ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare: 'ಅಮೃತಧಾರೆ'ಯ ಪ್ರೇಮ ಪರ್ವಕ್ಕೆ ಗೌತಮ್ - ಭೂಮಿಕಾನೇ ಮೇರು ಶಿಖರಗಳು!

Amruthadhaare: ಭೂಮಿ ಹಾಗೂ ಗೌತಮ್‌ ಈಗ ಸಂತೋಷದಲ್ಲಿ ಜೀವನ ಕಳೆಯಲು ಮುಂದಾಗಿದ್ದಾರೆ. ಅದ್ಯಾಕೋ ಏನೋ ಭೂಮಿಗೆ ಕೆಟ್ಟ ಆಲೋಚನೆ ಬಂದಿದೆ. ಎಲ್ಲ ಸರಿ ಆಗೋ ಹೊತ್ತಲ್ಲಿ ಇನ್ನೇನಾದರೂ ಸಮಸ್ಯೆ ಬರುತ್ತಾ ಅನ್ನೋ ಚಿಂತೆ ಭೂಮಿಯದ್ದು. ಅಮೃತಧಾರೆಯ ಇತ್ತೀಚಿನ ಸಂಚಿಕೆಗಳನ್ನ ನೋಡುತ್ತಿದ್ದರೆ ಈ ಧಾರಾವಾಹಿ ಮುಗಿಯುತ್ತಿದೆಯಾ ಎಂಬ ಅನುಮಾನವೂ ಕಾಡುತ್ತಿದೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ರೋಚಕ ಟ್ವಿಸ್ಟ್‌ ಪಡೆದು ಕಥೆ ಸಾಗುತ್ತಿದೆ. ಸೀರಿಯಲ್‌ ಅಂತಿಮ ಹಂತದ ಎಪಿಸೋಡ್‌ಗಳು ಪ್ರಸಾರವಾಗುತ್ತಿರುವಂತೆ ಕಾಣುತ್ತಿದೆ. ಗೌತಮ್‌ ದಿವಾನ್‌ಗೆ (Gowtham diwan) ಆರೋಗ್ಯ ಹಾಳಾಗಿದೆ ಎಂಬ ಎಳೆಯನ್ನೂ ತೆಗೆದುಕೊಂಡು ಕಥೆ ಮಾಡಲಾಗಿದೆ. ಆದರೆ ಈ ತಿರುವು ಅನೇಕರಿಗೆ ಇಷ್ಟವಾಗುತ್ತಿಲ್ಲ. ಇದೀಗ ಹೊಸ ಪ್ರೋಮೋದಲ್ಲಿಯೂ (New Promo) ಹೊಸ ಹಿಂಟ್‌ ಕೊಟ್ಟಂತಿದೆ.

ಭೂಮಿಯ ಚಿಂತೆ ಇದು!

ಹೌದು ಭೂಮಿ ಹಾಗೂ ಗೌತಮ್‌ ಈಗ ಸಂತೋಷದಲ್ಲಿ ಜೀವನ ಕಳೆಯಲು ಮುಂದಾಗಿದ್ದಾರೆ. ಅದ್ಯಾಕೋ ಏನೋ ಭೂಮಿಗೆ ಕೆಟ್ಟ ಆಲೋಚನೆ ಬಂದಿದೆ. ಎಲ್ಲ ಸರಿ ಆಗೋ ಹೊತ್ತಲ್ಲಿ ಇನ್ನೇನಾದರೂ ಸಮಸ್ಯೆ ಬರುತ್ತಾ ಅನ್ನೋ ಚಿಂತೆ ಭೂಮಿಯದ್ದು.

ಅಮೃತಧಾರೆಯ ಇತ್ತೀಚಿನ ಸಂಚಿಕೆಗಳನ್ನ ನೋಡುತ್ತಿದ್ದರೆ ಈ ಧಾರಾವಾಹಿ ಮುಗಿಯುತ್ತಿದೆಯಾ ಎಂಬ ಅನುಮಾನವೂ ಕಾಡುತ್ತಿದೆ. ಅನೇಕರು ಇದೇ ಮಾತನ್ನ ಹೇಳುತ್ತಿದ್ದಾರೆ. ಜೀ ಕನ್ನಡದಲ್ಲಿ ಹೊಸ ಧಾರಾವಾಹಿಗಳು ಬರಲು ಸಿದ್ಧವಾಗಿದ್ದು, ಅಮೃತಧಾರೆ ಮತ್ತು ಬ್ರಹ್ಮಗಂಟು ಸೀರಿಯಲ್‌ಗಳು ಮುಕ್ತಾಯಗೊಳ್ಳಬಹುದು ಎಂದು ವೀಕ್ಷಕರು ಅಂದಾಜು ಮಾಡುತ್ತಿದ್ದಾರೆ.

