‘ಪುಷ್ಪ’ ಸಿನಿಮಾದ ಯಶಸ್ಸಿನ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಪಡೆದುಕೊಂಡಿರುವ ನಟ ಅಲ್ಲು ಅರ್ಜುನ್, ಸದ್ಯ ತಮ್ಮ ಮುಂದಿನ ಚಿತ್ರಗಳಿಗಾಗಿ ಅತ್ಯಂತ ಜಾಗರೂಕತೆಯಿಂದ ಯುನಿವರ್ಸಲ್ ಕಥಾಹಂದರ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅಟ್ಲಿ ಕುಮಾರ್ ನಿರ್ದೇಶನದ 'ರಾಕಾ' ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ ಅವರು, ಇದರ ನಂತರ ಲೋಕೇಶ್ ಕನಕರಾಜ್ ಜೊತೆ ಕೈಜೋಡಿಸಿದ್ದಾರೆ. ಇದೀಗ ಅಲ್ಲು ಅರ್ಜುನ್ ಮತ್ತೊಂದು ಕ್ರೇಜಿ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿರುವ ಬಲವಾದ ಸುಳಿವು ಸಿಕ್ಕಿದೆ.
ಮಲಯಾಳಂನ ಪ್ರತಿಭಾವಂತ ನಿರ್ದೇಶಕ ಹಾಗೂ ನಟ ಬೇಸಿಲ್ ಜೋಸೆಫ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಶಕ್ತಿಮಾನ್ ಮಾದರಿಯ ಸೂಪರ್ ಹೀರೋ ಜಾನರ್ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಈ ಚಿತ್ರವನ್ನು 'ಗೀತಾ ಆರ್ಟ್ಸ್' ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಟ್ಲಿ ಹಾಗೂ ಲೋಕೇಶ್ ಕನಗರಾಜ್ ಸಿನಿಮಾಗಳ ಘೋಷಣೆಯಾದ ನಂತರ ಈ ಚರ್ಚೆಗಳು ಕೊಂಚ ತಣ್ಣಗಾಗಿದ್ದವು. ಈ ನಡುವೆ ಅಲ್ಲು ಶಿರೀಶ್ ಅವರ ಮದುವೆ ರಿಸೆಪ್ಷನ್‌ನಲ್ಲಿ ಬೇಸಿಲ್ ಜೋಸೆಫ್ ಕಾಣಿಸಿಕೊಂಡಾಗ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು.
ರಹಸ್ಯ ಬಯಲು ಮಾಡಿದ ಇನ್‌ಸ್ಟಾಗ್ರಾಮ್ ಪೋಸ್ಟ್
ಸದ್ಯ ಬನ್ನಿ-ಬೇಸಿಲ್ ಕಾಂಬಿನೇಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಭಾರಿ ಚರ್ಚೆ ಶುರುವಾಗಲು ಬೇಸಿಲ್ ಜೋಸೆಫ್ ಹಾಕಿರುವ ಒಂದು ಪೋಸ್ಟ್ ಕಾರಣವಾಗಿದೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಐಕಾನ್' (ICON) ಎಂದು ಮುದ್ರಿತವಾಗಿರುವ ಟೋಪಿಯೊಂದರ ಫೋಟೋವನ್ನು ಹಂಚಿಕೊಂಡಿದ್ದು, ಅದಕ್ಕೆ ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ 'ರಿಂಗ ರಿಂಗ' ಹಾಡನ್ನು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಸೇರಿಸಿದ್ದಾರೆ. ಈ ಫೋಟೋದಲ್ಲಿ ಕೊಂಚ ದೂರದಲ್ಲಿ ಬ್ಲರ್ ಆಗಿರುವ ಇಬ್ಬರು ವ್ಯಕ್ತಿಗಳು ಕೂಡ ಕಾಣಿಸುತ್ತಿದ್ದು, ಇದರಿಂದಾಗಿ ಈ ಇಬ್ಬರ ಕಾಂಬಿನೇಷನ್ ಸಿನಿಮಾ ಸೆಟ್ ಆಗಿರುವುದು ಖಂಡಿತ ಎಂದು ಅಭಿಮಾನಿಗಳು ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ.
