Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಾಯ್ತು!
Amruthadhaare Serial: ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಿದ್ದಾಗಿದೆ. ಭೂಮಿ ಬೇಹುಗಾರಿಕೆ ಇಲ್ಲಿಂದ ಶುರು ಆಗಿದೆ. ಮಲ್ಲಿ ದಿಯಾ ವಿಚಾರವಾಗಿ ಮಾತನಾಡಿದ್ದು ಭೂಮಿಗೆ ಅನುಮಾನ ಶುರು ಆಗಿದೆ. ಹೀಗಾಹು ಶಕುನಿ ಮಾಮನನ್ನು ಛೂ ಬಿಟ್ಟಿದ್ದಾಳೆ. ಶಕುನಿ ಮಾಮ ಕೂಡ ಜೈದೇವ್ಗೆ ಚೆನ್ನಾಗಿ ಕುಡಿಸಿ ದಿಯಾ ವಿಚಾರವಾಗಿ ಸತ್ಯ ತಿಳಿಯಲು ನೋಡಿದ್ದಾನೆ. ಜೈದೇವ್ ದಿಯಾ ವಿಚಾರವಾಗಿ ಹೇಳ್ತಾನಾ ಅನ್ನೋದು ಸಂಚಿಕೆಯಲ್ಲಿ ಗೊತ್ತಾಗಲಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare Serial) ಟ್ವಿಸ್ಟ್ ಪಡೆದು ಸಾಗುತ್ತಿದೆ. ಭೂಮಿಕಾ ಓಗ ಕ್ಯಾನ್ಸರ್‌ನಿಂದ ಗೆದ್ದಿದ್ದಾಳೆ. ಜೈದೇವ್ ತನ್ನ ಜೀವನದ್ದಕ್ಕೂ ಒಂದಲ್ಲ ಒಂದು ಕೆಟ್ಟ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾನೆ. ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ (Bhoomika) ಮುಂದೆ ಹೇಳಿದ್ದಾಳೆ.
ಭೂಮಿ ಬೇಹುಗಾರಿಕೆ
ಕೇಡಿ ಜೆಡಿಗೆ ಅಂತ್ಯ ಹಾಡೋಕೆ ಟೀಚರ್ - ಪೊಲೀಸ್ ಅಖಾಡಕ್ಕೆ ಇಳಿದಿದ್ದಾಗಿದೆ. ಭೂಮಿ ಬೇಹುಗಾರಿಕೆ ಇಲ್ಲಿಂದ ಶುರು ಆಗಿದೆ. ಮಲ್ಲಿ ದಿಯಾ ವಿಚಾರವಾಗಿ ಮಾತನಾಡಿದ್ದು ಭೂಮಿಗೆ ಅನುಮಾನ ಶುರು ಆಗಿದೆ. ಹೀಗಾಹು ಶಕುನಿ ಮಾಮನನ್ನು ಛೂ ಬಿಟ್ಟಿದ್ದಾಳೆ. ಶಕುನಿ ಮಾಮ ಕೂಡ ಜೈದೇವ್ಗೆ ಚೆನ್ನಾಗಿ ಕುಡಿಸಿ ದಿಯಾ ವಿಚಾರವಾಗಿ ಸತ್ಯ ತಿಳಿಯಲು ನೋಡಿದ್ದಾನೆ. ಜೈದೇವ್ ದಿಯಾ ವಿಚಾರವಾಗಿ ಹೇಳ್ತಾನಾ ಅನ್ನೋದು ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್ ರಿಪ್ಲೈ
ಇಷ್ಟೂ ದಿನ ಸೀರಿಯಲ್ ಒಂದು ಮೆಸೆಜ್ ಕೊಟ್ಟಿತ್ತು. ನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇದೆ ಎಂದು ತೋರಿಸಲಾಗಿತ್ತು. ಆ ಪಾತ್ರಕ್ಕೆ ಇಡೀ ಕುಟುಂಬ, ಮುಖ್ಯವಾಗಿ ಗಂಡ ಎಷ್ಟು ಸಪೋರ್ಟಿವ್ ಆಗಿ, ಸವಾಲಿಗೆ ಸೆಡ್ಡು ಹೊಡೆದು ನಿಂತಿದ್ದಾರೆ ಎಂಬುವುದನ್ನ ತೋರಿಸಲಾಗಿತ್ತು. ಮನರಂಜನೆಯ ದೃಷ್ಟಿಯನ್ನ ಮೀರಿ, ಭಾವನಾತ್ಮಕವಾಗಿ ಧಾರಾವಾಹಿ ಕನೆಕ್ಟ್ ಆಗಿತ್ತು.
ಇನ್ನೊಂದೆಡೆ ಭೂಮಿಕಾಳ ಅನಾರೋಗ್ಯವನ್ನೇ ಬಳಸಿಕೊಂಡು ಆಕೆಗೆ ಮಾನಸಿಕ ಹಿಂಸೆ ನೀಡಬೇಕು ಎಂಬ ಶಕುಂತಲಾ ಮತ್ತು ಜೈದೇವ್ ಅವರ ಕುತಂತ್ರಕ್ಕೂ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈ ಇಬ್ಬರ ಸಂಚು ಮಾತ್ರ ಇನ್ನೂ ಮುಗಿದಿಲ್ಲ.
ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ. ಶಕುಂತಲಾಳ ಕುತಂತ್ರವೂ ಒಂದೊಂದಾಗಿ ಬಯಲಾಗುತ್ತಿದ್ದು, ಕೊನೆಗೆ ತಾಯಿ-ಮಗ ಇಬ್ಬರೂ ಒಟ್ಟಿಗೆ ಜೈಲು ಸೇರುವ ಸ್ಥಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Anupama Gowda: ಆ್ಯಂಕರಿಂಗ್ಗೆ ವಿದಾಯ ಹೇಳಿದ ಅನುಪಮಾ ಗೌಡ!
`ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