Amitabh Bachchan: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯಲ್ಲಿ ಹೇಗಿರುತ್ತಾರೆ ಗೊತ್ತಾ? ಅಳಿಯ ಈ ಬಗ್ಗೆ ಹೇಳಿದ್ದೇನು?
Kunal Kapoor on Amitabh Bachchan: ಅಮಿತಾಭ್ ಬಚ್ಚನ್ ಅವರದ್ದು ಸ್ಟಾರ್ ಕುಟುಂಬವಾಗಿದ್ದು ಸದಾ ಒಂದಲ್ಲ ಒಂದು ವಿಚಾರದಿಂದ ಇವರ ಕುಟುಂಬ ಆಗಾಗ ಸುದ್ದಿಯಲ್ಲಿರುತ್ತದೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ , ಐಶ್ವರ್ಯ ರೈ ಎಲ್ಲರೂ ಬಾಲಿ ವುಡ್ ಸಿನಿಮಾ ಅಂಗಳದಲ್ಲಿ ಸಾಕಷ್ಟು ಹೆಸರು ಪಡೆದ ಕಾರಣಕ್ಕೆ ಇವರ ಕುಟುಂಬವನ್ನು ರಾಯಲ್ಟಿ ಕುಟುಂಬ ಎನ್ನಲಾಗುತ್ತದೆ. ನಟ ಅಮಿತಾಭ್ ಬಚ್ಚನ್ ಅವರ ಅಳಿಯ ಕುನಾಲ್ ಕಪೂರ್ ಬಚ್ಚನ್ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದು ಬಚ್ಚನ್ ಕುಟುಂಬವು ಕೂಡ ಸಾಮಾನ್ಯರ ಕುಟುಂಬದಂತಿದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.


ನವದೆಹಲಿ: ಬಾಲಿವುಡ್‌ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಭಾರತೀಯ ಚಲನ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಅಮಿತಾಭ್ ಬಚ್ಚನ್ ಅವರದ್ದು ಸ್ಟಾರ್ ಕುಟುಂಬವಾಗಿದ್ದು ಸದಾ ಒಂದಲ್ಲ ಒಂದು ವಿಚಾರದಿಂದ ಇವರ ಕುಟುಂಬ ಆಗಾಗ ಸುದ್ದಿಯಲ್ಲಿರುತ್ತದೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ , ಐಶ್ವರ್ಯ ರೈ ಎಲ್ಲರೂ ಬಾಲಿವುಡ್ ಸಿನಿಮಾ ಅಂಗಳದಲ್ಲಿ ಸಾಕಷ್ಟು ಹೆಸರು ಪಡೆದ ಕಾರಣಕ್ಕೆ ಇವರ ಕುಟುಂಬವನ್ನು ರಾಯಲ್ಟಿ ಕುಟುಂಬ ಎನ್ನಲಾಗುತ್ತದೆ. ನಟ ಅಮಿತಾಭ್ ಬಚ್ಚನ್ ಅವರ ಅಳಿಯ ಕುನಾಲ್ ಕಪೂರ್ ಬಚ್ಚನ್ (Kunal Kapoor) ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ಬಚ್ಚನ್ ಕುಟುಂಬವು ಕೂಡ ಸಾಮಾನ್ಯರ ಕುಟುಂಬದಂತಿದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಸಿನಿಮಾ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕವೂ ಪ್ರಸಿದ್ಧರಾಗಿದ್ದಾರೆ. ಸ್ಟಾರ್ ನಟ ನಟಿಯರೆ ಇವರ ಫ್ಯಾಮಿಲಿಯಲ್ಲಿದ್ದು ಜನರಿಗೂ ಈ ಕುಟುಂಬದ ಬಗ್ಗೆ ಏನಾದರು ಹೊಸ ತನ್ನು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಕುನಾಲ್ ಕಪೂರ್ ಬಚ್ಚನ್ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಕುನಾಲ್ ಕಪೂರ್ ಯಾರು ಇವರಿಗೂ ಬಚ್ಚನ್ ಕುಟುಂಬಕ್ಕೂ ಇರುವ ಸಂಬಂಧ ಏನು?
