ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಮೀಟರ್​​ ಇಲ್ವ ಯಾರಿಗೂ? ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ನೇರ ಪ್ರಶ್ನೆ!

Bigg Boss Kannada 13: ವೀಕೆಂಡ್‌ ಬಂತು ಬಂದರೆ ಕಿಚ್ಚ ಸುದೀಪ್‌ಗೆ ಕಾಯುತ್ತಿರುತ್ತಾರೆ ವೀಕ್ಷಕರು. ಕಳೆದ ವೀಕೆಂಡ್​​ನಲ್ಲಿ ಸುದೀಪ್ ಅವರು ಹಲವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್​​ಬಾಸ್​​ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ (Sudeep) ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೀಟರ್​​ ಇಲ್ವ ಯಾರಿಗೂ? ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ನೇರ ಪ್ರಶ್ನೆ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 17, 2026 6:57 PM

ವೀಕೆಂಡ್‌ ಬಂತು ಬಂದರೆ ಕಿಚ್ಚ ಸುದೀಪ್‌ಗೆ ಕಾಯುತ್ತಿರುತ್ತಾರೆ (Bigg Boss Kannada 13) ವೀಕ್ಷಕರು. ಕಳೆದ ವೀಕೆಂಡ್​​ನಲ್ಲಿ ಸುದೀಪ್ ಅವರು ಹಲವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್​​ಬಾಸ್​​ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ (Sudeep) ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರೂಲ್ಸ್‌ ಪದೇ ಪದೇ ಚೇಂಚ್‌

ಆಟ ರದ್ದಾಗಲು ಕಾರಣ ಏನು ಎಂದು ಸುದೀಪ್‌ ಪ್ರಶ್ನಿಸಿದರು. ಅದಕ್ಕೆ ಲಕ್ಷ್ಮೀ ಇದ್ದವರು ರೂಲ್ಸ್‌ ಪದೇ ಪದೇ ಚೇಂಚ್‌ ಮಾಡುತ್ತಲೇ ಇದ್ದರು ಎಂದಿದ್ದಾರೆ. ಬಿಗ್‌ ಬಾಸ್‌ ಟಾಸ್ಕ್‌ ರದ್ದಾದವರನ್ನು ಕ್ಯಾಪ್ಟನ್‌ ರೇಸ್‌ನಿಂದ ಹೊರಗಿಡಿ ಅಂತಾರೆ. ಪ್ರಶಾಂತ್‌ ಮತ್ತು ಆಸಿಯಾ ಅವರನ್ನ ಹೊರಗೆ ಇಟ್ಟಿದ್ದರು. ಇದಕ್ಕೆ ಕೋಪಗೊಂಡ ಸುದೀಪ್‌, ಒಂದು ಸೀಸನ್‌ನಲ್ಲಿ ಒಬ್ಬರು ಇಬ್ಬರು ದಡ್ಡ ಇದ್ದರೆ ಓಕೆ. ಆದರೆ ನಿಮ್ಮ ತಲೇಲಿ ಸ್ವಲ್ಪೂ ಬುದ್ದಿ ಇಲ್ವಾ> ಅವರು ಹೆಸರು ತೆಗೊಂಡ್ರೆ? ಇವರು ಹೆಸರು ತೆಗೊಂಡ್ರೆ ಅಂತೀರಲ್ವಾ? ಮೀಟರ್‌ ಇಲ್ವಾ? ಎಂದು ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ.

ಇದನ್ನೂ ಓದಿ: Malhar : ತನುಶ್ರೀ ದತ್ತಾ ವಿವಾದಾತ್ಮಕ ಆರೋಪಗಳಿಗೆ ನಾನಾ ಮಗ ತಿರುಗೇಟು

‘ಬಿಗ್‌ ಬಾಸ್‌ ಕನ್ನಡ ಸೀಸನ್-13’ರ ಶೋ ಆರನೇ ವಾರಕ್ಕೆ ಕಾಲಿಟ್ಟಿದೆ. ಗಗನ್‌ ಚಿನ್ನಪ್ಪ ಅವರು ಈ ವಾರದ ಕ್ಯಾಪ್ಟನ್ಶಿಪ್‌ ಟಾಸ್ಕ್‌ ಗೆದ್ದು, ನೂತನ ಕ್ಯಾಪ್ಟನ್‌ ಆಗಿದ್ದಾರೆ. ಟಾಸ್ಕ್‌ನಲ್ಲಿ ಗೆಲ್ಲಲು ಪ್ರತಿಯೊಬ್ಬರೂ ತಮ್ಮದೇ ಆದ ತಂತ್ರ ರೂಪಿಸೋದು ಸಹಜ.

ಇದನ್ನೂ ಓದಿ: Meesaya Murukku 2 : ಚೈತ್ರಾ ಆಚಾರ್ ನಟನೆಯ ಈ ತಮಿಳು ಮೂವಿ ಒಟಿಟಿಗೆ ಎಂಟ್ರಿ!

ಆದರೆ, ಗಾನವಿ ತಮ್ಮ ತಂಡದ ಆಟಗಾರರ ನಂಬಿಕೆಯನ್ನ ಗಳಿಸಿ, ಅಂತಿಮವಾಗಿ ಪವರ್‌ ಕಾಯಿನ್ಸ್ ವಿಚಾರದಲ್ಲಿ ಸ್ವಂತ ಲಾಭಕ್ಕಾಗಿ ತಂಡಕ್ಕೇ ಕೈಕೊಟ್ಟಿದ್ದಾರೆ. ಕೊನೆಯ ಕ್ಷಣದಲ್ಲಿ ಗಾನವಿ ತೋರಿದ ತಂತ್ರಗಾರಿಕೆ ಜೊತೆಗಿದ್ದ ಸ್ಪರ್ಧಿಗಳಿಗಷ್ಟೇ ಅಲ್ಲದೇ ವೀಕ್ಷಕರಿಗೂ ಶಾಕ್‌ ಕೊಟ್ಟಿದೆ.