ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸೌಂದರ್ಯ ಕ್ವಾಟ್ಲೆಗೆ ಗಗನ್ ತಲೆ 'ಗಿರ ಗಿರ'!

Bigg Boss Kannada 13: ಬಿಗ್​​ಬಾಸ್ ಮನೆಯಲ್ಲಿ (Bigg Boss Kannada 13) ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಈ ವಾರದ ʻಬಿಗ್ ಬಾಸ್ʼ ಮನೆಯ ಮುಖ್ಯ ಆಕರ್ಷಣೆಯೆಂದರೆ ʻಲೂಟಿಕೋರರು ಮತ್ತು ಕಾವಲುಗಾರರುʼ ಎಂಬ ಹೊಸ ಥೀಮ್ ಆಧಾರಿತ ಟಾಸ್ಕ್. ಮ್ಯೂಸಿಯಂನಲ್ಲಿ ಇಡಲಾದ ಅಮೂಲ್ಯ ವಸ್ತುಗಳನ್ನ ಕಾಯೋದು ಕಾವಲುಗಾರರ ಕೆಲಸವಾದರೇ, ಅದಕ್ಕೆ ಕನ್ನ ಹಾಕಿ ಅತ್ಯಂತ ಚಾಣಾಕ್ಷತನದಿಂದ ವಸ್ತುಗಳನ್ನ ಕದಿಯುವುದು ಲೂಟಿಕೋರರ ತಂಡದ ಸವಾಲಾಗಿತ್ತು.

Bigg Boss Kannada 13: ಸೌಂದರ್ಯ ಕ್ವಾಟ್ಲೆಗೆ  ಗಗನ್ ತಲೆ 'ಗಿರ ಗಿರ'!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 22, 2026 6:44 PM

ಬಿಗ್​​ಬಾಸ್ ಮನೆಯಲ್ಲಿ (Bigg Boss Kannada 13) ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಈ ವಾರದ ʻಬಿಗ್ ಬಾಸ್ʼ ಮನೆಯ ಮುಖ್ಯ ಆಕರ್ಷಣೆಯೆಂದರೆ ʻಲೂಟಿಕೋರರು ಮತ್ತು ಕಾವಲುಗಾರರುʼ ಎಂಬ ಹೊಸ ಥೀಮ್ ಆಧಾರಿತ ಟಾಸ್ಕ್. ಮ್ಯೂಸಿಯಂನಲ್ಲಿ ಇಡಲಾದ ಅಮೂಲ್ಯ ವಸ್ತುಗಳನ್ನ ಕಾಯೋದು ಕಾವಲುಗಾರರ ಕೆಲಸವಾದರೇ, ಅದಕ್ಕೆ ಕನ್ನ ಹಾಕಿ ಅತ್ಯಂತ ಚಾಣಾಕ್ಷತನದಿಂದ ವಸ್ತುಗಳನ್ನ ಕದಿಯುವುದು ಲೂಟಿಕೋರರ ತಂಡದ ಸವಾಲಾಗಿತ್ತು.

ಕಳ್ಳರು ಮತ್ತು ಭದ್ರತೆಯವರಾಗಿ ಸ್ಪರ್ಧಿಗಳನ್ನು ವಿಂಗಡಿಸಿದ್ದು, ಕಳ್ಳತರು ತಮ್ಮ ಚಾಕಚಕ್ಯತೆ ತೋರಿಸಿದರೆ ಭದ್ರತೆಯವರು ಕಳ್ಳರ ಚಾಕಚಕ್ಯತೆ ಎದುರು ಪದೇ ಪದೇ ಬಕರಾಗಳಾಗುತ್ತಿದ್ದಾರೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು.

ಇದನ್ನೂ ಓದಿ: Pabbar Movie: ರಾಜ್​ ಮೊಮ್ಮಗ ಧೀರೆನ್ ರಾಮ್‌ಕುಮಾರ್ ನಟನೆಯ 'ಪಬ್ಬಾರ್' ಡಿಸೆಂಬರ್ 11ಕ್ಕೆ ಬಿಡುಗಡೆ

ಟಾಸ್ಕ್ ಆರಂಭವಾದ ಕ್ಷಣದಿಂದಲೇ ತಾಂಡವ್ ತಮ್ಮ ಅದ್ಭುತ ಮೈಂಡ್ ಗೇಮ್ ಮೂಲಕ ಮಿಂಚಿದ್ದಾರೆ. ಕೇವಲ ದೈಹಿಕ ಬಲವನ್ನ ಬಳಸದೆ, ಎಲ್ಲಿ ಬುದ್ಧಿವಂತಿಕೆ ಮತ್ತು ಸಮಯಪ್ರಜ್ಞೆಯನ್ನ ಪ್ರದರ್ಶಿಸಬೇಕೋ ಅಲ್ಲಿ ಅದನ್ನ ಅಚ್ಚುಕಟ್ಟಾಗಿ ಬಳಸಿದರು.