ರಜನಿಕಾಂತ್ ಅವರ ಜೈಲರ್ 2 (Jailer 2 Box Office Collection) ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗಿದೆ. ಕಳೆದ ವಾರ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಈ ತಮಿಳು ಸಿನಿಮಾ ಮೊದಲ ವಾರದಲ್ಲೇ ಭಾರತದಲ್ಲಿ 200 ಕೋಟಿ ದಾಟಿದೆ. ಅಕ್ಟೋಬರ್ 15ರಂದು ಬಿಡುಗಡೆಯಾದ ಈ ಸಿಕ್ವೆಲ್ 2026ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾ ಆಗಿದೆ. ಇದು ಕಳೆದ ಎರಡು ವರ್ಷಗಳ ಹಲವು ದೊಡ್ಡ ಸಿನಿಮಾಗಳನ್ನು ಸಹ ಮೀರಿಸಿದೆ.ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಮೆಚ್ಚಿಕೊಂಡಿದ್ದಾರೆ.
ತಮ್ಮ ಅಧಿಕೃತ ‘ಎಕ್ಸ್’ ಖಾತೆಯ ಮೂಲಕ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಜನಿಕಾಂತ್ ಅವರ ಸ್ಲ್ಯಾಗ್ ಮತ್ತು ಸ್ಟಾರ್ ಪವರ್ ಬಗ್ಗೆ ಮುಕ್ತಕಂಠದಿಂದ ಕೊಂಡಾಡಿದ್ದಾರೆ.‘ಜೈಲರ್ 2 ನಿಜಕ್ಕೂ ರಜನಿಕಾಂತ್ ಸರ್ ಅವರ ಸ್ಟಾರ್ ಪವರ್, ಸ್ವಾಗ್ನ ಅಸಲಿ ಪ್ರದರ್ಶನ. ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಭರ್ಜರಿ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಇದು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ramayana Movie: ರಣ್ಬೀರ್ ಕಪೂರ್ ಧರಿಸಿದ್ದ ಅಪರೂಪದ ವಾಚ್ ಬೆಲೆ ಎಷ್ಟು?
ಅಲ್ಲದೆ, ತೆಲುಗಿನಲ್ಲಿ ಟ್ವೀಟ್ ಮುಂದುವರಿಸಿದ ಅಲ್ಲು ಅರ್ಜುನ್ ಅವರು, ‘ಕೇವಲ ರಜನಿಕಾಂತ್ ಮಾತ್ರ ತಮ್ಮ ಶರ್ಟ್ ಹರಿಯಿಸಿಕೊಳ್ಳದೆ 500 ಕೋಟಿ ರೂಪಾಯಿ ಕ್ಲಬ್ಗೆ ಲೀಲಾಜಾಲವಾಗಿ ಕಾಲಿಡಬಲ್ಲವರು’ ಎಂದು ಹೊಗಳಿದ್ದಾರೆ. ‘ಸನ್ ಪಿಕ್ಚರ್ಸ್’ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಸೌಂದರ್ಯ ಕ್ವಾಟ್ಲೆಗೆ ಗಗನ್ ತಲೆ 'ಗಿರ ಗಿರ'!
ರಜನಿಕಾಂತ್ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ರಮ್ಯಾ ಕೃಷ್ಣನ್, ಮಿರ್ನಾ, ರಿತ್ವಿಕ್ ಜೊತೆಗೆ ಎಸ್.ಜೆ. ಮಿಥುನ್ ಚಕ್ರವರ್ತಿ, ಸುರಾಜ್ ವೆಂಜರಮೂಡು ಮತ್ತು ವಿದ್ಯಾ ಬಾಲನ್ ಹೊಸ ಪಾತ್ರಗಳಲ್ಲಿ ಇದ್ದಾರೆ.