ಮುಂಬೈ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ದಿನೇ ದಿನೆ ಹೆಚ್ಚಾಗುತ್ತಿದೆ. ದೇಶದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಅನೇಕ ನೀತಿ ನಿಯಮ ಜಾರಿಗೆ ತಂದಿದ್ದು, ಗಡಿ ಭದ್ರತೆಗೆ ಸೇನೆ ಕೂಡ ಸದಾ ಸನ್ನದ್ಧವಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಎಲ್ಲರೂ ದೇಶದ ಸೇನೆಯ ಶೌರ್ಯಕ್ಕೆ, ಸೈನಿಕರ ಹಿತ ರಕ್ಷಣೆಗಾಗಿ, ತ್ಯಾಗ ಬಲಿದಾನಕ್ಕೆ ನಮನ ಸಲ್ಲಿಸುತ್ತಿದ್ದಾರೆ. ಇಡೀ ದೇಶವೇ ಒಗ್ಗಟ್ಟಿನಿಂದ ಪ್ರೋತ್ಸಾಹಿಸುತ್ತಿದ್ದು ಹಲವು ಸೆಲೆಬ್ರಿಟಿಗಳು ಕೂಡ ಈ ಒಗ್ಗಟ್ಟಿಗೆ ಧ್ವನಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಮಾತ್ರ ಈ ಕುರಿತು ಮೌನವಾಗಿದ್ದರು ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಆದರೆ ಈಗ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿ, ಭಾರತೀಯ ಸೇನಾ ಪಡೆಗಳನ್ನು ಅಭಿನಂದಿಸಿ ಪೋಸ್ಟ್ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಸೇನೆಯು ಪಹಾಲ್ಗಾಮ್ ದಾಳಿ ಬಳಿಕ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಧೈರ್ಯವಾಗಿ ಕೈಗೊಂಡಿದ್ದುಅಮಿತಾಬ್ ಬಚ್ಚನ್ ಈ ಸೇನಾ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಪ್ರವಾಸಿಗರು ತಮ್ಮ ರಜಾದಿನಗಳನ್ನು ಸಂಭ್ರಮದಿಂದ ಆಚರಿಸಲೆಂದು ಆ ಸ್ಥಳಕ್ಕೆ ಭೇಟಿ ನೀಡಿದ್ದು, ಮುಗ್ಧ ಪ್ರವಾಸಿಗರನ್ನು, ದಂಪತಿಯನ್ನು ಅತ್ಯಂತ ಕಟುವಾಗಿ ನಡೆಸಿಕೊಂಡಿದ್ದು ಖಂಡನೀಯ ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
T 5375 -
— Amitabh Bachchan (@SrBachchan) May 10, 2025
छुट्टियाँ मानते हुए, उस राक्षस ने, निर्दोष पति पत्नी को बाहर खींच कर, पति को नग्न कर, उसके धर्म की पूर्ति करने के बाद , उसे जब गोली मारने लगा, तो पत्नी ने, घुटने पे गिर कर, रो रो अनुरोध करने के बाद भी, की उसके पति को न मारो ; उसके पति को उस बुज़दिल राक्षस ने, बेहद…
ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ನವ ವಿವಾಹಿತೆಯೊಬ್ಬಳ ಸಂಕಟವನ್ನು ಕವಿತೆಯ ಮೂಲಕ ನಟ ಅಮಿತಾಬ್ ಬಚ್ಚನ್ ವಿವರಿಸಿದ್ದಾರೆ. 3 ದಿನಗಳ ಹಿಂದೆಯಷ್ಟೇ ಮದುವೆಯಾದ ಆಕೆ ಮೊಣಕಾಲೂರಿ ಅಳುತ್ತಾ, ನನ್ನ ಗಂಡನನ್ನು ಕೊಲ್ಲಬೇಡಿ ಎಂದು ಬೇಡಿಕೊಂಡಳು. ಆದರೆ ಹೇಡಿಗಳು ನಿರ್ದಯವಾಗಿ ಗುಂಡು ಹಾರಿಸಿ ಮುತ್ತೈದೆಯನ್ನು ವಿಧವೆಯನ್ನಾಗಿ ಮಾಡಿದರು ಎಂದು ಬರೆದುಕೊಂಡಿದ್ದಾರೆ.
ಈ ಹೆಣ್ಣು ಮಗಳ ಸಂಕಟವನ್ನು ನೆನೆದಾಗ ನನಗೆ ನನ್ನ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯ ಸಾಲು ನೆನಪಿಗೆ ಬಂತು. ನಾನು ಕೈಯಲ್ಲಿ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಹಿಡಿದಿದ್ದೇನೆ. ಆದರೂ ಜಗತ್ತು ನನ್ನಿಂದ ಸಿಂದೂರವನ್ನು ಕೇಳುತ್ತಿದೆ ಎಂದು ಪೋಸ್ಟ್‌ನಲ್ಲಿ ಅತ್ಯಂತ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ತಮ್ಮ ʼಅಗ್ನಿಪಥ್ʼ ಚಿತ್ರದ ಪ್ರಸಿದ್ಧ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಅದರ ಜತೆಗೆ 'ಆಪರೇಷನ್ ಸಿಂದೂರ್ ಜೈ ಹಿಂದ್ʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಇವರ ಪೋಸ್ಟ್ ವೈರಲ್ ಆಗುತ್ತಿದೆ.
ಇದನ್ನು ಓದಿ: Amitabh Bachchan: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯಲ್ಲಿ ಹೇಗಿರುತ್ತಾರೆ ಗೊತ್ತಾ? ಅಳಿಯ ಈ ಬಗ್ಗೆ ಹೇಳಿದ್ದೇನು?
ಪಹಲ್ಗಾಮ್ ದಾಳಿಯ ಬಗ್ಗೆ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತಿದರೂ ನಟ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿರಲಿಲ್ಲ. ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಮೌನವಹಿಸಿದ್ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ನಟ ಅಮಿತಾಬ್ ಬಚ್ಚನ್ ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯ್ತು. ಇದೀಗ ತನ್ನ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.