ಅಮಿತಾಭ್ ಬಚ್ಚನ್ ಸಹೋದರ ಅಜಿತಾಬ್ ಬಚ್ಚನ್ ಮತ್ತು ರಮೋಲಾ ಬಚ್ಚನ್ ಅವರ ಪುತ್ರಿ ನೈನಾ ಬಚ್ಚನ್ ಅವರನ್ನು ಕುನಾಲ್ ಕಪೂರ್ ವಿವಾಹವಾಗಿದ್ದಾರೆ. ಹೀಗಾಗಿ ಸಂಬಂಧದಲ್ಲಿ ಇವರಿಬ್ಬರು ಮಾವ ಅಳಿಯ ಆಗಿದ್ದಾರೆ. ಅಮಿತಾಭ್ ಬಚ್ಚನ್ ಗಿಂತ ಅವರ ಸಹೋದರ ಅಜಿತಾಭ್ ಬಚ್ಚನ್ ಐದು ವರ್ಷ ಕಿರಿಯರಾಗಿದ್ದಾರೆ. ಅಜಿತಾಭ್ ಒಬ್ಬ ಉದ್ಯಮಿಯಾಗಿದ್ದಾರೆ. ಹಲವಾರು ವರ್ಷಗಳ ಹಿಂದೆ ಲಂಡನ್‌ಗೆ ತೆರಳಿ ಅಲ್ಲಿ ಬ್ಯುಸಿನೆಸ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಸಹೋದರನ ಮಗಳ ನೈನಾ ಬಚ್ಚನ್ ಅವರನ್ನು ಕುನಾಲ್ ಕಪೂರ್ ಅವರು ಫೆಬ್ರವರಿ 9, 2015 ರಂದು ವಿವಾಹವಾದರು. ಕುನಾಲ್ ಮತ್ತು ನೈನಾ ಅವರು ಅಮಿ ತಾಭ್ ಬಚ್ಚನ್ ಕುಟುಂಬ ಜೊತೆ ನಿಕಟ ಸಂಬಂಧವನ್ನು ಇಂದಿಗೂ ಉಳಿಸಿಕೊಂಡಿದ್ದು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಅವರು ಭೇಟಿ ನೀಡಿದ್ದು ಈ ಬಗ್ಗೆ ಸಂದರ್ಶನದಲ್ಲಿ ಕೆಲವು ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: Kannada New Movie: ವಿನಯ್ ವಾಸುದೇವ್ ನಿರ್ದೇಶಿಸಿ, ನಟಿಸಿರುವ ʼದಿʼ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು
ಅಮಿತಾಭ್ ಬಚ್ಚನ್ ಅವರ ಕುಟುಂಬ ಸ್ಟಾರ್ ಕುಟುಂಬವಾಗಿದ್ದರೂ ಅವರು ತುಂಬಾ ಸಿಂಪಲ್, ಅವರು ಕೂಡ ಸಾಧಾರಣ ಕುಟುಂಬದಂತೆ ನಿತ್ಯ ಜೀವನ ಸಾಗಿಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಪುತ್ರಿ ಶ್ವೇತಾ ಅವರ ಮಗಳು ನವ್ಯಾ ನವೇಲಿ ಅವರು ತನ್ನ ತಂದೆ ನಂದಾಗೆ ಬ್ಯುಸಿನೆಸ್ ಡೆವಲಪ್‌ಮೆಂಟ್ ಗೆ ಸಹಾಯ ಮಾಡ್ತಾರೆ. ಶ್ವೇತಾ ಬಚ್ಚನ್ ಪುತ್ರ ಅಗಸ್ತ್ಯ ಅವರು ತಮ್ಮ ತಾತ ಬಚ್ಚನ್ ಅವರಂತೆ ಚಲನ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದಿ ಆರ್ಚಿಸ್ ಸಿನಿಮಾ ಮೂಲಕ ಬಚ್ಚನ್ ಮೊಮ್ಮಗ ಸಿನಿಮಾ ರಂಗಕ್ಕೆ ಈಗಾಗಲೇ ಪಾದಾರ್ಪಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಇಕ್ಕಿಸ್ ಸಿನಿಮಾ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಎಂದು ಕುನಾಲ್ ಬಚ್ಚನ್ ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.