ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶೂಟಿಂಗ್‌ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳನ್ನು ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ 2010 ರಲ್ಲಿ ತೆರೆಕಂಡ ಸಾಜಿದ್ ಖಾನ್ ನಿರ್ದೇಶನದ 'ಹೌಸ್‌ಫುಲ್' ಚಿತ್ರದ ಸೆಟ್‌ ನ ದೃಶ್ಯ ವೊಂದು ವೈರಲ್ ಆಗಿದ್ದು ಅಕ್ಷಯ್ ಸಾಹಸಮಯ ದೃಶ್ಯ ದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ವಿಡಿಯೋದಲ್ಲಿ, ಅಕ್ಷಯ್ ಕುಮಾರ್ ಯಾರದೇ ಬೆಂಬಲವಿಲ್ಲದೆ ಗೋಡೆ ಯೊಂದನ್ನು ಅತ್ಯಂತ ಸಲೀಸಾಗಿ ಏರುತ್ತಿ ರುವುದು ಕಂಡುಬರುತ್ತದೆ.

ಅಕ್ಷಯ್ ಕುಮಾರ್

ಮುಂಬೈ, ಡಿ. 11: ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್‌ ಬ್ಯುಸಿ ಇರುವ ನಟ ಅಂದ್ರೆ ಅದು ಅಕ್ಷಯ್ ಕುಮಾರ್. ಸಿನಿಮಾ ಮಾಡೋದ್ರಲ್ಲಿಯೂ ಅಕ್ಷಯ್ ಕುಮಾರ್ ಬಾಲಿವುಡ್​ನ ಉಳಿದ ನಟರಿಗಿಂತ ಭಿನ್ನವಾಗಿರುತ್ತಾರೆ. ಹೆಚ್ಚಾಗಿ ಶೂಟಿಂಗ್ ಸೆಟ್ ನಲ್ಲಿ ಸಾಹಸ ದೃಶ್ಯಗಳನ್ನು ಮಾಡಲು ಇವರು ಮುಂದಾಗುತ್ತಾರೆ. ಎಷ್ಟೋ ಭಾರಿ ಸಾಹಸ ದೃಶ್ಯಗಳಿಗೆ ಡ್ಯೂಪ್ ಬಳಸದೆ ತಾವೇ ನಟಿಸುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಟ ಅಕ್ಷಯ್ ಎತ್ತರದ ಗೋಡೆ ಏರಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೊವೊಂದು ಭಾರೀ ವೈರಲ್ (Viral Video) ಆಗುತ್ತಿದೆ. 15 ವರ್ಷಗಳ ಹಿಂದಿನ ವಿಡಿಯೊ ಇದಾಗಿದ್ದು ನಟನ ಕೌಶಲ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳನ್ನು ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ 2010 ರಲ್ಲಿ ತೆರೆಕಂಡ ಸಾಜಿದ್ ಖಾನ್ ನಿರ್ದೇಶನದ 'ಹೌಸ್‌ಫುಲ್' ಚಿತ್ರದ ಸೆಟ್‌ ನ ದೃಶ್ಯ ವೊಂದು ವೈರಲ್ ಆಗಿದ್ದು ಅಕ್ಷಯ್ ಸಾಹಸಮಯ ದೃಶ್ಯ ದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ವಿಡಿಯೋದಲ್ಲಿ, ಅಕ್ಷಯ್ ಕುಮಾರ್ ಯಾರದೇ ಬೆಂಬಲವಿಲ್ಲದೆ ಗೋಡೆ ಯೊಂದನ್ನು ಅತ್ಯಂತ ಸಲೀಸಾಗಿ ಏರುತ್ತಿರುವುದು ಕಂಡುಬರುತ್ತದೆ. ಈ ದೃಶ್ಯವನ್ನು ಚಿತ್ರೀಕರಣಕ್ಕಾಗಿ ರಿಹರ್ಸಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಡಿಯೋ ನೋಡಿ:



ರಿಹರ್ಸಲ್ ಸಂದರ್ಭದಲ್ಲಿ ನಿರ್ದೇಶಕ ಸಾಜಿದ್ ಖಾನ್ ಈ ರೀತಿಯಾಗಿ ಸೀನ್ ಇದ್ದರೂ ಗೋಡೆ ಏರಬೇಡಿ ಎಂದು ಸೂಚಿಸಿದ್ದರು. ಆದರೆ ಅಕ್ಷಯ್ ಕುಮಾರ್ ತಕ್ಷಣವೇ ಗೋಡೆ ಏರಲು ಆರಂಭಿ ಸುತ್ತಾರೆ. ಪಕ್ಕದಲ್ಲಿದ್ದ ನಟಿ ದೀಪಿಕಾ ಪಡುಕೋಣೆ ಅವರು ಅಕ್ಷಯ್ ಅವರ ಈ ಸಾಹಸಕ್ಕೆ ದಂಗಾಗಿದ್ದು ಅವರು ಮೇಲೆ ಏರಿದ್ದಾರೆ ನಾನೇನು ಮಾಡಲಿ?" ಎಂದು ಕಳವಳ ವ್ಯಕ್ತಪಡಿಸಿರುವುದು ಕಾಣಬಹುದು.

Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್‌ ಸಂಸದರು; ವಿಡಿಯೋ ನೋಡಿ

ಕ್ಷಣಾರ್ಧದಲ್ಲಿ ಅಕ್ಷಯ್ ಕುಮಾರ್ ಗೋಡೆಯ ತುದಿಗೆ ಏರಿದ್ದು ನಿರ್ದೇಶಕ ಸಾಜಿದ್ ಖಾನ್ ಅವರು ಅಕ್ಷಯ್ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ಲೈಕ್, ಕಾಮೆಂಟ್ ಗಳು ಬಂದಿವೆ. ಬಳಕೆದಾರರೊಬ್ಬರು 'ರಿಯಲ್ ಹೀರೋ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು 'ಬಾಲಿವುಡ್‌ನ ಡೇರ್‌ ಡೆವಿಲ್' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು “ಕ್ರೇಜಿ ಸ್ಟಾರ್ ಅಕ್ಷಯ್ ಕುಮಾರ್ ಸರ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಇತ್ತೀಚೆಗೆ ಇದೇ ವಿಚಾರವಾಗಿ 'ದಿ ಕಪಿಲ್ ಶರ್ಮಾ ಶೋ' ನಲ್ಲಿ ನಿರ್ದೇಶಕ ಮಹೇಶ್ ಭಟ್ ಅವರು ಮಾತನಾಡಿದ್ದರು.‌ ಹಾಲಿ ವುಡ್‌ನಲ್ಲಿ ಟಾಮ್ ಕ್ರೂಸ್ ಇರುವಂತೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಹೆಸರು ಪಡೆದಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಕ್ಷಯ್ ಅವರ ಸಾಹಸಮಯ ದೃಶ್ಯವನ್ನು ತಾನು ಕಣ್ಣಾರೆ ಕಂಡಿದ್ದಾಗಿ ತಿಳಿಸಿದ್ದರು.