ಬೇಸಿಲ್ ಜೋಸೇಫ್ ಹಂಚಿಕೊಂಡಿರುವ ಪೋಸ್ಟ್
ಈ ಪೋಸ್ಟ್‌ಗೆ 'ಎಆರ್‌ಎಂ' ಚಿತ್ರದ ನಿರ್ದೇಶಕ ಜಿತಿನ್ ಲಾಲ್ ಪ್ರತಿಕ್ರಿಯಿಸುತ್ತಾ, 'ಅಲ್ಲು ಅರ್ಜುನ್' ಅವರ ಫೋಟೋವನ್ನು ಕಮೆಂಟ್ ಆಗಿ ಹಾಕಿದ್ದಾರೆ. ಇವರ ಜೊತೆಗೆ ಮಾಲಿವುಡ್ ನಟರಾದ ಟೊವಿನೋ ಥಾಮಸ್, ನೆಲ್ಸನ್ ಸೇರಿದಂತೆ ಹಲವು ಗಣ್ಯರು ರಿಯಾಕ್ಟ್ ಮಾಡಿದ್ದಾರೆ. ಇದಕ್ಕಿಡೀ ಪುಷ್ಟಿ ನೀಡುವಂತೆ ಅಲ್ಲು ಫ್ಯಾಮಿಲಿಗೆ ಸೇರಿದ 'ಅಲ್ಲು ಸಿನಿಮಾಸ್' ಸಂಸ್ಥೆಯು, ''ಈ ಹೆಸರಿಗೆ ಒಂದು ವಿಶೇಷವಾದ ಔರಾ (AAura) ಇದೆ'' ಎಂದು ಕಮೆಂಟ್ ಮಾಡಿದೆ. ಇವೆಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಬನ್ನಿ ಶೀಘ್ರದಲ್ಲೇ ಈ ಸಿನಿಮಾವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
Allu Arjun: ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್
ಸೂಪರ್ ಹೀರೋ ಡೈರೆಕ್ಟರ್ ಬೇಸಿಲ್ ಜೋಸೆಫ್
ಬೇಸಿಲ್ ಜೋಸೆಫ್ ಈ ಹಿಂದೆ ‘ಮಿನ್ನಲ್ ಮುರಳಿ’ಯಂತಹ ಸೂಪರ್ ಹೀರೋ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದು ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ನಾನ್-ಇಂಗ್ಲಿಷ್ ಕ್ಯಾಟಗರಿಯ ಟಾಪ್-10 ಭಾರತೀಯ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅದಕ್ಕೂ ಮುನ್ನ ಅವರು 'ಕುಂಜಿ ರಾಮಾಯಣಂ' ಹಾಗೂ 'ಗೋದಾ' ನಂತಹ ಉತ್ತಮ ಸಿನಿಮಾಗಳನ್ನು ನಿರ್ದೇಶಿಸಿದ್ದರು.
Allu Arjun: ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್! ಏನಂದ್ರು?
ಪ್ರಸ್ತುತ ನಟನಾಗಿಯೂ ಬ್ಯುಸಿಯಾಗಿರುವ ಬೇಸಿಲ್, ತಮ್ಮ ಹೊಸ ಕಥೆಯನ್ನು ಅಲ್ಲು ಅರ್ಜುನ್‌ಗೆ ಒಪ್ಪಿಸಿದ್ದು, ಸಿನಿ ವಲಯದಲ್ಲಿ ಈ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ. ಆದರೆ ಇದು ಅಲ್ಲು ಅರ್ಜುನ್ ಕೆರಿಯರ್‌ನ 24ನೇ ಸಿನಿಮಾವಾಗುತ್ತದೆಯೇ? ಅಥವಾ ಮೈಲಿಗಲ್ಲಿನ 25ನೇ ಚಿತ್ರವಾಗುತ್ತದೆಯೇ? ಎಂಬ ಕುತೂಹಲ ಉಳಿದಿದೆ, ಏಕೆಂದರೆ ಇದರ ಜೊತೆಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಯೂ ಅಲ್ಲು ಅರ್ಜುನ್ ಒಂದು ಸಿನಿಮಾ ಮಾಡಬೇಕಾಗಿದೆ.