಸಿತು. ಬಹುತೇಕ ಪ್ರತಿಯೊಂದು ಸೀನ್‌ನಲ್ಲೂ ನಾನು ಓವರ್ ಆಕ್ಟಿಂಗ್ ಮಾಡಿದ್ದೆ ಎಂಬುದು ನನಗೇ ಸ್ಪಷ್ಟವಾಗಿ ಅರ್ಥವಾಗಿತ್ತು" ಎಂದು ಅಖಿಲ್ ನೇರವಾಗಿ ಹೇಳಿದ್ದಾರೆ.

ಫಸ್ಟ್ ಕಾಪಿ ನೋಡಿದಾಗಲೇ ಅನುಮಾನವಿತ್ತು

"ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮುಂಚೆಯೇ ಅದರ ಫಲಿತಾಂಶದ ಬಗ್ಗೆ ನನಗೆ ಕೆಲವು ಅನುಮಾನಗಳಿದ್ದವು. ಫಸ್ಟ್ ಕಾಪಿ ನೋಡಿದಾಗಲೇ ಸಿನಿಮಾ ಅಂದುಕೊಂಡಂತೆ ಬಂದಿಲ್ಲ ಎಂಬುದನ್ನು ಗ್ರಹಿಸಿದ್ದೆ. ಆ ವಿಷಯವನ್ನು ನನ್ನ ಆಪ್ತರ ಬಳಿ ಹಂಚಿಕೊಂಡಿದ್ದೆ ಕೂಡ. 'ಎಕೆ ಎಂಟರ್‌ಟೈನ್‌ಮೆಂಟ್ಸ್' ಬ್ಯಾನರ್‌ನಲ್ಲಿ ನಿರ್ಮಾಪಕ ಅನಿಲ್ ಸುಂಕರ ಈ ಪ್ರಾಜೆಕ್ಟ್‌ಗಾಗಿ ಕೋಟಿಗಟ್ಟಲೆ ರೂಪಾಯಿ ಬಜೆಟ್ ಹೂಡಿಕೆ ಮಾಡಿದ್ದರು. ನಾಯಕನಟನಾಗಿ ಆ ಹೂಡಿಕೆಯನ್ನು ಸಾಧ್ಯವಾದಷ್ಟು ರಿಕವರ್ ಮಾಡಲು ಸಿನಿಮಾಗೆ ಬೆಂಬಲವಾಗಿ ನಿಲ್ಲುವುದು ನನ್ನ ಜವಾಬ್ದಾರಿ ಎಂದು ಭಾವಿಸಿ ಪ್ರಚಾರ ಮಾಡಿದ್ದೆ" ಎಂದು ಅಖಿಲ್‌ ತಿಳಿಸಿದ್ದಾರೆ.

Akhil Akkineni: ಬಿಗ್ ಬಜೆಟ್ ಸಿನಿಮಾ ಮಾಡಿದರೂ ಬಹುತೇಕ ಎಲ್ಲವೂ ಫ್ಲಾಪ್- ಈ ನಟ ಯಾರು ಗೊತ್ತಾ?

ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕದೆ, ನಟನೆಯಲ್ಲಿದ್ದ ಲೋಪಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಮೂಲಕ ಅಖಿಲ್ ತೋರಿಸಿದ ಈ ಪ್ರಾಮಾಣಿಕತೆ ಪ್ರಸ್ತುತ ಟಾಲಿವುಡ್ ವಲಯದಲ್ಲಿ ಹಾಗೂ ಅಕ್ಕಿನೇನಿ ಅಭಿಮಾನಿಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಸದ್ಯ ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದಲ್ಲಿ ಅಖಿಲ್ ಅಕ್ಕಿನೇನಿ ಮತ್ತು ಭಾಗ್ಯಶ್ರೀ ಬೋರ್ಸೆ ಜೋಡಿಯಾಗಿ ನಟಿಸಿರುವ 'ಲೆನಿನ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಅಖಿಲ್ ವೃತ್ತಿಜೀವನದಲ್ಲೇ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ್ದು, ಅವರ ಕರಿಯರ್‌ಗೆ ಹೊಸ ಬೂಸ್ಟ್ ನೀಡಿದೆ.