ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಸಿಂಹದ ಗರ್ಜನೆಗೆ ನರಿಗಳು ತತ್ತರ; ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಹಾಗೂ ಶಕುಂತಲಾ ಕುಟುಂಬ ಅಂತೂ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್‌ ಕುಟುಂಬ ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್‌ ಕೂಡ ಜೈದೇವ್‌ ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare seria) ಗೌತಮ್‌ ದಿವಾನ್‌ ಹಾಗೂ ಶಕುಂತಲಾ ಕುಟುಂಬ ಅಂತೂ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್‌ ಕುಟುಂಬ (Gowtham Family) ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್‌ ಕೂಡ ಜೈದೇವ್‌ (Jaidev) ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ.

ಸಿಂಹದ ಗರ್ಜನೆಗೆ ನರಿಗಳು ತತ್ತರ!

ಶಕುಂತಲಾ ಹಾಗೂ ಜೈದೇವ್‌ ದೇವಸ್ಥಾನಕ್ಕೆ ಬಂದೊಡನೆ ಗೌತಮ್‌ ನೋಡಿ ಗಾಬರಿಯಾಗಿದ್ದಾರೆ. ತಂದೆಯ ಕಾರ್ಯಕ್ಕೆ ಎರಡೂ ಕುಟುಂಬಗಳು ಸೇರಿವೆ. ಜೈದೇವ್‌ ಅಹಂಕಾರದಿಂದ ಪುರೋಹಿತರ ಬಳಿ, `ಅವರ ಕೆಲಸ ಬೇಗ ಮುಗಿಸಿ, ನಂತರ ನಮ್ಮದು ಕಾರ್ಯ ಮಾಡಿ' ಎಂದಿದ್ದಾನೆ. ಅದಕ್ಕೆ ಪುರೋಹಿತರು, `ಅಣ್ಣ ತಮ್ಮಂದಿರ ಮಧ್ಯೆ ಏನೇ ಬಿಕ್ಕಟ್ಟು ಇದ್ದರೂ ಇಂತಹ ಕೆಲಸದ ಸಮಯದಲ್ಲಿ ಒಂದಾಗಿ ಮಾಡಬೇಕು' ಅಂತ ಹೇಳುತ್ತಾರೆ.

ಇದನ್ನೂ ಓದಿ: Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

`ಇಬ್ಬರು ಒಂದಾಗಿ ತಂದೆ ಆತ್ಮಕ್ಕೆ ಶಾಂತಿ ಕೋರಿ' ಎಂದಿದ್ದಾರೆ. ಆದರೆ ಜೈದೇವ್‌ ಮಾತ್ರ ಈ ಮಾತುಗಳಿಗೆ ಬೆಲೆ ಕೊಡುವುದಿಲ್ಲ. `ನಾವು ಬೇರೆ ಆಗಿ ೫ ವರ್ಷಗಳು ಕಳೆದಿವೆ. ಬಾಡಿಂಗ್‌ ಏನಿಲ್ಲ' ಎಂದು ಪುರೋಹಿತರ ಬಾಯಿ ಮುಚ್ಚಿಸಿದ್ದಾನೆ. ಅಷ್ಟೇ ಅಲ್ಲ `ಹೇಳಿದಷ್ಟು ಮಾಡಬೇಕು' ಅಂತ ಅಬ್ಬರಿಸಿದ್ದಾನೆ.

ಜೈದೇವ್‌ ಅಬ್ಬರಕ್ಕೆ ಮನೆಮಂದಿ ಸೈಲೆಂಟ್‌ ಆಗಿದ್ದಾರೆ. ಜೈದೇವ್‌ ಅಹಂಕಾರಕ್ಕೆ ಗೌತಮ್‌ ಮಟ್ಟ ಹಾಕಬೇಕಿದೆ.

ಜೈದೇವ್‌ ಕಪಾಳಕ್ಕೆ ಬಾರಿಸಿದ ಗೌತಮ್‌

ಇದಾದ ಬಳಿಕ ತಂದೆಯ ಸಮಾಧಿಯ ಬಳಿ ಗೌತಮ್‌ ಬಂದು ಪೂಜೆ ಮಾಡುತ್ತಾನೆ. ಅಲ್ಲಿಯೂ ಬಂದು ಜೈದೇವ್‌ ಕೂಗಾಡುತ್ತಾನೆ.



ಇಲ್ಲಿ ಪೂಜೆ ಮಾಡೋ ಹಕ್ಕು ನನಗೆ ಮಾತ್ರ ಇದೆ. ಅಪ್ಪ ಅಂತೆ ಅಪ್ಪ ಇವನೂ ಒಬ್ಬ ಅಪ್ಪನಾ ಅಂತ ರೇಗಾಡಿದ್ದಾನೆ. ಜೈದೇವ್‌ ಹಾಗೇ ಹೇಳುತ್ತಲೇ ಗೌತಮ್‌ ಪಿತ್ತ ನೆತ್ತಿಗೇರಿದೆ. ಜೈದೇವ್‌ ಕಪಾಳಕ್ಕೆ ಬಾರಿಸುತ್ತಾನೆ. ನನಗೆ ಏನು ಬೇಕಾದರೂ ಅನ್ನು. ಆದರೆ ಅಪ್ಪನಿಗೆ ಗೌರವ ಕೊಡೋದು ಕಲಿತಿಕೋ ಅಂತ ಗೌತಮ್‌ ಜೈದೇವ್‌ ಮೇಲೆ ರೇಗಿದ್ದಾನೆ. ಒಟ್ಟಿನಲ್ಲಿ ಅಪ್ಪನ ತಿಥಿ ಕಾರ್ಯದಲ್ಲಿ ಸಹೋದರರು ಇಬ್ಬರೂ ಸಿಡಿದೆದ್ದಿದ್ದಾರೆ.

ಅಮ್ಮನ ಮಾತಿಗೆ ಬೆಲೆ ಕೊಟ್ಟು ಗೌತಮ್‌ ದಿವಾನ್‌ ಹೊಸ ಬ್ಯುಸಿನೆಸ್‌ ಶುರು ಮಾಡಬೇಕು ಅಂತ ನಿರ್ಧಾರ ಮಾಡಿದ್ದಾನೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸುತ್ತಿದ್ದಾನೆ. ಗೌತಮ್‌ನ ಸಾಮ್ರ್ಯಾಜ್ಯ ಜೈದೇವ್‌ ಕುತಂತ್ರದಿಂದ ಎಲ್ಲವೂ ಅವನ ಪಾಲಾಯ್ತು. ಅದೆಷ್ಟೋ ವರುಷ ಗೌತಮ್‌ ಹಾಗೂ ಭೂಮಿ ದೂರ ದೂರ ಇರೋ ಹಾಗಾಯ್ತು. ಆದರೆ ಈಗ ಹಾಗಲ್ಲ. ಭೂಮಿ ಗೌತಮ್‌ ಒಂದಾಗಿದ್ದಾರೆ. ಗೌತಮ್‌ ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಭೂಮಿ ಸಾಥ್‌ ಇದ್ದೆ ಇರುತ್ತದೆ.

ಇದನ್ನೂ ಓದಿ: Toxic Movie: ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author