ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akshay Kumar: ಹೆಂಡ್ತಿ-ಮಕ್ಕಳ ಜೊತೆ ವೆಕೇಶನ್‌ ಮೂಡ್‌ನಲ್ಲಿ ನಟ ಅಕ್ಷಯ್ ಕುಮಾರ್‌! ಜಾಲಿ ಟ್ರಿಪ್‌ ವಿಡಿಯೊ ಇಲ್ಲಿದೆ

ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ತನ್ನ ಮಕ್ಕಳ ಜೊತೆ ಹಾಲಿಡೇ ಎಂಜಾಯ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಟ್ವಿಂಕಲ್ ಖನ್ನಾ ಅವರು ತಮ್ಮ ಪಿಕ್ನಿಕ್ ದಿನದ ಒಂದು ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪತ್ನಿ ಹಾಗೂ ಮಕ್ಕಳ ಜೊತೆ ನಟ ಅಕ್ಷಯ್ ಜಾಲಿ ಟ್ರಿಪ್- ವಿಡಿಯೊ ಇಲ್ಲಿದೆ

Profile Pushpa Kumari Jul 8, 2025 2:08 PM

ನವದೆಹಲಿ: ನಟ ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ಹೀರೋಗಳಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ನೀಡಿ ಸಿನಿ ಪ್ರೇಕ್ಷಕರ ಮನ ಗೆಲ್ಲುವ ನಟ ಅಕ್ಷಯ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ರವರು ಚಿತ್ರರಂಗದಲ್ಲಿ ಹಿಂದುಳಿಯುತ್ತಿದ್ದಾರೆ. ರಕ್ಷಾ ಬಂಧನ್,ಕೇಸರಿ: ಚಾಪ್ಟರ್ 2 ಹೀಗೆ ಇನ್ನಿತರ ಸಿನಿಮಾಗಳನ್ನು ಮಾಡಿದ್ದರೂ ಕೂಡ ಹಿಟ್ ಆಗಿಲ್ಲ. ಸಿನಿಮಾಗಳು ಎಷ್ಟೇ ಫ್ಲಾಪ್ ಆದರೂ ಕೂಡ ಮತ್ತಷ್ಟು ಹೊಸ ಸಿನಿಮಾದೊಂದಿಗೆ ತೆರೆಯ ಮೇಲೆ ಬರಲು ಅಕ್ಷಯ್ ರೆಡಿಯಾಗಿದ್ದಾರೆ. ಇದರ ನಡುವೆ ನಟ ಅಕ್ಷಯ್ ಫ್ಯಾಮಿಲಿಗೂ‌ ಹೆಚ್ಚು ಸಮಯ ನೀಡುತ್ತಾರೆ. ಇದೀಗ‌ ಸಿನಿಮಾದ ಬ್ಯುಸಿ ಶೆಡ್ಯೂಲ್ ನಡುವೆಯೂ ತನ್ನ ಫ್ಯಾಮಿಲಿಯೊಂದಿಗೆ ಪಿಕ್ ನಿಕ್ ಕೈಗೊಂಡಿದ್ದಾರೆ‌. ಸದ್ಯ ನಟ ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ಅವರು ತಮ್ಮ ಮಕ್ಕಳ ಜೊತೆ ಲೈಫ್​ ಎಂಜಾಯ್​ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.

ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ತನ್ನ ಮಕ್ಕಳ ಜೊತೆ ಹಾಲಿಡೇ ಎಂಜಾಯ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಟ್ವಿಂಕಲ್ ಖನ್ನಾ ಅವರು ತಮ್ಮ ಪಿಕ್ನಿಕ್ ದಿನದ ಒಂದು ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಟ್ವಿಂಕಲ್ ಖನ್ನಾ ಅವರು ಹಸಿರು ಬೆಟ್ಟಗಳ ಮಧ್ಯೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ನಟ ಅಕ್ಷಯ್ ಮಕ್ಕಳು ಆರವ್ ಮತ್ತು ನಿತಾರಾ ಜೊತೆ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ನಟ ಅಕ್ಷಯ್ ಕುಮಾರ್ ಮಕ್ಕಳೊಂದಿಗೆ ಕಳೆದ ಅತ್ಯಮೂಲ್ಯ ಕ್ಷಣದ ದೃಶ್ಯವನ್ನು ಟ್ವಿಂಕಲ್ ಕ್ಯಾಪ್ಚರ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು, "ವಾವ್ ಪರ್ಫೆಕ್ಟ್" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಸುಂದರವಾದ ಸ್ಥಳದಲ್ಲಿ ಸುಂದರ ವಾದ ಕುಟುಂಬ," ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಬಾಲಿವುಡ್‌ನ ಪ್ರಮುಖ ಜೋಡಿಗಳಲ್ಲಿ ಒಬ್ಬರು. ಅಂದಹಾಗೆ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾರದ್ದು ಲವ್ ಮ್ಯಾರೇಜ್ ಆಗಿದ್ದು ಪರಸ್ಪರ ಪ್ರೀತಿಸುತ್ತಿದ್ದ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡರು.2001 ರಲ್ಲಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ವಿವಾಹ ವಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಕ್ಷಯ್ ಮುಂಬರುವ ಸಿನಿಮಾ ಭೂತ್ ಬಾಂಗ್ಲಾ ಆಗಿದ್ದು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದಾರೆ. 2026, ಏಪ್ರಿಲ್ 2 ರಂದು ಈ ಸಿನಿಮಾ ಬಿಡುಗಡೆ ಯಾಗಲಿದ್ದು ಚಿತ್ರದಲ್ಲಿ ತಭು ಮತ್ತು ಪರೆಶ್ ರಾವಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ವಾಮಿಕಾ ಗಬ್ಬಿ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