ಇದನ್ನೂ ಓದಿ: Kiara Advani: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ಇಂದೇ ರಿಲೀಸ್‌!

ಭೂಮಿಗೆ ಸರ್‌ಪ್ರೈಸ್‌ ಕೊಟ್ಟ ಗೌತಮ್‌

ಭೂಮಿಕಾ ಒಲವಿನಧಾರೆಗೆ ಪುಸ್ತಕ ರೂಪ ಕೊಟ್ಟು, ಸರ್‌ಪ್ರೈಸ್ ನೀಡಲು ಗೌತಮ್‌ ನಿರ್ಧಾರ ಮಾಡುತ್ತಾನೆ. ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಹರೀಶ್ ನಾಗರಾಜು, ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.

ಜೋಗಿ ಸರ್​ ಎಂದರೆ ಸೀರಿಯಲ್​​ನಲ್ಲಿ ಭೂಮಿಕಾಗೆ ಸಿಕ್ಕಾಪಟ್ಟೆ ಆಪ್ತರು. ಇದೇ ಕಾರಣಕ್ಕೆ ಈ ಹಿಂದೆಯೂ ಗೌತಮ್​ ಇವರನ್ನು ಪರಿಚಯ ಮಾಡಿಸಿ ಭೂಮಿಕಾಗೆ ಸರ್​ಪ್ರೈಸ್​ ನೀಡಿದ್ದರೆ, ಇದೀಗ ಅಮೃತಧಾರೆ ಪುಸ್ತಕದ ಬಿಡುಗಡೆಗೂ ಅವರನ್ನೇ ಆಹ್ವಾನಿಸಿರುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಗೌತಮ್​ಗೆ ಏನೋ ಕಾಯಿಲೆ ಇರುವಂತೆ ತೋರಿಸಲಾಗಿದೆ.



ಮತ್ತೆ ಕೇಡು ಬುದ್ದಿ ತೋರಿಸಿದ ಶಕುಂತಲಾ

ಮೂರನೇ ವ್ಯಕ್ತಿಯ ಮೂಲಕ ಮಗನಿಗೆ ಬೇಲ್ ಕೊಡಿಸುವಲ್ಲಿ ಶಕುಂತಲಾ ಸಕ್ಸಸ್ ಆಗಿದ್ದಾಳೆ. ಹಾಗೆಯೇ ಮನೆಯಿಂದ ಹೊರಗೆ ಜೈದೇವ್‌ನನ್ನು ಭೇಟಿಯಾಗಿದ್ದಾಳೆ. ಹಾಗೆಯೇ ತಾನು ಮಾಡುತ್ತಿರೋದೆಲ್ಲವೂ ನಾಟಕ ಎಂಬುದನ್ನು ಮಗನ ಮುಂದೆ ಶಕುಂತಲಾ ಹೇಳಿಕೊಂಡಿದ್ದಾಳೆ.

ಇನ್ನು ಅಮೃತಧಾರೆ ಸೀರಿಯಲ್‌ 2023ರ ಮೇ ತಿಂಗಳಿನಿಂದ ಪ್ರಸಾರವಾಗುತ್ತಿದೆ. ಈಗಾಗಲೇ 1002 ಸಂಚಿಕೆಗಳನ್ನ ಪೂರೈಸಿದೆ. ಧಾರಾವಾಹಿ ಮುಗಿಯುವ ಹಂತದಲ್ಲಿ ಇದೆ ಎಂಬುದು ಅನೇಕರ ಅಭಿಪ್ರಾಯ.

ಇನ್ನೊಂದೆಡೆ ಬ್ರಹ್ಮಗಂಟು ಕೂಡ ಕ್ಲೈಮ್ಯಾಕ್ಸ್‌ ಹಂತದಲ್ಲಿರುವಂತೆ ಕಾಣುತ್ತಿದೆ. ಜಗದ್ಧಾತ್ರಿ ದಿನಾಂಕ, ಸಮಯ ಇನ್ನೂ ಪ್ರಕಟಗೊಳ್ಳದ ಕಾರಣ, ಯಾವ ಧಾರಾವಾಹಿ ಮುಗಿಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Amruthadhaare Serial: ಮನದರಸಿ ಭೂಮಿಗೆ ಗೌತಮ್ ನಲ್ಮೆಯ ಉಡುಗೊರೆ!

ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author