Amruthadhaare Serial: ಮನದರಸಿ ಭೂಮಿಗೆ ಗೌತಮ್ ನಲ್ಮೆಯ ಉಡುಗೊರೆ!
Amruthadhaare Serial: ಭೂಮಿಕಾ ಒಲವಿನಧಾರೆಗೆ ಪುಸ್ತಕ ರೂಪ ಕೊಟ್ಟು, ಸರ್‌ಪ್ರೈಸ್ ನೀಡಲು ಗೌತಮ್ ನಿರ್ಧಾರ ಮಾಡುತ್ತಾನೆ. ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಹರೀಶ್ ನಾಗರಾಜು, ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.ಅಮೃತಧಾರೆ ಸೀರಿಯಲ್ನಲ್ಲಿ ಶಕುಂತಲಾ ಮತ್ತು ಜೈದೇವ್ ಸೇರಿ ಗೌತಮ್-ಭೂಮಿಕಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ವಿಶೇಷ ಸಂಚಿಕೆಗಳು ಮೂಡಿ ಬರಲಿವೆ. ಭೂಮಿಕಾಳ ಪ್ರೀತಿ ತುಂಬಿದ ಅಕ್ಷರಗಳಿಗೆ ಪುಸ್ತಕ ರೂಪ ನೀಡಲು ಗೌತಮ್ ದಿವಾನ್ (Gowtham Diwan) ನಿರ್ಧಾರ ಮಾಡಿದ್ದಾರೆ. ಅಮೃತಧಾರೆ ಸೀರಿಯಲ್ನಲ್ಲಿ ಶಕುಂತಲಾ ಮತ್ತು ಜೈದೇವ್ ಸೇರಿ ಗೌತಮ್-ಭೂಮಿಕಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ.
ತಂದೆ ಸದಾಶಿವ ಅವರು ಭೂಮಿಕಾಗೆ ಚಿಕ್ಕವಯಸ್ಸಿನಿಂದಲೂ ಬರವಣಿಗೆ ಮತ್ತು ಓದಿನ ಬಗೆಗೆ ಹೇಳಿಕೊಟ್ಟು, ಅಭ್ಯಾಸ ಮಾಡಿಸಿರುತ್ತಾರೆ. ಪ್ರತಿನಿತ್ಯ ತಮ್ಮ ಡೈರಿಯಲ್ಲಿ ಭೂಮಿ, ಆ ದಿನ ನಡೆದ ಘಟನೆ, ಆದ ಭೇಟಿ, ಕಂಡ ಕನಸುಗಳ ಬಗ್ಗೆ ಬರೆಯುವ ಅಭ್ಯಾಸ ಮಾಡಿರುತ್ತಾರೆ. ಇವರಿಗೆ ಅತ್ಯಂತ ಪ್ರಿಯವಾದ ಬರಹಗಾರರು ಅಂದ್ರೆ ‘ಜೋಗಿ’.
ಹೀಗಾಗಿ ಭೂಮಿಕಾ ಒಲವಿನಧಾರೆಗೆ ಪುಸ್ತಕ ರೂಪ ಕೊಟ್ಟು, ಸರ್‌ಪ್ರೈಸ್ ನೀಡಲು ಗೌತಮ್ ನಿರ್ಧಾರ ಮಾಡುತ್ತಾನೆ. ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಹರೀಶ್ ನಾಗರಾಜು, ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.
ಇದನ್ನೂ ಓದಿ: Rishab Shetty: ಡಿವೈನ್ ಸ್ಟಾರ್ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?
ಭೂಮಿಕಾಗೆ ಸರ್‌ಪ್ರೈಸ್
ಜೋಗಿ ಸರ್ ಎಂದರೆ ಸೀರಿಯಲ್ನಲ್ಲಿ ಭೂಮಿಕಾಗೆ ಸಿಕ್ಕಾಪಟ್ಟೆ ಆಪ್ತರು. ಇದೇ ಕಾರಣಕ್ಕೆ ಈ ಹಿಂದೆಯೂ ಗೌತಮ್ ಇವರನ್ನು ಪರಿಚಯ ಮಾಡಿಸಿ ಭೂಮಿಕಾಗೆ ಸರ್‌ಪ್ರೈಸ್ ನೀಡಿದ್ದರೆ, ಇದೀಗ ಅಮೃತಧಾರೆ ಪುಸ್ತಕದ ಬಿಡುಗಡೆಗೂ ಅವರನ್ನೇ ಆಹ್ವಾನಿಸಿರುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಗೌತಮ್ಗೆ ಏನೋ ಕಾಯಿಲೆ ಇರುವಂತೆ ತೋರಿಸಲಾಗಿದೆ.
