ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Alia Bhatt: ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!

Alia Bhatt: ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಅವರಿಬ್ಬರ ಕೆಮಿಸ್ಟ್ರಿ, ಪ್ರೀತಿ ನೋಡಿದ್ರೆ ಲಕ್ಷಾಂತರ ಹೃದಯಗಳು ಫಿದಾ ಆಗೋದು ಗ್ಯಾರಂಟಿ. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದು, ಈ ಜೋಡಿಗೆ ರಾಹಾ ಎಂಬ ಮುದ್ದಾದ ಮಗಳಿದ್ದಾಳೆ. ಆಲಿಯಾ ಭಟ್ತ ಮ್ಮ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗಿನ ವಕೇಶನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಆಲಿಯಾ ರಣಬೀರ್‌

ಆಲಿಯಾ ಭಟ್ (Alia Bhatt) ತಮ್ಮ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗಿನ ವಕೇಶನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಆಲಿಯಾ ಭಟ್ ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದು, "ಹಳೆಯ ಒಳ್ಳೆಯ ದಿನಗಳು. ಅಪ್ಪುಗೆಗಳು ಮತ್ತು ಇನ್ನೂ ಹೆಚ್ಚಿನವು" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗಳಲ್ಲಿ, ಅವರು ತಮ್ಮ ಮಗಳು ರಾಹಾ ಳನ್ನು ಅಪ್ಪಿಕೊಂಡಿರುವುದು ಕಂಡುಬರುತ್ತದೆ. ರಣಬೀರ್ ಕಪೂರ್ ಮತ್ತು ರಾಹಾ ಅವರೊಂದಿಗೆ ತಮ್ಮ ರಜೆಯನ್ನು ಆನಂದಿಸುತ್ತಿದ್ದಾರೆ ಆಲಿಯಾ.

ಲಕ್ಷಾಂತರ ಹೃದಯಗಳು ಫಿದಾ

ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಅವರಿಬ್ಬರ ಕೆಮಿಸ್ಟ್ರಿ, ಪ್ರೀತಿ ನೋಡಿದ್ರೆ ಲಕ್ಷಾಂತರ ಹೃದಯಗಳು ಫಿದಾ ಆಗೋದು ಗ್ಯಾರಂಟಿ. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದು, ಈ ಜೋಡಿಗೆ ರಾಹಾ ಎಂಬ ಮುದ್ದಾದ ಮಗಳಿದ್ದಾಳೆ.

ಇದನ್ನೂ ಓದಿ: Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಾಯ್ತು!

ಆಲಿಯಾ ಭಟ್ ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರು ಪತಿ ರಣಬೀರ್ ಮತ್ತು ಮಗಳು ರಾಹಾ ಅವರೊಂದಿಗೆ ಬೋಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕೆಳಗಿನ ಫೋಟೋಗಳಲ್ಲಿ, ಆಲಿಯಾ ಮಗಳು ರಾಹಾ ಜೊತೆ ಸಮಯ ಕಳೆಯುತ್ತಿರುವುದು ಕಂಡುಬರುತ್ತದೆ. ರಾಹಾ ಕೂಡ ಆಲಿಯಾಳನ್ನು ಅಪ್ಪಿಕೊಳ್ಳುತ್ತಿರುವುದು ಕಂಡುಬರುತ್ತದೆ. ಈ ಕ್ಷಣಗಳು ಆಲಿಯಾಳಿಗೆ ಅವಿಸ್ಮರಣೀಯ.



ನಟಿಯಾಗಿ, ಆಲಿಯಾ ಭಟ್ ತನ್ನ ಫಿಟ್ನೆಸ್ ಮತ್ತು ಫಿಗರ್ ಬಗ್ಗೆ ಗಮನಹರಿಸುತ್ತಾರೆ ಈಗ ಮಗಳ ಜೊತೆ ತನ್ನ ನೆಚ್ಚಿನ ಆಹಾರವನ್ನು ತಿಂದಿದ್ದಾರೆ. ಸೆಲ್ಫಿಗಳನ್ನು ಸಹ ತೆಗೆದುಕೊಂಡಿದ್ದಾರೆ. ಆಲಿಯಾ ರಣಬೀರ್ ಕಪೂರ್ ಜೊತೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿ, ಏಪ್ರಿಲ್ 2022 ರಲ್ಲಿ ಅವರನ್ನು ವಿವಾಹವಾದರು. ಅವರ ಪ್ರೇಮಕಥೆ "ಬ್ರಹ್ಮಾಸ್ತ್ರ" ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು

ಇದನ್ನೂ ಓದಿ: Anirudh Kavya: ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ? ಮದುವೆ ಸುಳಿವು ಕೊಟ್ಟೇ ಬಿಟ್ರಾ ಹಿರಿಯ ನಟ?

ಆಲಿಯಾ ಭಟ್ ಅವರ "ಆಲ್ಫಾ" ಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ಅವರು ಸಂಜಯ್ ಲೀಲಾ ಬನ್ಸಾಲಿ ಅವರ "ಲವ್ ಅಂಡ್ ವಾರ್" ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಿದ್ದಾರೆ.

Yashaswi Devadiga

View all posts by this author