ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ: ಪಾರ್ಟ್ ಒನ್’ ಬಿಡುಗಡೆಯ (Ramayana Movie part 1) ದಿನ ಸಮೀಪಿಸುತ್ತಿದ್ದಂತೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ವಿಶೇಷ ಪ್ರದರ್ಶನವನ್ನು ನವೆಂಬರ್ 3ರಂದು ಮುಂಬೈನ ಲೋವರ್ ಪರೇಲ್ನಲ್ಲಿರುವ ಐಮ್ಯಾಕ್ಸ್ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಚಿತ್ರತಂಡ, ಕಲಾವಿದರು ಹಾಗೂ ಬಾಲಿವುಡ್ನ (Bollywood) ಹಲವು ಗಣ್ಯರಿಗೆ ವಿಶೇಷ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿತ್ತು.
ಈ ವಿಶೇಷ ಪ್ರದರ್ಶನಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಹಿರಿಯ ನಟಿ ನೀತು ಕಪೂರ್ ಆಗಮಿಸಿ ಎಲ್ಲರ ಗಮನ ಸೆಳೆದರು. ಚಿತ್ರದಲ್ಲಿ ಭಗವಾನ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಣಬೀರ್ ಕಪೂರ್ ಅವರಿಗೆ ಬೆಂಬಲ ನೀಡಲು ಇಬ್ಬರೂ ಆಗಮಿಸಿದ್ದರು.
ಆಲಿಯಾ ಭಟ್ ಸಮುದ್ರ ನೀಲಿ ಬಣ್ಣದ ಸುಂದರ ಸೀರೆಯೊಂದಿಗೆ ಭಾರೀ ಕಸೂತಿ ಕೆಲಸವಿರುವ ಹಾಲ್ಟರ್ನೆಕ್ ಬ್ಲೌಸ್ ಧರಿಸಿ ಮಿಂಚಿದರು. ಮತ್ತೊಂದೆಡೆ ನೀತು ಕಪೂರ್ ಕೌಲ್ ನೆಕ್ ಟಾಪ್ ಹಾಗೂ ವೈಡ್ ಲೆಗ್ ಟ್ರೌಸರ್ ಒಳಗೊಂಡ ಕಂದು ಬಣ್ಣದ ಸಮನ್ವಯ ಉಡುಪಿನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು. ಅತ್ತೆ-ಸೊಸೆ ಜೋಡಿ ಕ್ಯಾಮೆರಾಗಳ ಮುಂದೆ ನಗುನಗುತ್ತಾ ಪೋಸ್ ನೀಡಿದ್ದು, ಅವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Bigg Boss Kannada 13: ಪ್ರಶಾಂತ್-ತಾಂಡವ್ಗೆ ಕಿಚ್ಚನ ಚಪ್ಪಾಳೆ ಸಿಗದಿದ್ದೇಕೆ? ಸುದೀಪ್ ಹೇಳಿದ್ದೇನು?
ರಣಬೀರ್ ಕಪೂರ್, ಸನ್ನಿ ಡಿಯೋಲ್ ಲುಕ್ಗೆ ಅಭಿಮಾನಿಗಳು ಫಿದಾ!
ಚಿತ್ರದ ನಾಯಕ ರಣಬೀರ್ ಕಪೂರ್ ಮರೂನ್ ಬಣ್ಣದ ಕುರ್ತಾ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸುಂದರ ಸಂಯೋಜನೆಯೊಂದಿಗೆ ಕಾಣಿಸಿಕೊಂಡರು. ಸರಳವಾದರೂ ಆಕರ್ಷಕವಾಗಿದ್ದ ಅವರ ಲುಕ್ ಅಭಿಮಾನಿಗಳ ಗಮನ ಸೆಳೆಯಿತು.
ಚಿತ್ರದಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿರುವ ಸನ್ನಿ ಡಿಯೋಲ್ ಕೂಡ ವಿಶೇಷ ಪ್ರದರ್ಶನಕ್ಕೆ ಆಗಮಿಸಿದ್ದರು. ಆಲ್ ವೈಟ್ ಸೂಟ್ ಹಾಗೂ ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿ ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚಿದರು.
ಈ ವೇಳೆ ಚಿತ್ರದಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸುತ್ತಿರುವ ರವಿ ದುಬೆ ಅವರು ಸನ್ನಿ ಡಿಯೋಲ್ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಹಿರಿಯ ನಟನಿಗೆ ತೋರಿದ ಈ ಗೌರವದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ 'ವಾವ್' ಎಂದು ಬರೆದರೆ, ಮತ್ತೊಬ್ಬರು 'ಎಂತಹ ಸುಂದರವಾದ ಗೌರವದ ನಡೆ' ಎಂದು ಪ್ರತಿಕ್ರಿಯಿಸಿದ್ದಾರೆ. ಹಲವರು ಹೃದಯದ ಎಮೋಜಿಗಳ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ತಾರೆಯರ ದಂಡೇ ಆಗಮನ!
ಈ ವಿಶೇಷ ಪ್ರದರ್ಶನಕ್ಕೆ ವಿವೇಕ್ ಒಬೆರಾಯ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಹಾಗೂ ಲಾರಾ ದತ್ತಾ ಸೇರಿದಂತೆ ಹಲವು ತಾರೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ್ದರು.
ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ತಮ್ಮ ಪತ್ನಿ ಹಾಗೂ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮತ್ತು ಮಕ್ಕಳೊಂದಿಗೆ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡರು. ಆಲಿಯಾ ಭಟ್ ಅವರ ಸಹೋದರಿ ಶಾಹೀನ್ ಭಟ್ ಹಾಗೂ ತಾಯಿ ಸೋನಿ ರಜ್ದಾನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಣಬೀರ್ ಕಪೂರ್ ಅವರ ಸೋದರ ಸಂಬಂಧಿಗಳಾದ ಆದರ್ ಜೈನ್ ಮತ್ತು ಅರ್ಮಾನ್ ಜೈನ್ ತಮ್ಮ ಪತ್ನಿಯರೊಂದಿಗೆ ವಿಶೇಷ ಪ್ರದರ್ಶನಕ್ಕೆ ಆಗಮಿಸಿದ್ದರು.
ನವೆಂಬರ್ 5ಕ್ಕೆ ತೆರೆಗೆ ‘ರಾಮಾಯಣ: ಪಾರ್ಟ್ ಒನ್’
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ರಾಮಾಯಣ: ಪಾರ್ಟ್ ಒನ್’ ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಾರೋ ದೂದ್ ಪೇಡಾ, ಒಬ್ಬೊಬ್ಬರನ್ನು ಬಿಡಲ್ಲ! ರೊಚ್ಚಿಗೆದ್ದ ಕಿರಣ್
ಬಿಡುಗಡೆಗೂ ಮುನ್ನವೇ ತಾರೆಯರ ಲುಕ್, ವಿಶೇಷ ಪ್ರದರ್ಶನದ ವಿಡಿಯೋಗಳು ಹಾಗೂ ಚಿತ್ರದ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿವೆ.