Allu Arjun: ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್! ಏನಂದ್ರು?
Allu Arjun: ಅಲ್ಲು ಅರ್ಜುನ್ ಅವರ ಈ ಟ್ವೀಟ್‌ನಿಂದ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಹಲವು ದಿನಗಳಿಂದ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರ ಜೊತೆಗೆ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಸ್ವಲ್ಪ ಅಂತರವಿದೆ ಎಂಬ ವದಂತಿಗಳೂ ಹಬ್ಬಿದ್ದವು. ಇನ್ನು, 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಐದು ದಿನಗಳಲ್ಲಿ 249 ಕೋಟಿ ರೂ. ಗಳಿಸಿದೆ.
ರಾಮ್ ಚರಣ್ -
ನಟ ರಾಮ್ ಚರಣ್ (Ram Charan) ಅವರ ಪೆದ್ದಿ ಸಿನಿಮಾ (Peddi Cinema) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಚಿತ್ರಕ್ಕೆ ವಿಮರ್ಶಾತ್ಮಕವಾಗಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಗನ ನಟನೆ ನೋಡಿ ಹೆಮ್ಮೆಯಾಗುತ್ತಿದೆ ಎಂದು ಚಿರಂಜೀವಿ (Chiranjeevi) ಹೇಳಿದ್ದರು. ಹಲವು ನಿರ್ಮಾಪಕರು, ಸೆಲೆಬ್ರಿಟಿಗಳು ಸಿನಿಮಾ ಹಾಗೂ ರಾಮ್ ಚರಣ್ ನಟನೆಯನ್ನು ಹೊಗಳಿದ್ದಾರೆ. ಇದೀಗ ಅಲ್ಲು ಅರ್ಜುನ್ ಕೂಡ 'ಪೆದ್ದಿ' ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮ್ ಚರಣ್ ಅವರ ಪೆದ್ದಿಯನ್ನು ಅಲ್ಲು ಅರ್ಜುನ್ ಹೊಗಳಿದ್ದಾರೆ" ನಿನ್ನೆ ರಾತ್ರಿ #Peddi ನೋಡಿದೆ . ನನ್ನ ಪ್ರೀತಿಯ ರಾಮ್ ಚರಣ್ ಅವರ ಅದ್ಭುತ ಪ್ರದರ್ಶನ . ಅಸಾಧಾರಣ ದೇಹದ ರೂಪಾಂತರ ಮತ್ತು ಆಕರ್ಷಕ ನೃತ್ಯ ಚಲನೆಗಳು.
ಇದನ್ನೂ ಓದಿ: Kangana Ranaut: ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ
ಅವರು ಪ್ರತಿಯೊಂದು ಅಂಶದಲ್ಲೂ ಸಂಪೂರ್ಣವಾಗಿ ಅತ್ಯುನ್ನತ ಪ್ರದರ್ಶನ ನೀಡಿದರು. ನನ್ನ ಸಹೋದರನ ಬಗ್ಗೆ ನಿಜವಾಗಿಯೂ ತುಂಬಾ ಹೆಮ್ಮೆಯಿದೆ. ಇತರ ಎಲ್ಲಾ ಕಲಾವಿದರ ಅದ್ಭುತ ಪ್ರದರ್ಶನಕ್ಕೆ ನಿಜವಾಗಿಯೂ ಅರ್ಹರು. ನಾಯಕಿ ಕೂಡ. ಎಲ್ಲಾ ತಂತ್ರಜ್ಞರು ಮತ್ತು ನಿರ್ಮಾಪಕರಿಗೆ ಅಭಿನಂದನೆಗಳು. ಇಡೀ ತಂಡಕ್ಕೆ ಅಭಿನಂದನೆಗಳು ! ಎಂದು ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ ಅವರ ಈ ಟ್ವೀಟ್‌ನಿಂದ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಹಲವು ದಿನಗಳಿಂದ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರ ಜೊತೆಗೆ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಸ್ವಲ್ಪ ಅಂತರವಿದೆ ಎಂಬ ವದಂತಿಗಳೂ ಹಬ್ಬಿದ್ದವು. ಇನ್ನು, 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಐದು ದಿನಗಳಲ್ಲಿ 249 ಕೋಟಿ ರೂ. ಗಳಿಸಿದೆ ಎಂದು ಟ್ರೇಡ್ ಮೂಲಗಳು ಹೇಳಿದರೆ, ಚಿತ್ರತಂಡ 315 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಧಿಕೃತವಾಗಿ ಘೋಷಿಸಿದೆ.
Watched #Peddi last night. Mind-blowing performance by my dear @AlwaysRamCharan.
— Allu Arjun (@alluarjun) June 9, 2026
A Gritty, raw performance, extraordinary body transformation, and graceful dance moves. He absolutely aced it in every aspect. Genuinely very proud of my brother. Truly deserves every bit of the…
ನಟಿ ಜಾನ್ವಿ ಕಪೂರ್ ಅಭಿನಯಿಸಿರುವ ಪೆದ್ದಿ ಚಿತ್ರದ ಪಾತ್ರದ ಚಿತ್ರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ, ಹಿರಿಯ ನಟ ಜಗಪತಿ ಬಾಬು ಅವರು ನಟಿಯ ಪರವಾಗಿ ಧ್ವನಿಯೆತ್ತಿದ್ದಾರೆ. ನಿರ್ದೇಶಕರ ಸೃಜನಾತ್ಮಕ ನಿರ್ಧಾರಗಳಿಗೆ ನಟಿಯನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Karikaada Kannada movie: ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ಈ ಒಟಿಟಿಯಲ್ಲಿ ಪ್ರಸಾರ!
'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ‘ಅಚಿಯಮ್ಮ’ವನ್ನು ಅತಿಯಾದ ಗ್ಲಾಮರಸ್ ಆಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಿತ್ರದ ಕೆಲವು ದೃಶ್ಯಗಳು ಮತ್ತು ಹಾಡುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅನೇಕರು ನಟಿಯನ್ನು ಟೀಕಿಸಿದ್ದರು.