ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthdhaare Serial) ಧಾರಾವಾಹಿಯಲ್ಲಿ ಭೂಮಿ ಆರೋಗ್ಯ ಹದೆಗಟ್ಟಿದೆ. ಕೆಲವು ದಿನಗಳ ಹಿಂದಿನ ಎಪಿಸೋಡ್‌ನಲ್ಲಿ ಗೌತಮ್ ದಿವಾನ್ (Gowtham Diwan) ಅವರು ಎಚ್ಚರ ತಪ್ಪಿ ಬಿದ್ದಂತೆ ತೋರಿಸಲಾಗಿತ್ತು. ಅದಾದ ಮೇಲೆ ಗೌತಮ್ ಮತ್ತು ಭೂಮಿಕಾ ಇಬ್ಬರೂ ಬ್ಲಡ್ ಟೆಸ್ಟ್, ಹೆಲ್ತ್ ಚೆಕಪ್ ಮಾಡಿಸಿದ್ದರು. ವೀಕ್ಷಕರು ಅಂದುಕೊಂಡಿದ್ದರು, ಗೌತಮ್ ದಿವಾನ್‌ಗೆ ಏನೋ ದೊಡ್ಡ ಕಾಯಿಲೆ ಬಂದಿದೆ ಎಂದು. ಆದರೆ ಇದರಲ್ಲಿ ಆಗಿದ್ದು ಉಲ್ಟಾ. ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದಾಗಿ ರಿಪೋರ್ಟ್ ಬಂದಿದೆ. ಇದೀಗ ಭೂಮಿ (Bhoomika) ತನಗಿರುವ ಕಾಯಿಲೆ ಬಗ್ಗೆ ತಿಳಿದು ಕುಗ್ಗಿ ಹೋಗಿದ್ದಾಳೆ.
ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ. ಯಾವಾಗ ಭೂಮಿಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಅನ್ನೋದು ಗೊತ್ತಾಯ್ತೋ ಅಲ್ಲಿಂದ ಭೂಮಿ ಸೋತು ಹೋಗಿದ್ದಾಳೆ. ಈಗ ಹೊಸ ಪ್ರೋಮೋ ಔಟ್ ಆಗಿದೆ.
ಇದನ್ನೂ ಓದಿ: Haiwaan first look out: KVN ನಿರ್ಮಾಣದ ಬಾಲಿವುಡ್ ಸಿನಿಮಾ 'ಹೈವಾನ್'; ಪೋಸ್ಟರ್ ಔಟ್
ಭೂಮಿಗೆ ಕ್ಯೂಟ್ ಆಗಿ ವಿಶ್ ಮಾಡಿದ್ದಾನೆ ಗೌತಮ್. ಭೂಮಿಯನ್ನ ಸಿನಿಮಾಗೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನ ಹೀಗೆ ಚೆಂದವಾಗಿ ಸುತ್ತಾಡಿದ್ದಾರೆ. ಹೆಚ್ಚೆಂದರೆ 5 ತಿಂಗಳು ಜೀವಂತ ಇರಬಹುದು ಎಂದು ವೈದ್ಯರು ಹೇಳಿದ್ದಾರೆ. ಭೂಮಿಕಾ ಇದನ್ನ ಕೇಳಿ ದುಃಖಿತರಾಗಿದ್ದಾರೆ. ಪತಿಗೆ ಹೇಳಲಾಗದೆ ಒದ್ದಾಡುತ್ತಿದ್ದಾಳೆ. ಅದೇನೇನೋ ಸರ್ಕಸ್ ಮಾಡುತ್ತಿದ್ದಾಳೆ. ಆದರೆ ಇದನ್ನೆಲ್ಲ ನೋಡುತ್ತಿರುವ ವೀಕ್ಷಕರು ಮಾತ್ರ, ಧಾರಾವಾಹಿ ನಿರ್ದೇಶಕರಿಗೆ ಸಿಕ್ಕಾಪಟ್ಟೆ ಬೈಯ್ಯುತ್ತಿದ್ದಾರೆ.
ಧಾರಾವಾಹಿ ಇನ್ನೇನು ಮುಗಿಯುತ್ತದೆ. ಕೇಡಿ ಜೈದೇವ್‌ಗೆ ಶಿಕ್ಷೆಯಾಗೋದು ಬಾಕಿ ಇದೆ ಎಂದೇ ವೀಕ್ಷಕರು ಭಾವಿಸಿದ್ದರು. ಅದರ ಮಧ್ಯೆ, ನಾಯಕಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಬಂದಿರೋದನ್ನ ವೀಕ್ಷಕರು ಸಹಿಸುತ್ತಿಲ್ಲ. ನೀವು ಕ್ಯಾನ್ಸರ್‌ಗೆ ಚಿಕಿತ್ಸೆ ಇಲ್ಲವೆಂಬಂತೆ ಹೇಳುತ್ತ, ಅನೇಕ ಕ್ಯಾನ್ಸರ್ ರೋಗಿಗಳಲ್ಲೂ ಭಯ ಹುಟ್ಟಿಸುತ್ತಿದ್ದೀರಿ ಎಂದೂ ತಕರಾರು ತೆಗೆಯುತ್ತಿದ್ದಾರೆ.
ಇದನ್ನೂ ಓದಿ: Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