ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಬೇಟೆಯಾಡೋ ರಣಬೇಟೆಗಾರ ಬಂದೇ ಬಿಟ್ಟ! ಭೂಮಿಕಾ - ದೀಪಿಕಾ ಆಟ ಗೌತಮ್ ಎದುರು ಬಯಲಾಯ್ತಾ ?

Amruthadhaare Serial:ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್​ ಇನ್ನೇನು ಅಂತ್ಯ ಕಾಣುತ್ತದೆ ಎನ್ನುವಾಗಲೇ ಒಂದೊಂದು ಟ್ವಿಸ್ಟ್​ ತಂದು ಸೀರಿಯಲ್​ ಎಳೆಯುತ್ತಾ ಸಾಗಲಾಗಿದೆ. ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ಎಲ್ಲಾ ಆಸ್ತಿಗೆ ದೀಪಿಕಾಳಿಂದ ಸಹಿ ಹಾಕಿಸಿಕೊಳ್ಳಲು ಶಕುಂತಲಾ ಮತ್ತು ಜೈದೇವ್​ ಕಾತರದಿಂದ ಕಾಯುತ್ತಿದ್ದಾರೆ. ಆದರೀಗ ಗೌತಮ್‌ ಎಂಟ್ರಿ ಆಗಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್​ (Amruthadhaare Serial) ಇನ್ನೇನು ಅಂತ್ಯ ಕಾಣುತ್ತದೆ ಎನ್ನುವಾಗಲೇ ಒಂದೊಂದು ಟ್ವಿಸ್ಟ್​ ತಂದು ಸೀರಿಯಲ್​ ಎಳೆಯುತ್ತಾ ಸಾಗಲಾಗಿದೆ. ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ಎಲ್ಲಾ ಆಸ್ತಿಗೆ ದೀಪಿಕಾಳಿಂದ ಸಹಿ ಹಾಕಿಸಿಕೊಳ್ಳಲು ಶಕುಂತಲಾ ಮತ್ತು ಜೈದೇವ್​ ಕಾತರದಿಂದ ಕಾಯುತ್ತಿದ್ದಾರೆ. ಆದರೀಗ ಗೌತಮ್‌ ಎಂಟ್ರಿ ಆಗಿದೆ.

ಗೌತಮ್‌ ಈಗ ಜೋಕರ್‌ ರೀತಿ ಡ್ರೆಸ್‌ ಧರಿಸಿ ಭೂಮಿಕಾ ಅಂದುಕೊಂಡು ದೀಪಿಕಾಗೆ ಸರ್‌ಪ್ರೈಸ್‌ ಕೊಟ್ಟಿದ್ದಾನೆ. ಆದರೆ ದೀಪಿಕಾ ಗೌತಮ್‌ ನೋಡಿ ಗಾಬರಿ ಆಗಿದ್ದಾಳೆ. ಅಷ್ಟೇ ಅಲ್ಲ ಶಕುಂತಲಾಗೂ ಇದು ಶಾಕ್‌ ಕೊಟ್ಟಿದೆ. ದೀಪಿಕಾ ಅಂತೂ ಆಸ್ತಿಗೆ ಸಹಿ ಮಾಡಲ್ಲ. ಭೂಮಿಕಾ ಎಂಟ್ರಿ ಕೊಟ್ಟು ಎಲ್ಲಾ ವಿಷಯ ಹೇಳಿದರೆ ಅಲ್ಲಿಗೆ ಸ್ಟೋರಿ ದಿ ಎಂಡ್​ ಆಗುತ್ತದೆ.

ಇದನ್ನೂ ಓದಿ: Bigg Boss Kannada 13: ಮೀಟರ್​​ ಇಲ್ವ ಯಾರಿಗೂ? ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ನೇರ ಪ್ರಶ್ನೆ!

ದೀಪಿಕಾ ಬದುಕಿನ ಮಹತ್ವದ ರಹಸ್ಯ

ದೀಪಿಕಾಗೆ ತನ್ನ ಹುಟ್ಟಿನ ಗುಟ್ಟು ಬಯಲಾಗಿದೆ.ಅವಳ ಅಜ್ಜಿ, ದೀಪಿಕಾಗೆ ಅವಳು ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ತಿಳಿಸಿದ್ದಾಳೆ. ನನ್ನ ಮಗಳು ಮತ್ತು ಅಳಿಯ ದೇವಸ್ಥಾನಕ್ಕೆ ಮಕ್ಕಳ ಕೊರಗು ನೀಗಿಸಲು ಬೇಡಿಕೊಳ್ಳಲು ಹೋದ ಸಮಯದಲ್ಲಿ ದೀಪಿಕಾ ಸಿಕ್ಕ ವಿಷಯವನ್ನುಹೇಳಿದ್ದಾಳೆ. ದೀಪಿಕಾ ಅಮ್ಮ ಬಂದು ಮಗುವನ್ನು ಇಟ್ಟು, ಈ ಮಗುವಿನಿಂದ ನನ್ನ ಗಂಡನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ನೀನೇ ಕಾಪಾಡು ಎಂದು ಮಗುವನ್ನು ದೇವರ ಎದುರು ಇಟ್ಟು ಹೋದ ವಿಷಯ ತಿಳಿಸಿದ್ದಾಳೆ.



ಆ ಮಗುವಿನ ಬಳಿ ದುಡ್ಡು ಇಟ್ಟು ಹೋಗಿದ್ದರು. ಕೊನೆಗೆ ನನ್ನ ಮಗಳು ಅಳಿಯ ನಿನ್ನನ್ನು ಕರೆದುಕೊಂಡು ಬಂದರು. ಆದರೆ ಕೆಲವು ದಿನಗಳ ನಂತರ ನಿನ್ನ ಅಮ್ಮ ಬಂದು ಮಗುವನ್ನು ಕೊಡುವಂತೆ ಹೇಳಿದಳು ಎಂದು ವಿಷಯ ತಿಳಿಸಿದ್ದಾಳೆ. ಆದರೆ ಮಗುವನ್ನು ಕರೆದುಕೊಂಡು ಹೋದರೆ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿದ್ದೀರಲ್ಲ.

ಅದಕ್ಕಾಗಿ ನಾವೇ ಮಗುವನ್ನು ಸಾಕುತ್ತೇವೆ ಎಂದು ನಿನ್ನ ಸಾಕು ಅಪ್ಪ, ಅಮ್ಮ ಹೇಳಿ ನಿನ್ನನ್ನು ಆ ಊರಿನಿಂದ ಬೇರೆ ಕಡೆ ಕರೆದುಕೊಂಡು ಬಂದರು ಎಂದಿದ್ದಾಳೆ.ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ದೀಪಿಕಾ ಮತ್ತು ಭೂಮಿಕಾ ಅವಳಿ ಮಕ್ಕಳು ಎನ್ನೋದಷ್ಟೇ ಈಗ ತಿಳಿಯಬೇಕಿದೆ.

ಇದನ್ನೂ ಓದಿ: Ramayana: ರಾಮಾಯಣ ಮೇಕಿಂಗ್ ವಿಡಿಯೋ ವೈರಲ್​ ; ಬಯಲಾಯ್ತು ತೆರೆಮರೆಯ ಸತ್ಯ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Yashaswi Devadiga

View all posts by this author