ಆಫೀಸ್‌ನಲ್ಲಿ ಗೌತಮ್ ತಲೆ ಸುತ್ತಿ ಬಿದ್ದಿದ್ದಾನೆ. ಇದನ್ನು ನೋಡಿ ಆನಂದ್ ಚಿಂತಾಕ್ರಾಂತನಾಗಿದ್ದಾನೆ. ಈ ವಿಷಯವನ್ನು ಅವನು ಭೂಮಿಕಾಗೂ ಕೂಡ ತಿಳಿಸಿದ್ದಾನೆ. ಭೂಮಿಕಾ ಕೂಡ ಪತಿಯ ಆರೋಗ್ಯಕ್ಕೆ ಏನಾದರೂ ಆಗಿರಬಹುದಾ ಎಂದು ಅವಳು ಆಲೋಚನೆ ಮಾಡಿದ್ದಾಳೆ.
ಜನಪ್ರಿಯತೆ ಪಡೆದ ‘ಅಮೃತಧಾರೆ’ ಮುಕ್ತಾಯದ ಹಂತ ತಲುಪಿದೆ ಎನ್ನಲಾಗಿದೆ. ಈಗಾಗಲೇ 900ಸಂಚಿಕಗೆಳನ್ನ ಪೂರೈಸಿ, ಸಾವಿರದತ್ತ ಕಾಲಿಡುತ್ತಿರುವ ಧಾರಾವಾಹಿಗೆ ಶುಭಂ ಹೇಳುವ ಯೋಜನೆಯಲ್ಲಿದೆ ತಂಡ. ಈ ಜಾಗಕ್ಕೆ ಹೊಚ್ಚ ಹೊಸ ಧಾರಾವಾಹಿ ‘ಜಗದ್ದಾತ್ರಿ’ ಬರಲಿದೆ. ‘ಅಮೃತಧಾರೆ’ ಧಾರಾವಾಹಿಯ ನಿರ್ಮಾಪಕರಾದ ಮಹೇಶ್ ರಾವ್ ಅವರು ‘ಜಗದ್ದಾತ್ರಿ’ಗೆ ಬಂಡವಾಳ ಹಾಕಿದ್ದಾರೆ.
ಶಕುಂತಲಾ ಸಕ್ಸಸ್
ಮೂರನೇ ವ್ಯಕ್ತಿಯ ಮೂಲಕ ಮಗನಿಗೆ ಬೇಲ್ ಕೊಡಿಸುವಲ್ಲಿ ಶಕುಂತಲಾ ಸಕ್ಸಸ್ ಆಗಿದ್ದಾಳೆ. ಹಾಗೆಯೇ ಮನೆಯಿಂದ ಹೊರಗೆ ಜೈದೇವ್‌ನನ್ನು ಭೇಟಿಯಾಗಿದ್ದಾಳೆ. ಹಾಗೆಯೇ ತಾನು ಮಾಡುತ್ತಿರೋದೆಲ್ಲವೂ ನಾಟಕ ಎಂಬುದನ್ನು ಮಗನ ಮುಂದೆ ಶಕುಂತಲಾ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Gelathi Gayathri Promo: ವೈಷ್ಣವಿ ಗೌಡ ಹೊಸ ಧಾರಾವಾಹಿ ಪ್ರೋಮೋ ಔಟ್!
ಇದರಿಂದ ಇಷ್ಟುದಿನ ಟ್ವಿಸ್ಟ್ ಆಗಿ ಕಾಯುತ್ತಿದ್ದ ಸೀರಿಯಲ್ ವೀಕ್ಷಕರಿಗೆ ಖುಷಿ ಒಂದು ಕಡೆಯಾದ್ರೆ, ಸೀರಿಯಲ್ ಮುಗಿಯಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