ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramayana Rama glimpse : ‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು? ವಿಡಿಯೋ ವೈರಲ್‌

Ramayana Rama glimpse : ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಾಮನ ಟೀಸರ್ ರಿಲೀಸ್ ಮಾಡಲಾಗ್ತಿದೆ. ಮುಂಬೈನಲ್ಲಿ ಒಂದು ದಿನ ಮುನ್ನ ಮಾಧ್ಯಮದವರಿಗೆ ಟೀಸರ್ ಪ್ರದರ್ಶನ ಮಾಡಲಾಗಿದೆ. ನೋಡಿದವರು ಹುಬ್ಬೇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀರಾಮನ ದರ್ಶನವಾಗಲಿದೆ. ರಣಬೀರ್ ಅವರ ಪತ್ನಿ ಮತ್ತು ನಟಿ ಆಲಿಯಾ ಭಟ್ ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತನಾಡುತ್ತಾ, ತಮ್ಮ ಪತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

ಆಲಿಯಾ ಭಟ್‌

ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಾಮನ ಟೀಸರ್ (Ramayana's Rama glimpse) ರಿಲೀಸ್ ಮಾಡಲಾಗ್ತಿದೆ. ಮುಂಬೈನಲ್ಲಿ ಒಂದು ದಿನ ಮುನ್ನ ಮಾಧ್ಯಮದವರಿಗೆ ಟೀಸರ್ ಪ್ರದರ್ಶನ ಮಾಡಲಾಗಿದೆ. ನೋಡಿದವರು ಹುಬ್ಬೇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀರಾಮನ ದರ್ಶನವಾಗಲಿದೆ. ರಣಬೀರ್ ಅವರ ಪತ್ನಿ ಮತ್ತು ನಟಿ ಆಲಿಯಾ ಭಟ್ ( Alia Bhatt ) ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತನಾಡುತ್ತಾ, ತಮ್ಮ ಪತಿಗೆ (Ranbir) ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

ಆಲಿಯಾ ಭಟ್‌ ಹೇಳಿದ್ದೇನು?

ಅಭಿಮಾನಿಗಳೊಂದಿಗಿನ ವರ್ಚುವಲ್ ಸಂವಾದದ ಕ್ಲಿಪ್‌ನಲ್ಲಿ, ಆಲಿಯಾ ರಾಮಾಯಣದ ರಾಮನ ಲುಕ್‌ ನೋಡಿ ತಮ್ಮ ಉತ್ಸಾಹವನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. "ರಾಮಾಯಣ ಟೀಸರ್‌ ನಾಳೆ ಬಿಡುಗಡೆಯಾಗಲಿದೆ. ನಾನು ಅದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಿದ್ದೇನೆ, ಆದ್ದರಿಂದ ಮತ್ತೊಮ್ಮೆ, ದಯವಿಟ್ಟು ಅಲ್ಲಿಗೆ ಹೋಗಿ ಅದನ್ನು ಬೆಂಬಲಿಸಿ" ಎಂದು ಹೇಳಿದರು.

ಇದನ್ನೂ ಓದಿ: BhagyaLakshmi serial: ಮದುವೆ ಬೇಡ ಎಂದ ಆದಿ; ಭಾಗ್ಯ ಶಾಕ್‌, ತಾಂಡವ್‌ ಮುಂದಿನ ನಡೆಯೇನು?

ರಣಬೀರ್ ಅವರ ಅಭಿನಯದ ಬಗ್ಗೆ ಮಾತನಾಡಿದ ಅವರು, "ಇದು ಸಂಪೂರ್ಣವಾಗಿ ಅದ್ಭುತವಾಗಿದೆ. ರಣಬೀರ್ ತುಂಬಾ ಸುಂದರವಾದ ಕೆಲಸವನ್ನು ಮಾಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದರು.



ಆಲಿಯಾ ತನ್ನ ಪತಿಗೆ ಹುರಿದುಂಬಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಸಂತೋಷಪಟ್ಟರು. ಒಬ್ಬರು, "ಆಲಿಯಾ ಯಾವಾಗಲೂ ರಣಬೀರ್‌ ಅಭಿಮಾನಿ" ಎಂದು ಬರೆದಿದ್ದಾರೆ.

ಎರಡು ಭಾಗಗಳಾಗಿ ಸಿನಿಮಾ ತೆರೆಗೆ

ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸಿದ್ದು 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರ್ತಿದೆ.

ಪಿಂಕ್ವಿಲ್ಲಾ ವರದಿಯ ಪ್ರಕಾರ, ಹೊಸ ಗ್ಲಿಂಪ್ಸ್ ವೀಕ್ಷಕರಿಗೆ ಚಿತ್ರದಲ್ಲಿನ ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ಸನ್ನಿ ಡಿಯೋಲ್ ಮತ್ತು ಯಶ್ ಅವರ ಲುಕ್‌ ಇರಲಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಪ್ರಸಿದ್ಧ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆಗಾಗಿ ಎಆರ್ ರೆಹಮಾನ್ ಜೊತೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: Raja Shivaji teaser: ‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್; ಸಲ್ಮಾನ್ ಖಾನ್ ಅತಿಥಿ ಪಾತ್ರ?

ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 2026 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ, ಆದರೆ ಎರಡನೇ ಭಾಗವು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ.

Yashaswi Devadiga

View all posts by this author